ನವದೆಹಲಿ: ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ (Infosys) ವಿವಾದದಲ್ಲಿ ಸಿಲುಕಿದೆ. ಮೈಸೂರು ಕ್ಯಾಂಪಸ್‌ನಿಂದ 400 ಮಂದಿ ಟ್ರೈನಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದ ವಿಚಾರ ಈಗ ಪ್ರಧಾನಮಂತ್ರಿಗಳ ಸಚಿವಾಲಯವನ್ನು (PMO Office) ತಲುಪಿದೆ.
ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ತಮ್ಮ ಉದ್ಯೋಗವನ್ನು ಮತ್ತೆ ಕೊಡಿಸಬೇಕು. ಭವಿಷ್ಯದಲ್ಲಿ ಮತ್ತೆ ಹೀಗೆ ಆಗದಂತೆ ನೋಡಬೇಕು ಎಂದು ಸಂಸ್ಥೆಯಿಂದ ವಜಾಗೊಂಡವರು ಪ್ರಧಾನಿ ಮೋದಿಗೆ (Narendra Modi) ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ‘ದೇಶೀಯ ಕಾರ್ಗೋ ಟರ್ಮಿನಲ್’ ಪ್ರಾರಂಭ
Advertisement
Advertisement
Advertisement
ಮನವಿ ಬೆನ್ನಲ್ಲೇ ಕಾರ್ಮಿಕ ಸಚಿವಾಲಯ ಸ್ಪಂದಿಸಿದ್ದು ಫೆಬ್ರವರಿ 25ರಂದು ಕರ್ನಾಟಕ ಕಾರ್ಮಿಕ ಇಲಾಖೆಗೆ ನೋಟಿಸ್ ಕಳುಹಿಸಿದೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡಿ ಎಂದು ಸೂಚಿಸಿದೆ ಎನ್ನಲಾಗಿದೆ.
Advertisement
ಫೆಬ್ರವರಿ ಆರಂಭದಲ್ಲಿ ಇನ್ಫೊಸೀಸ್‌ನ ಮೈಸೂರು ಕ್ಯಾಂಪಸ್‌ನಲ್ಲಿ 400 ಟ್ರೈನಿ ಉದ್ಯೋಗಿಗಳಿಗೆ ಲೇಆಫ್ ಪ್ರಕಟಿಸಿತ್ತು. ತಕ್ಷಣವೇ ಕ್ಯಾಂಪಸ್ ತೊರೆಯುವಂತೆ ಸೂಚಿಸಿತ್ತು ಎಂಬ ಆರೋಪ ಕೇಳಿಬಂದಿತ್ತು. ತನ್ನ ನಿರ್ಧಾರವನ್ನು ಇನ್ಫೋಸಿ ಸಮರ್ಥಿಸಿತ್ತು.