ಕುಟುಂಬದೊಂದಿಗೆ ಸಮಯ ಕಳೆದು ಸರಳವಾಗಿ ಹುಟ್ಟುಹಬ್ಬ ಆಚರಿಸಿದ ನಾರಾಯಣ ಮೂರ್ತಿ

Public TV
1 Min Read
narayanamurthy

ಬೆಂಗಳೂರು: ಪರಿಶ್ರಮ ಹಾಗೂ ಸರಳತೆ ಮೂಲಕ ಇತರರಿಗೆ ಮಾದರಿಯಾಗಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು ಹುಟ್ಟುಹಬ್ಬದ ಆಚರಣೆಯಲ್ಲಿಯೂ ಸರಳತೆ ಮೆರೆದಿದ್ದು, ಹುಟ್ಟುಹಬ್ಬದ ದಿನದಂದು ಕುಟುಂಬದೊಂದಿಗೆ ಮಾತ್ರ ಕಾಲ ಕಳೆಯುತ್ತೇನೆ ಯಾವುದೇ ಸಂಭ್ರಮಾಚರಣೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಐಟಿ ಕ್ಷೇತ್ರದ ದಿಗ್ಗಜ ಎನ್.ಆರ್.ನಾರಾಯಣ ಮೂರ್ತಿ ಅವರು 74ನೇ ವಸಂತಕ್ಕೆ ಕಾಲಿಟ್ಟಿದ್ದು, ಮಂಗಳವಾರ ತಮ್ಮ ಹುಟ್ಟುಹಬ್ಬದ ದಿನದಂದು ದಿನ ನಿತ್ಯದಂತೆ ಆಫೀಸ್‍ನಲ್ಲಿ ಕೆಲಸ ಮಾಡಿ, ನಂತರ ಕುಟುಂಬದೊಂದಿಗೆ ಸಮಯ ಕಳೆಯುವ ಮೂಲಕ ಹುಟ್ಟಿದ ದಿನವನ್ನು ಸಂಭ್ರಮಿಸಿದ್ದಾರೆ.

Narayana Murthy family

ಇದೀಗ ಸಂಜೆ 5.30 ಆದರೂ ನನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂತಹ ಇಳಿ ವಯಸ್ಸಿನಲ್ಲಿ ಹುಟ್ಟುಹಬ್ಬವನ್ನು ನಾನು ದೊಡ್ಡ ವಿಷಯವೆಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. ಹುಟ್ಟುಹಬ್ಬವನ್ನು ಸಮಾರಂಭದ ರೀತಿ ಆಚರಿಸುವುದಿಲ್ಲ. ಅಷ್ಟೇ ಅಲ್ಲದೇ ಅದಕ್ಕೆ ಜಾಸ್ತಿ ಮಹತ್ವ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಬಿಡುವಿನ ಸಮಯದಲ್ಲಿ ಹೆಚ್ಚು ಪುಸ್ತಕಗಳನ್ನು ಓದಲು ಇಷ್ಟಪಡುತ್ತೇನೆ. ಅಲ್ಲದೆ, ವೆಸ್ಟರ್ನ್ ಕ್ಲಾಸಿಕಲ್ ಮ್ಯೂಸಿಕ್ (ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ) ಕೇಳುತ್ತೇನೆ. ಬೀಥೋವೆನ್ ಹಾಗೂ ಫ್ರಾಂಜ್ ಶುಬರ್ಟ್ ಅವರ ಗೀತೆಗಳು ನನಗೆ ಅಚ್ಚುಮೆಚ್ಚು. ಸ್ನೇಹಿತರೊಂದಿಗೆ ಕಾಲ ಕಳೆಯಲು ಹೆಚ್ಚು ಇಷ್ಟಪಡುತ್ತೇನೆ. ಅಲ್ಲದೆ, ಸ್ನೇಹಿತರನ್ನು ಭೇಟಿಯಾದಾಗಲೆಲ್ಲ ತಂತ್ರಜ್ಞಾನ ಆಧಾರಿತ ವಿಷಯಗಳ ಕುರಿತು ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *