ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಅಮಾನವೀಯ ಕೃತ್ಯವೊಂದು ನಡೆದಿದ್ದು, ತಾಯಿಯೊಬ್ಬಳು (Mother) ತನ್ನ 3 ವರ್ಷದ ಮಗುವಿನ (Child) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಎರಡು ವಾರಗಳ ಬಳಿಕ ಬೆಳಕಿಗೆ ಬಂದಿದೆ.
ಬೆಂಗಳೂರಿನ ಗಿರಿನಗರದ (Girinagar) ವೀರಭದ್ರೇಶ್ವರ ನಗರದಲ್ಲಿ ನಡೆದಿದೆ ಎನ್ನಲಾದ ವೀಡಿಯೋವೊಂದು ವೈರಲ್ ಆಗಿದ್ದು, ಪುಟ್ಟ ಕಂದಮ್ಮನ ಮೇಲೆ ಪಾಪಿ ತಾಯಿ ಹಲ್ಲೆ ನಡೆಸಿದ್ದಾಳೆ. ಹಲ್ಲೆ ನಡೆಸಿದ ಪರಿಣಾಮ ಮಗುವಿನ ದೇಹದ ತುಂಬೆಲ್ಲಾ ಗಾಯದ ಗುರುತುಗಳಾಗಿದೆ. ತಾಯಿ ಕೆಲಸಕ್ಕೆ ಹೋಗುತ್ತಿದ್ದು, ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಬೀಗ ಹಾಕಿ ಹೋದರೆ ರಾತ್ರಿ ಬರೋವರೆಗೂ ಮಗುವನ್ನು ಕೂಡಿ ಹಾಕಿರುತ್ತಿದ್ದಳು. ಅಲ್ಲದೇ ಮಗುವಿನ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾಳೆ. ಇದನ್ನೂ ಓದಿ: ಪಾತಾಳಕ್ಕೆ ಕುಸಿದ ಟೊಮೆಟೊ ಬೆಲೆ – ಬೇಸತ್ತು ಜಮೀನಿಗೆ ಕುರಿ ಬಿಟ್ಟು ಮೇಯಿಸಿದ ರೈತರು
Advertisement
Advertisement
ಈ ಘಟನೆ ಎರಡು ವಾರಗಳ ಹಿಂದೆ ನಡೆದಿದೆ ಎನ್ನಲಾಗುತ್ತಿದೆ. ಕೆಲಸ ಹುಡುಕುವಾಗ ತಾಯಿ ತನ್ನ ಮಗುವನ್ನು ಮನೆಯಲ್ಲೇ ಕೂಡಿಹಾಕಿದ್ದಾಳೆ. ಈ ಕುರಿತು ಮಗುವಿನ ತಾಯಿಯನ್ನು ಪ್ರಶ್ನಿಸಿದಾಗ, ತಾನು ಗಂಡನ ಜೊತೆ ವಾಸ ಮಾಡುತ್ತಿಲ್ಲ. ಹಣಕಾಸಿನ ತೊಂದರೆಯಿಂದ ಮಗುವನ್ನು ಕೂಡಿಹಾಕಿ ಕೆಲಸ ಹುಡುಕುತ್ತಿರುವುದಾಗಿ ಹೇಳಿದ್ದಾಳೆ. ಇದನ್ನೂ ಓದಿ: ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿ – ತಪ್ಪಿದ ಅನಾಹುತ
Advertisement
ಮಧ್ಯಾಹ್ನ ಮಗುವಿಗೆ ಊಟ ಕೊಡಲು ಮಹಿಳೆಯ ಫ್ರೆಂಡ್ ಮನೆಗೆ ಬರುತ್ತಿದ್ದು, ಸದ್ಯ ಈ ಬಗ್ಗೆ ಮಗುವಿನ ತಾಯಿಯನ್ನು ಕರೆಸಿ ಪೊಲೀಸರು ಬುದ್ದಿವಾದ ಹೇಳಿದ್ದಾರೆ. ಅಲ್ಲದೇ ಮಗುವನ್ನು ಮಕ್ಕಳ ಆಯೋಗದ ಸುಪರ್ದಿಗೆ ಒಪ್ಪಿಸಿದ್ದಾರೆ. ಗಂಡ, ಹೆಂಡತಿ ಇಬ್ಬರೂ ಬಂದು ಕೌನ್ಸಿಲಿಂಗ್‌ಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ. ಗಂಡ-ಹೆಂಡತಿ ಇಬ್ಬರೂ ಬಂದು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದರಷ್ಟೇ ಮಗು ನೀಡುವುದಾಗಿ ಮಕ್ಕಳ ಆಯೋಗ ಹೇಳಿದೆ. ಸದ್ಯ ಹಲ್ಲೆಗೊಳಗಾಗಿರುವ ಮಗು ಮಕ್ಕಳ ಆಯೋಗದ ರಕ್ಷಣೆಯಲ್ಲಿದೆ. ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಇದನ್ನೂ ಓದಿ: ಶಂಕಿತ ಉಗ್ರನ ಜಾಡು ಪತ್ತೆ ಹಚ್ಚಲು BMRCL ಮೊರೆ ಹೋದ ಪೊಲೀಸರು
Advertisement
