ಗೋಣಿ ಚೀಲಕ್ಕೆ ಹಾಕಿ ಸಾಗಿಸಲಾಗಿದ್ದ ಕರುಗಳಿಗೆ ಪೊಲೀಸ್ ಠಾಣೆಯಲ್ಲಿ ಹಾಲು ಕುಡಿಸಿ ಆರೈಕೆ

Advertisements

ಚಿಕ್ಕಬಳ್ಳಾಪುರ: ಅಮಾನವೀಯವಾಗಿ ದುಷ್ಕರ್ಮಿಗಳಿಂದ ಸಾಗಿಸಲಾಗಿದ್ದ ಕರುಗಳನ್ನು ರಕ್ಷಿಸಲಾಗಿದ್ದು, ಅವುಗಳಿಗೆ ಪೊಲೀಸ್ ಠಾಣಾ ಸಿಬ್ಬಂದಿ ಹಾಲು ಕುಡಿಸಿ ಆರೈಕೆ ಮಾಡಿರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಪೊಲೀಸ್ ಸಿಬ್ಬಂದಿಯ ಕಾಳಜಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಶನಿವಾರ ಗೋಣಿ ಚೀಲದಲ್ಲಿ ತುಂಬಿದ 2 ಕರುಗಳನ್ನು ದ್ವಿಚಕ್ರ ವಾಹನದಲ್ಲಿ ದುಷ್ಕರ್ಮಿಗಳು ಅಮಾನವೀಯವಾಗಿ ಸಾಗಿಸುತ್ತಿದ್ದರು. ಅವುಗಳನ್ನು ಬಜರಂಗದಳದ ಕಾರ್ಯಕರ್ತರು ರಕ್ಷಿಸಿದ್ದರು. ಅಕ್ರಮ ಸಾಗಾಟದಲ್ಲಿ ರಕ್ಷಿಸಲಾಗಿದ್ದ ಕರುಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಸಿಬ್ಬಂದಿ ಹಾಲು ಕುಡಿಸಿ, ಆರೈಕೆ ಮಾಡಿದ್ದಾರೆ. ಇದನ್ನೂ ಓದಿ: ಮುನಿರತ್ನ, ಬೈರತಿ, ಗೋಪಾಲಯ್ಯ, ನಾಗೇಶ್ ಜನೋಪಯೋಗಿ ಮಂತ್ರಿಗಳು: ಬೊಮ್ಮಾಯಿ

Advertisements

ದೊಡ್ಡಬಳ್ಳಾಪುರದ ಭುವನೇಶ್ವರಿ ನಗರ 4ನೇ ಕ್ರಾಸ್ ಬಳಿ, ಗೌಡಹಳ್ಳಿ ಮೂಲಕ ಸುಮಾರು 5 ದಿನದ 2 ಕರುಗಳನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು ದುಷ್ಕರ್ಮಿಗಳು ಸಾಗಿಸುತ್ತಿದ್ದರು. ಇದನ್ನು ಕಂಡು ಅನುಮಾನಗೊಂಡ ಬಜರಂಗದಳದ ಕಾರ್ಯಕರ್ತರು ಹಾಗೂ ಸ್ಥಳೀಯರು ಬೈಕ್ ಅನ್ನು ತಡೆದು, ಚೀಲವನ್ನು ಬಿಚ್ಚಿದಾಗ ಕರುಗಳನ್ನು ಅಮಾನವೀಯವಾಗಿ ತುಂಬಿರುವುದು ಪತ್ತೆಯಾಗಿತ್ತು. ಇದನ್ನೂ ಓದಿ: ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಮಾಯಕರಲ್ಲ: ಸಿ.ಟಿ. ರವಿ

ಈ ಬಗ್ಗೆ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು, ಆರೋಪಿಗಳು ಹಾಗೂ ಕರುಗಳನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದಿದ್ದರು. ಇದೀಗ 6 ದಿನದ ಕರುಗಳಿಗೆ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಬಾಟಲ್ ಮೂಲಕ ಹಾಲು ಕುಡಿಸಿ, ಆರೈಕೆ ಮಾಡುತ್ತಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.

Live Tv

Advertisements
Exit mobile version