ಕೋಲ್ಕತ್ತಾ: ಗಾಯಗೊಂಡಿದ್ದ ಚಿರತೆ ಫೋಟೋ ಕ್ಲಿಕ್ಕಿಸಲು ಹೋಗಿ ವ್ಯಕ್ತಿಯೊಬ್ಬ ಪಜೀತಿಗೆ ಸಿಲುಕಿದ ಘಟನೆ ಪಶ್ಚಿಮ ಬಂಗಾಳದ ಅಲಿಪುರ್‍ದುರ್ ಜಿಲ್ಲೆಯಲ್ಲಿ ನಡೆದಿದೆ.
ಚಿರತೆ ದಾಳಿಗೆ ಒಳಗಾದ ವ್ಯಕ್ತಿಯು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
#WATCH West Bengal: An injured leopard attacked a man who was clicking its pictures in Alipurduar. The man sustained minor injuries, leopard has been taken for treatment and will be released in the wild after it recovers. pic.twitter.com/Jok8UFNrWw
— ANI (@ANI) August 19, 2019
Advertisement
ಆಗಿದ್ದೇನು?:
ಗಾಯಗೊಂಡಿದ್ದ ಚಿರತೆಯು ರಸ್ತೆ ಬದಿಯ ಕಾಲುವೆಯಲ್ಲಿ ಮಲಗಿತ್ತು. ಅದನ್ನು ನೋಡಿದ್ದ ಬೈಕ್ ಸವಾರರು, ಪ್ರಯಾಣಿಕರು ಹಾಗೂ ಸ್ಥಳೀಯರು ಚಿರತೆಯ ಸಮೀಪ ಹೋಗಿದ್ದಾರೆ. ಕೆಲವರು ದೂರದಲ್ಲಿ ನಿಂತು ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದರು. ಆದರೆ ಇಬ್ಬರು ವ್ಯಕ್ತಿಗಳು ಚಿರತೆ ಹತ್ತಿರ ನಿಂತು ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದರು. ಆಗ ಏಕಾಏಕಿ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿತು. ಇದರಿಂದ ಗಾಬರಿಗೊಂಡ ಜನರು ಅಲ್ಲಿಂದ ಓಡಲು ಆರಂಭಿಸಿದರು.
Advertisement
ಚಿರತೆ ದಾಳಿಯಿಂದ ಸ್ವಲ್ಪ ಸಮಯದಲ್ಲೇ ತಪ್ಪಿಸಿಕೊಂಡ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತಕ್ಷಣವೇ ಆತನನ್ನು ಸ್ಥಳದಲ್ಲಿದ್ದ ಜನರು ಆಸ್ಪತ್ರೆಗೆ ಸಾಗಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.