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗವೇಣಿ ಮಗುವಿನ ರಕ್ಷಣೆ ಮಾಡಿದ್ದು, ಸದ್ಯ ಶಿಶು ಮಂದಿರದಲ್ಲಿ ಮಗುವಿನ ಪಾಲನೆ ಮಾಡಲಾಗುತ್ತಿದೆ. ಕೌನ್ಸಿಲಿಂಗ್ ವೇಳೆ ತಾಯಿ ಜೊತೆ ಹೋಗಲು ಮಗು ನಿರಾಕರಿಸಿದ್ದು, ನಾಳೆ ಮತ್ತೊಂದು ಸುತ್ತಿನ ಕೌನ್ಸಿಲಿಂಗ್‌ಗಾಗಿ ಮಕ್ಕಳ ಕಲ್ಯಾಣ ಸಮಿತಿ ತಾಯಿಗೆ ನೋಟಿಸ್ ನೀಡಿದೆ. ಇದನ್ನೂ ಓದಿ: ಬೆಲ್ಟ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಈ ಅಮಾನವೀಯ ಕೃತ್ಯದಿಂದ ಆಕ್ರೋಶಗೊಂಡ ಸ್ಥಳೀಯರು ಮಗುವಿದ್ದ ಮನೆಯ ಮುಂದೆ ಜಮಾಯಿಸಿದ್ದು, ತಾಯಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಾಯಿಯ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದು, ಮಗು ಕಿಟಕಿಯೊಳಗೆ ಊಟ ಕೇಳುತ್ತಿತ್ತು. ಮೈಮೇಲೆ ಗಾಯಗಳಾಗಿತ್ತು. ಕುಕ್ಕರ್‌ನಿಂದ ಹೊಡೆದಿದ್ದಾರೆ ಎಂದು ಮಗು ಹೇಳಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ಕೊಟ್ಟೆವು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಸದ ರಮೇಶ್ ಜಿಗಜಿಣಗಿ ಆಸ್ಪತ್ರೆಗೆ ದಾಖಲು – ಐಸಿಯುನಲ್ಲಿ ಚಿಕಿತ್ಸೆ
ಮಗುವಿನ ಜೊತೆ ತಾಯಿ ಮತ್ತು ವ್ಯಕ್ತಿಯೊಬ್ಬ ಇದ್ದ. ಸಮೀಪದ ನಿವಾಸಿಗಳಿಗೆ ಮಗುವಿನ ತಾಯಿ ಇವನು ನನ್ನ ಸಹೋದರ ಎಂದು ಹೇಳಿದ್ದ. ಆದರೆ ಈ ಘಟನೆಯ ನಂತರ ಆ ವ್ಯಕ್ತಿ ಸಹೋದರನಲ್ಲ. ಆತ ಈಕೆಯ ಸ್ನೇಹಿತ ಎಂಬ ವಿಚಾರ ತಿಳಿಯಿತು ಎಂದು ತಿಳಿಸಿದ್ದಾರೆ. ಇನ್ನ ಈ ಕುರಿತು ತಾಯಿ ಶಾರೀನ್ ಪ್ರತಿಕ್ರಿಯಿಸಿದ್ದು, ಮಗುವಿಗೆ ಸಾಯೋ ಪರಿಸ್ಥಿತಿ ತಂದಿಲ್ಲ. ಮಗುವಿನ ಮೇಲೆ ಕುಕ್ಕರ್‌ನಿಂದ ಹಲ್ಲೆ ಮಾಡಿಲ್ಲ. ಬುದ್ಧಿ ಕಲಿಲಿ ಅಂತ ಆಗಾಗ ಹೊಡೆದಿದ್ದೇನೆ. ಮಗು ಬೆಳೆದಿದ್ದು ಬೇರೆ ಕಡೆ. ಬುದ್ಧಿವಾದ ಹೇಳಿದಾಗ ನೀನು ಬೇಡ ಅಂತಿದ್ದ. ಊಟ ಕೊಡುತ್ತಿರಲಿಲ್ಲ ಅನ್ನೊದು ಬಹಳ ತಪ್ಪು ಎಂದಿದ್ದಾಳೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಸಿಲ್ಲಿ ಪ್ರಕರಣ: ಶರಣ ಪ್ರಕಾಶ್ ಪಾಟೀಲ್
ಬಾಡಿಗೆ ಮನೆಗೆ ಬಂದು 15 ದಿನ ಆಯಿತು. ಮಗ 4-5 ತಿಂಗಳು ನನ್ನ ಜೊತೆ ಇದ್ದ. ಬರ್ತಾ ಬರ್ತಾ ಅಮ್ಮನೇ ಬೇಡ ಅಂತಿದ್ದ. ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮಗು ಇದೆ. ಮಗು ನನಗೆ ಸದ್ಯಕ್ಕೆ ಬೇಡ. ನನ್ನ ಪತಿಯೇ ಇಟ್ಟುಕೊಂಡಿರಲಿ. ನನ್ನ ಪತಿಗೆ ಮಾಹಿತಿ ಕೊಟ್ಟಿದ್ದೇನೆ. ಸದ್ಯ ಮಗುವನ್ನು ನೋಡಿಕೊಳ್ಳಲು ಆಗಲ್ಲ, ನೀನು ನೋಡಿಕೊಳ್ಳುತ್ತೀಯಾ ಎಂದು ಕೇಳಿದ್ದೇನೆ. ಇದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ಪೊಲೀಸರಿಗೆ ಯಾಮಾರಿಸಲು ಶರ್ಟ್, ಪ್ಯಾಂಟ್ ಬದಲಿಸಿ ಹೋದ ಶಂಕಿತ