ಬೆಂಗಳೂರು: ಕೃಷ್ಣ ನ್ಯಾಯಾಧಿಕರಣ ಸಭೆ ಹಿನ್ನೆಲೆಯಲ್ಲಿ ಮೇ 7ರಂದು ದೆಹಲಿಗೆ ತೆರಳುತ್ತಿದ್ದು, ನಮ್ಮ ಹಕ್ಕೋತ್ತಾಯವನ್ನು ನ್ಯಾಯಾಧೀಕರಣದ ಮುಂದೆ ಮಂಡಿಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ತಿಳಿಸಿದರು.ಇದನ್ನೂ ಓದಿ: ಕೂದಲೆಳೆ ಅಂತರದಲ್ಲಿ ಪಾರಾದ DMK MP ರಾಜಾ
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು, ಸಿಎಂ ಸೇರಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಚರ್ಚೆ ಮಾಡಿದ್ದೇವೆ. ನಮ್ಮ ನಿಲುವು ಏನು ಆಗಿರಬೇಕು ಎಂದು ವರದಿ ಕೊಡಲು ನಮ್ಮ ಲೀಗಲ್ ಟೀಂಗೆ ಹೇಳಿದ್ದೇವೆ. ಇಂದು ಅಥವಾ ನಾಳೆಯೊಳಗೆ ಲೀಗಲ್ ಟೀಂ ನಮಗೆ ಅಭಿಪ್ರಾಯ ಕೊಡುತ್ತಾರೆ. ಇದನ್ನೇ ನಾವು ದೆಹಲಿಯಲ್ಲಿ ಮಂಡನೆ ಮಾಡುತ್ತೇವೆ. 524 ಮೀ.ಗೆ ತೆಗೆದುಕೊಂಡು ಹೋಗಬೇಕು ಎಂದು ನಮ್ಮ ಬದ್ಧತೆ ಇದೆ. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಶುರು ಮಾಡಿದ್ದೇವೆ. ನಾವು ಎಲ್ಲಾ ತರದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಆಂಧ್ರ, ತೆಲಂಗಾಣಕ್ಕೆ 13 ಟಿಎಂಸಿ ಲಾಭ ಆಗುತ್ತದೆ ಎಂಬ ವಿಶ್ಲೇಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆ ಎಷ್ಟಾದರೂ ಲಾಭ ಆಗಲಿ ಅಥವಾ ನಷ್ಟ ಆಗಲಿ. ನಮಗೆ ಎಷ್ಟಾದರೂ ಲಾಭ ಆಗಲಿ ಅಥವಾ ನಷ್ಟ ಆಗಲಿ. 524 ಮೀ.ವರೆಗೂ ನಾವು ಕಟ್ಟಬೇಕು. ಅದಕ್ಕೆ ಎಷ್ಟು ಬೇಕೋ ಅಷ್ಟು ನಾವು ಪ್ರಯತ್ನ ಮಾಡುತ್ತೇವೆ. ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ: ಶಾಮನೂರು ಶಿವಶಂಕರಪ್ಪ, ಎಂಬಿ ಪಾಟೀಲ್‌ಗೆ ಬಸವಣ್ಣನವರ ಹೆಸರು ಹೇಳುವ ಯೋಗ್ಯತೆ ಇಲ್ಲ – ಮಾವಳ್ಳಿ ಶಂಕರ್