ಬಾಗಲಕೋಟೆ: ಜಿಲ್ಲೆಯ ಬನಶಂಕರಿ ದೇವಸ್ಥಾನಕ್ಕೆ ಬಂದಿದ್ದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರ ಸರಳತೆಯನ್ನು ಕಂಡು ವಿದ್ಯಾರ್ಥಿಗಳು ಅಚ್ಚರಿಗೊಂಡಿದ್ದಾರೆ.
ಇತ್ತೀಚೆಗಷ್ಟೇ ಬಾಗಲಕೋಟೆ ಜಿಲ್ಲೆ ಬಾದಾಮಿಯ ಬನಶಂಕರಿ ದೇವಸ್ಥಾನ ಸುಧಾಮೂರ್ತಿ ಭೇಟಿ ನೀಡಿದ್ದರು. ಅಲ್ಲಿ ಸಾಮಾನ್ಯ ಭಕ್ತರಂತೆ ಭೇಟಿ ನೀಡಿದ್ದ ಸುಧಾ ಮೂರ್ತಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸುಧಾಮೂರ್ತಿ ಸಾಮನ್ಯರಂತೆ ದೇವಿಯ ದರ್ಶನ ಪಡೆದು ಪೂಜಾ ಕಾರ್ಯ ಮುಗಿಸಿ ದೇಗುಲಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದರು. ಅವರ ಸರಳತೆಯನ್ನು ನೋಡಿ ಅಲ್ಲಿದ್ದ ಅನೇಕರು ಸುಧಾಮೂರ್ತಿ ಅವರನ್ನು ಗುರುತಿಸಿರಲಿಲ್ಲ.
Advertisement
Advertisement
ಆ ವೇಳೆ ದೇಗುಲಕ್ಕೆ ಸಿಂದಗಿ ಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಂದಿದ್ದರು. ಅವರ ಜೊತೆಗಿದ್ದ ಶಿಕ್ಷಕರು ಸುಧಾಮೂರ್ತಿ ಬಂದಿರುವ ವಿಷಯವನ್ನು ಮಕ್ಕಳಿಗೆ ತಿಳಿಸಿದ್ದರು. ಆ ವಿದ್ಯಾರ್ಥಿಗಳೆಲ್ಲರೂ ಸುಧಾಮೂರ್ತಿಯ ಸರಳತೆಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಜೊತೆಗೆ ಅವರನ್ನು ಮಾತನಾಡಿಸಿದ್ದಾರೆ. ಇದನ್ನೂ ಓದಿ: 2 ವರ್ಷಗಳ ಬಳಿಕದ ದಾಖಲೆ – ಅಕ್ಷಯ ತೃತೀಯದಂದು ಭರ್ಜರಿ ಸೇಲ್
Advertisement
Advertisement
ನಂತರ ಸುಧಾಮೂರ್ತಿ ಮಕ್ಕಳ ಜೊತೆ ದೇಗುಲ ಆವರಣದಲ್ಲಿ ಕುಳಿತು, ಕೆಲಕಾಲ ಕ್ಷೇಮ ಸಮಾಚಾರ ವಿಚಾರಿಸಿದ್ದಾರೆ. ಮಕ್ಕಳ ಜೊತೆ ಮಕ್ಕಳಾದ ಸುಧಾಮೂರ್ತಿ ಎಲ್ಲರ ಮೆಚ್ಚುಗೆಗೆ ಪಾತ್ರಾರಾಗಿದ್ದಾರೆ. ಫೋಟೊ ತೆಗೆಸಿಕೊಳ್ಳಲು ಮುಂದಾದ ಮಕ್ಕಳ ಜೊತೆ ಸುಧಾಮೂರ್ತಿ ಅವರು ಫೋಟೊ ತೆಗೆಸಿಕೊಂಡಿದ್ದಾರೆ. ಇದನ್ನೂ ಓದಿ: ಉಷ್ಣಾಂಶ ಏರಿಕೆ – ಏಪ್ರಿಲ್‌ನಲ್ಲಿ ಎಸಿ ಸಾರ್ವಕಾಲಿಕ ಗರಿಷ್ಠ ಮಾರಾಟ