ನವದೆಹಲಿ: ದೇಶದ ಅತೀ ದೊಡ್ಡ ಸಂವಿಧಾನಿಕ ಹುದ್ದೆಗೆ ಕನ್ನಡಿಗನ ಹೆಸರು ಕೇಳಿಬರುತ್ತಿದೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹೆಸರು ಈಗ ರಾಷ್ಟ್ರಪತಿ ಸ್ಥಾನಕ್ಕೆ ತೇಲಿಬಂದಿದೆ.
ನಾರಾಯಣ ಮೂರ್ತಿ ಬೆಂಬಲಕ್ಕಾಗಿ ಬಿಜೆಪಿಯಲ್ಲಿ ಸದ್ದಿಲ್ಲದೆ ಪ್ರಯತ್ನ ನಡೆಯುತ್ತಿದೆ ಎಂದು ರಾಷ್ಟ್ರೀಯ ವಾಹಿನಿಯೊಂದು ವರದಿ ಮಾಡಿದೆ.
Advertisement
2012ರಲ್ಲಿ ರಾಷ್ಟ್ರಪತಿ ಹುದ್ದೆಯನ್ನು ಆಲಂಕರಿಸಿದ ಹಿರಿಯ ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಅವರ ಅಧಿಕಾರ ಅವಧಿ ಜುಲೈನಲ್ಲಿ ಕೊನೆಯಾಗಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಬಿಜೆಪಿ ನಾಯಕರು ಹುಡುಕುತ್ತಿದ್ದು ನಾರಾಯಣ ಮೂರ್ತಿ ನೇಮಕ ಸಂಬಂಧ ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ರಾಷ್ಟ್ರಪತಿ ಹುದ್ದೆಯ ರೇಸ್‍ನಲ್ಲಿ ಈ ಹಿಂದೆ ಬಿಜೆಪಿಯ ಹಿರಿಯ ನಾಯಕರಾದ ಎಲ್‍ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಹಾಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯ್ಕ್ ಹೆಸರು ಈ ಹಿಂದೆ ಕೇಳಿಬಂದಿತ್ತು.
Advertisement
#RaceForRaisina — Narayana Murthy for President post: Sources pic.twitter.com/eTlrfhmpUJ
— NewsX (@NewsX) February 22, 2017