ಬೆಂಗಳೂರು: ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಅವರು ಬ್ರಿಟನ್‍ನ ಹಣಕಾಸು ಸಚಿವರಾಗಿದ್ದಾರೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ರಿಷಿ ಸುನಕ್ ಅವರನ್ನು ಬ್ರಿಟನ್ ನೂತನ ಹಣಕಾಸು ಸಚಿವರಾಗಿ ನೇಮಕ ಮಾಡಿದ್ದಾರೆ.
The Rt Hon Rishi Sunak MP @RishiSunak has been appointed Chancellor of the Exchequer @HMTreasury pic.twitter.com/OTYOkujnbo
— UK Prime Minister (@10DowningStreet) February 13, 2020
Advertisement
ಕನ್ಸರ್‍ವೇಟಿವ್ ಪಕ್ಷದ ರೈಸಿಂಗ್ ಸ್ಟಾರ್ ಅಂತಲೇ ಗುರುತಿಸಿಕೊಂಡಿದ್ದ ರಿಷಿ(39), ಬ್ರೆಕ್ಸಿಟ್ ವಿಷಯದಲ್ಲಿ ಬೋರಿಸ್ ವಾದವನ್ನು ಪ್ರಬಲವಾಗಿ ಬೆಂಬಲಿಸಿದ್ದರು. ಅಚ್ಚರಿಯ ಬೆಳವಣಿಗೆಯಲ್ಲಿ ಹಾಲಿ ಹಣಕಾಸು ಸಚಿವರಾಗಿದ್ದ ಪಾಕಿಸ್ತಾನ ಮೂಲದ ಸಾಜಿದ್ ಜಾವಿದ್ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ರಿಷಿ ಸುನಕ್ ಅವರನ್ನು ಜಾನ್ಸನ್ ನೇಮಕ ಮಾಡಿದ್ದಾರೆ.
Advertisement
Advertisement
2015ರಲ್ಲಿ ಬ್ರಿಟನ್ ಸಂಸತ್ ಪ್ರವೇಶಿರೋ ರಿಷಿ, ಈ ಹಿಂದೆ ಖಜಾನೆ ಇಲಾಖೆ ಮುಖ್ಯ ಕಾರ್ಯದರ್ಶಿಯಾಗಿದ್ದರು. ಇದು ಹಣಕಾಸು ಸಚಿವರ ನಂತರದ ಪ್ರಮುಖ ಸ್ಥಾನವಾಗಿತ್ತು.
Advertisement
ರಿಷಿ ಪ್ರತಿಷ್ಠಿತ ವಿಂಚೆಸ್ಟರ್ ಕಾಲೇಜಿನಲ್ಲಿ ಅಧ್ಯಯನ ನಡೆಸಿದ್ದಾರೆ. ಆಕ್ಸ್‌ಫರ್ಡ್ ವಿವಿಯಲ್ಲಿ ರಾಜಕೀಯ, ಫಿಲಾಸಫಿ ಮತ್ತು ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ. ಅಮೆರಿಕಾ ಸ್ಟಾನ್‍ಫರ್ಡ್ ವಿವಿಯಿಂದ ಎಂಬಿಎ ಪದವಿಯನ್ನೂ ಅವರು ಪಡೆದುಕೊಂಡಿದ್ದಾರೆ.