ನವದೆಹಲಿ: ಭಾರತೀಯ ಐಟಿ ಕ್ಷೇತ್ರಗಳಲ್ಲಿ ಪ್ರಮುಖವಾದ ಇನ್ಫೋಸಿಸ್ (Infosys) ಕಂಪನಿಯ ಅಧ್ಯಕ್ಷ ರವಿಕುಮಾರ್. ಎಸ್ (Ravi Kumar. S) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಂಪನಿಗೆ ರವಿ ಕುಮಾರ್.ಎಸ್ ಅವರು ಸಲ್ಲಿಸಿದ ಸೇವೆ ಹಾಗೂ ಕೊಡುಗೆಗಳಿಗೆ ನಿರ್ದೇಶಕರ ಮಂಡಳಿಯು ಮೆಚ್ಚುಗೆ ವ್ಯಕ್ತಪಡಿಸಿದೆ. ರವಿ ಕುಮಾರ್ ಅವರು ಕಂಪನಿಯಿಂದ ನಿರ್ಗಮನವಾಗುತ್ತಿರುವುದಕ್ಕೆ ಕಾರಣವೇನು ಎಂಬುವುದರ ಬಗ್ಗೆ ಯಾವುದೇ ಮಾಹಿತಿಯನ್ನು ಸದ್ಯಕ್ಕೆ ತಿಳಿಸಿಲ್ಲ. ಇದನ್ನೂ ಓದಿ: ನಾಳೆಯಿಂದ ಓಲಾ, ಊಬರ್ ಆಟೋ ಬಂದ್- ಸರ್ಕಾರದಿಂದಲೇ ಆಟೋ ದರ ನಿಗದಿ
Advertisement
Advertisement
ರವಿ ಕುಮಾರ್ ಅವರು ಐಟಿ ಸೇವೆಗಳ ಕಂಪನಿಯ ಅಧ್ಯಕ್ಷರಾಗಿ, ಎಲ್ಲಾ ಉದ್ಯಮ ವಿಭಾಗಗಳಲ್ಲಿ ಇನ್ಫೋಸಿಸ್ ಗ್ಲೋಬಲ್ ಸರ್ವಿಸಸ್ ಆರ್ಗನೈಸೇಷನ್ ಅನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ನೀಡಿದ ಸಲಹೆ, ತಂತ್ರಜ್ಞಾನ, ಮೂಲಸೌಕರ್ಯ, ಎಂಜಿನಿಯರಿಂಗ್ ಎಲ್ಲದನ್ನು ನಿಭಾಯಿಸುವುದರ ಜೊತೆಗೆ ಡಿಜಿಟಲ್ ಮಾರ್ಕೆಟಿಂಗ್ ಅನ್ನು ಕೂಡ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದರು.
Advertisement
ಇನ್ಫೋಸಿಸ್ ಕಾರ್ಯನಿರ್ವಾಹಕ ಮಂಡಳಿಯ ಭಾಗವಾಗಿ ಕಂಪನಿಯನ್ನು ಮುನ್ನಡೆಸುವಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. 2016 ರಲ್ಲಿ ಇನ್ಫೋಸಿಸ್ ಅಧ್ಯಕ್ಷರಾಗಿ ನೇಮಕಗೊಳ್ಳುವ ಮುನ್ನ ವಿಮೆ ಮತ್ತು ಪಾವತಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇದನ್ನೂ ಓದಿ: ಕುಲದೀಪ್ ಬೌಲಿಂಗ್ ಮಿಂಚು, ಸುಲಭದಲ್ಲಿ ಸರಣಿ ಗೆಲುವು – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ
Advertisement
ಇನ್ಫೋಸಿಸ್‍ನ ಎಫ್‍ವೈ22 ವಾರ್ಷಿಕ ವರದಿಯ ಪ್ರಕಾರ, ಸಿಇಒ ಸಲೀಲ್ ಪರೇಖ್ ಮತ್ತು ಮಾಜಿ ಸಿಒಒ ಯುಬಿ ಪ್ರವೀಣ್ ರಾವ್ ನಂತರ ರವಿ ಕುಮಾರ್ ಅವರು ಅತಿ ಹೆಚ್ಚು ಸಂಭಾವನೆ ಪಡೆತ್ತಿದ್ದ ಮೂರನೇ ವ್ಯಕ್ತಿಯಾಗಿದ್ದರು.