KolarLatestLeading NewsMain Post

ಅಳಿಯನಿಗೆ ನಮ್ಮ ಆಶೀರ್ವಾದ ಇರುತ್ತೆ; ವಿವಾದಗಳ ಬಗ್ಗೆ ಮಾತನಾಡಲ್ಲ – ಕೋಲಾರಮ್ಮ ದರ್ಶನ ಪಡೆದ ಸುಧಾಮೂರ್ತಿ ಮಾತು

ಕೋಲಾರ: ಶಕ್ತಿ ದೇವತೆ ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಿದ ಇನ್ಫೋಸಿಸ್ (Infosys) ಮುಖ್ಯಸ್ಥೆ ಸುಧಾಮೂರ್ತಿ (Sudha Murthy) ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ಸಂಬಂಧಿಕರ ಮದುವೆಗೆ ಕೋಲಾರಕ್ಕೆ ಆಗಮಿಸಿದ್ದ ವೇಳೆ ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಿದ ಸುಧಾಮೂರ್ತಿ, ದೇವಿಯ ದರ್ಶನ ಪಡೆದು ಬೆಂಗಳೂರಿನತ್ತ ತೆರಳಿದರು. ಇದನ್ನೂ ಓದಿ: ಸಣ್ಣ ಫ್ಲಾಟ್‌ನಲ್ಲಿ ಇರ್ತಾರಂತೆ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌

ದೇವರ ದರ್ಶನದ ನಂತರ ಮಾತನಾಡಿದ ಅವರು, ಕೋಲಾರಕ್ಕೆ ಭೇಟಿ ಕೊಟ್ಟಾಗ ಕೋಲಾರಮ್ಮೆ ದೇವಾಲಯಕ್ಕೆ ಬರೋದು ವಾಡಿಕೆ. ಅದರಂತೆ ಇಂದು ದೇವಿಯ ದರ್ಶನ ಪಡೆದಿದ್ದೇನೆ. ಬಹಳ ನೆಮ್ಮದಿಯಾಯ್ತು. ದೇವಿಯ ದರ್ಶನ ಪಡೆದಿದ್ದು ಖುಷಿಯಾಯ್ತು. ಬಹಳ ಚೆನ್ನಾಗಿ ಅಭಿವೃದ್ಧಿ ಮಾಡಲಾಗಿದೆ. ನಮ್ಮದಿಯ ವಾತಾವರಣ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

ಅಲ್ಲದೇ, ಅಳಿಯ ರಿಷಿ ಸುನಾಕ್ ಬ್ರಿಟನ್ ಪ್ರಧಾನಿಯಾದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಳಿಯನಿಗೆ ನಮ್ಮ ಆಶೀರ್ವಾದ ಇದ್ದೆ ಇರುತ್ತೆ. ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿರುವ ವಿವಾದ ವಿಚಾರ ಮಾತನಾಡುವುದು ಬೇಡ ಎಂದು ತಿಳಿಸಿದರು. ಇದನ್ನೂ ಓದಿ: ಶಿವಮೊಗ್ಗ ಪಾಲಿಕೆ ಮೇಯರ್ ಶಿವಕುಮಾರ್, ಉಪ ಮೇಯರ್ ಆಗಿ ಲಕ್ಷ್ಮೀ ಶಂಕರನಾಯ್ಕ್ ಆಯ್ಕೆ

Live Tv

Leave a Reply

Your email address will not be published. Required fields are marked *

Back to top button