ಇನ್ಫೋಸಿಸ್ ಸಿಇಒ ಸಂಬಳ ಭಾರೀ ಏರಿಕೆ – ಶೇ.88 ಹೆಚ್ಚಳ

Public TV
1 Min Read
Infosys CEO Salil Parekh

ಬೆಂಗಳೂರು: ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಸಲೀಲ್ ಪರೇಖ್ ಈ ವರ್ಷ ತಮ್ಮ ವೇತನವನ್ನು ಬರೋಬ್ಬರಿ ಶೇ.88 ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಈ ಹೆಚ್ಚಳದೊಂದಿಗೆ ಪರೇಖ್ ಇದೀಗ ವರ್ಷಕ್ಕೆ 79.75 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

ಈ ಹಿಂದೆ ಪರೇಖ್ 42 ಕೋಟಿ ರೂ. ವಾರ್ಷಿಕ ವೇತನವನ್ನು ಪಡೆಯುತ್ತಿದ್ದರು. ಇದೀಗ ತಮ್ಮ ಸಂಭಾವನೆಯಲ್ಲಿ ಭಾರೀ ಏರಿಕೆ ಕಂಡಿರುವುದರೊಂದಿಗೆ ದೇಶದಲ್ಲೇ ಅತೀ ಹೆಚ್ಚು ಮೊತ್ತದ ಸಂಭಾವನೆ ಪಡೆಯುವ ಸಿಇಒ ಎನಿಸಿಕೊಂಡಿದ್ದಾರೆ.

Infosys 1

ಇನ್ಫೋಸಿಸ್ ತನ್ನ ಷೇರುದಾರರ ವಾರ್ಷಿಕ ವರದಿಯಲ್ಲಿ ಸಿಇಒ ವೇತನದ ವಿವರಗಳನ್ನು ಬಹಿರಂಗಪಡಿಸಿದೆ. ಇತ್ತೀಚೆಗೆ ಇನ್ಫೋಸಿಸ್ ಕಂಪನಿಯ ಉದ್ಯಮದಲ್ಲಿ ಪ್ರಮುಖ ಬೆಳವಣಿಗೆ ಕಂಡುಬಂದಿದ್ದು, ಇದರಲ್ಲಿ ಪರೇಖ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಹಿನ್ನೆಲೆ ಅವರ ವೇತನವನ್ನು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮಸ್ಕ್‌ನಿಂದ ಟ್ವಿಟ್ಟರ್ ಖರೀದಿ ಯೋಜನೆ – ಮಂಡಳಿಯಿಂದ ಹೊರನಡೆದ ಮಾಜಿ ಸಿಇಒ

ಪರೇಖ್ ಇನ್ಫೋಸಿಸ್‌ನ ಸಿಇಒ ಆಗಿ ಮರುನೇಮಕಗೊಂಡ ಕೆಲವೇ ದಿನಗಳಲ್ಲಿ ಅವರ ವೇತನ ಹೆಚ್ಚಳವಾಗಿದೆ. ಪರೇಖ್ 2022 ಜುಲೈ 1 ರಿಂದ 2027 ಮಾರ್ಚ್ 31ರ ವರೆಗೆ 5 ವರ್ಷಗಳ ಕಾಲ ಇನ್ಫೋಸಿಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮುಂದುವರಿಯಲಿದ್ದಾರೆ.

infosys salil parekhಇತ್ತೀಚಿನ ವರ್ಷಗಳಲ್ಲಿ ಟೆಕ್ ಉದ್ಯಮದಲ್ಲಿ ಪರೇಖ್ ಮಾತ್ರವೇ ತಮ್ಮ ಸಂಬಳವನ್ನು ಹೆಚ್ಚಿಸಿಕೊಳ್ಳದೇ, ಹಲವು ಇತರ ಟೆಕ್ ಕಂಪನಿಗಳೂ ತಮ್ಮ ಉದ್ಯೋಗಿಗಳ ವೇತನವನ್ನು ಹೆಚ್ಚಿಸಿದೆ. ಜಾಗತಿಕವಾಗಿ ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ತಂತ್ರಜ್ಞಾನದ ಉದ್ಯಮದಲ್ಲಿ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಹಾಗೂ ಈ ವರ್ಷ ಕಂಪನಿಗಳು ಉದ್ಯಮದಲ್ಲಿ ಪ್ರಗತಿ ಕಾಣುತ್ತಿವೆ. ಇದನ್ನೂ ಓದಿ: ಸಿನಿಮಾಗಾಗಿ ಕಂಬಳದ ಕೋಣ ಓಡಿಸಿದ ರಿಯಲ್ ಹೀರೋ ಶ್ರೀನಿವಾಸ್ ಗೌಡ

Share This Article
Leave a Comment

Leave a Reply

Your email address will not be published. Required fields are marked *