ಬೆಂಗಳೂರು: ನಗರದ ಯಲಹಂಕ ವಾಯನೆಲೆಯಲ್ಲಿ ನಡೆದಿದ್ದ ಏರ್ ಕ್ರಾಫ್ಟ್ ದುರಂತ ಪ್ರಕರಣದಲ್ಲಿ ಗಾಯಗೊಂಡಿದ್ದ ಪೈಲಟ್ ವಿಜಯ್ ಅವರು ಸ್ಥಳೀಯರಿಗೆ ಧನ್ಯವಾದ ತಿಳಿಸಿದ್ದಾರೆ.
ಏರ್ ಶೋಗೆ ತಾಲೀಮು ನಡೆಸುವ ವೇಳೆ ಎರಡು ಸೂರ್ಯಕಿರಣ್ ಲಘು ವಿಮಾನ ಪರಸ್ಪರ ಡಿಕ್ಕಿಯಾಗಿ ಇಸ್ರೋ ಲೇಔಟ್‍ನಲ್ಲಿ ಕೆಳಗೆ ಬಿದ್ದಿದ್ದವು. ಈ ವೇಳೆ ಅಲ್ಲಿದ್ದ ಸ್ಥಳೀಯರಾದ ಚೇತನ್ ಮತ್ತು ಸ್ನೇಹಿತರು ಪೈಲಟ್ ವಿಜಯ್ ಅವರಿಗೆ ನೀರು ಕುಡಿಸಿ ಆರೈಕೆ ಮಾಡಿದ್ದರು. ಇದನ್ನು ಸ್ಮರಿಸಿಕೊಂಡ ಪೈಲಟ್ ವಿಜಯ್ ಅವರು ಶುಕ್ರವಾರ ಕಮಾಂಡೋ ಆಸ್ಪತ್ರೆಗೆ ಅವರನ್ನು ಬರಮಾಡಿಕೊಂಡು ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 2 ಸೂರ್ಯಕಿರಣ್ ಯುದ್ಧವಿಮಾನಗಳು ಡಿಕ್ಕಿ
Advertisement
Advertisement
ನಡೆದಿದ್ದೇನು?
ಏರ್ ಶೋ ಆರಂಭಗೊಳ್ಳುವ ಮುನ್ನ ದಿನವೇ ಭಾರತೀಯ ವಾಯುಸೇನೆಗೆ ಸೇರಿದ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡಿತ್ತು. ನಗರದ ಯಲಹಂಕದಲ್ಲಿ ಎರಡು ಸೂರ್ಯ ಕಿರಣ್ ವಿಮಾನಗಳು ಹಾರಾಟ ನಡೆಸುತ್ತಿದ್ದಾಗ ಪರಸ್ಪರ ಡಿಕ್ಕಿ ಹೊಡೆದುಕೊಂಡು ನೆಲಕ್ಕುರುಳಿದ್ದವು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv