ಪಾಟ್ನಾ: ಮುಂಬರುವ ಉಪಚುನಾವಣೆಯಲ್ಲಿ (By-elections) ಆರ್‌ಜೆಡಿ (RJD) ಅಭ್ಯರ್ಥಿ ನೀಲಮ್ ದೇವಿ ಪರ ಅಕ್ಟೋಬರ್ 27 ರಂದು ಮೊಕಾಮಾದಲ್ಲಿ ಪ್ರಚಾರ ನಡೆಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar Chief Minister Nitish Kumar) ಗೈರಾಗಬಹುದು.
#WATCH | Bihar CM Nitish Kumar shows his injuries received during the inspection of Chhath Ghat when his boat suffered an accident in Patna, earlier this month. pic.twitter.com/qd4H8pIfUk
— ANI (@ANI) October 26, 2022
Advertisement
ಅಕ್ಟೋಬರ್ 15 ರಂದು ಛತ್ ಪೂಜೆ (Chhath Puja) ಆಚರಣೆ ಕುರಿತಂತೆ ಗಂಗಾ ಘಾಟ್‍ನಲ್ಲಿ (Ganga Ghats) ಪರಿಶೀಲನೆ ನಡೆಸುತ್ತಿದ್ದಾಗ ನಿತೀಶ್ ಕುಮಾರ್ ಅವರ ಹೊಟ್ಟೆ ಮೇಲೆ ಗಾಯವಾಗಿರುವುದನ್ನು ತೋರಿಸಿದ್ದರು. ಹೀಗಾಗಿ ನವೆಂಬರ್ 3 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಆರ್‌ಜೆಡಿ ಅಭ್ಯರ್ಥಿ ನೀಲಮ್ ದೇವಿ (Neelam Devi ) ಪರ ಪ್ರಚಾರ ನಡೆಸಲು ಗೈರಾಗಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಡೀಲ್ ಮುಗಿಯುವ ಮುನ್ನವೇ ಟ್ವಿಟ್ಟರ್ ಚೀಫ್ ಎಂದು ಘೋಷಿಸಿಕೊಂಡ ಮಸ್ಕ್
Advertisement
Advertisement
ಗಂಗಾ ಘಾಟ್ ಅನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಗಂಗಾ ನದಿಯ ಸೇತುವೆಗೆ ಹಡುಗು ಡಿಕ್ಕಿ ಹೊಡೆದಿದ್ದು, ಈ ವೇಳೆ ನಿತೀಶ್ ಹೊಟ್ಟೆ ಮತ್ತು ಪಾದಕ್ಕೆ ಗಾಯಗೊಂಡಿದ್ದರು. ನಂತರ ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ನಿತೀಶ್ ಕುಮಾರ್ ಅವರು, ನನ್ನ ಹೊಟ್ಟೆಗೆ ಗಾಯವಾಗಿರುವಿದರಿಂದ ಸೀಟ್ ಬೆಲ್ಟ್ ಧರಿಸಲು ಸಾಧ್ಯವಾಗದೇ, ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳಲಾಗುತ್ತಿಲ್ಲ ಎಂದು ಹೇಳಿದ್ದರು.