ಮಂಗಳೂರು: ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಕಾವ್ಯ ಪೂಜಾರಿ ನಿಗೂಢ ಸಾವಿನ ಬಳಿಕ ಆಳ್ವಾಸ್ ಶಿಕ್ಷಣ ಸಂಸ್ಥೆಯ ಗ್ರಹಚಾರ ಮತ್ತಷ್ಟು ಕೆಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಆತ್ಮಹತ್ಯೆ, ಅಸಹಜ ಸಾವು ಹೊಸದೇನಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ.
ಎಂಟು ವರ್ಷಗಳಲ್ಲಿ ಬರೋಬ್ಬರಿ ಹತ್ತು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಅಂತಾ ವಿದ್ಯಾರ್ಥಿ ಸಂಘಟನೆ ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ಆರ್‍ಟಿಐ ಅಡಿ ಪಡೆದ ಮಾಹಿತಿಯಿಂದ ಗೊತ್ತಾಗಿದೆ. 2008ರಿಂದ 2016ರವರೆಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ 10 ವಿದ್ಯಾರ್ಥಿಗಳ ಆತ್ಮಹತ್ಯೆ ಮತ್ತು ಅಸಹಜ ಸಾವಿನ ಬಗ್ಗೆ ಕೇಸ್‍ಗಳು ದಾಖಲಾಗಿವೆ.
ಇದನ್ನೂ ಓದಿ: ಕಾವ್ಯಾ ಅಸಹಜವಾಗಿ ಸಾವನ್ನಪ್ಪಿದ್ದಾಳೆ: ಉಗ್ರಪ್ಪ ಕಾಲೇಜಿಗೆ ಭೇಟಿ ನೀಡಿದಾಗ ಸಿಕ್ಕಿರೋ ಸ್ಫೋಟಕ ಮಾಹಿತಿ ಇಲ್ಲಿದೆ
ಇದರಲ್ಲಿ 8 ಆತ್ಮಹತ್ಯೆ ಮತ್ತು 2 ಅಸಹಜ ಸಾವು ಪ್ರಕರಣ ಸೇರಿದೆ. ಇಬ್ಬರು ಕುಸಿದು ಬಿದ್ದು ಸತ್ತಿದ್ದಾರೆ ಎಂದಷ್ಟೇ ಬರೆಯಲಾಗಿದೆ. ಆದ್ರೆ ಯಾವ ಕಾರಣದಿಂದ ಕುಸಿದು ಬಿದ್ದರು ಅನ್ನೋ ಬಗ್ಗೆ ಸ್ಪಷ್ಟತೆ ತನಿಖೆಯಲ್ಲಿ ಸಿಕ್ಕಿಲ್ಲ. ವಿಚಿತ್ರ ಅಂದ್ರೆ ಮೃತ ವಿದ್ಯಾರ್ಥಿಗಳೆಲ್ಲಾ ಹೊರ ಜಿಲ್ಲೆಯವರಾಗಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವು ಪ್ರಕರಣ: ಆಳ್ವಾಸ್ ಬೆನ್ನಿಗೆ ನಿಂತ ಎಚ್‍ಡಿಕೆ
ಈ ಪಕ್ರರಣಗಳು ಸಾಕಷ್ಟು ಸದ್ದು ಮಾಡಲಿಲ್ಲ ಅನ್ನೋ ಮಾತು ಕೇಳಿಬರುತ್ತಿದೆ. ಆದ್ರೆ ಕಾವ್ಯ ಪೂಜಾರಿ ಸ್ಥಳೀಯ ವಿದ್ಯಾರ್ಥಿನಿಯಾಗಿರೋ ಕಾರಣ ಆಕೆಯ ನಿಗೂಢ ಸಾವಿನ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ.
ಇದನ್ನೂ ಓದಿ: ಬಿಗ್ ಬುಲೆಟಿನ್ ನಲ್ಲಿ ಕಾವ್ಯ ಶ್ರೀ ಪ್ರಕರಣದ ಬಿಗ್ ಚರ್ಚೆ – ತನಿಖೆಗೆ ಸಹಕರಿಸುವೆ ಎಂದ ಮೋಹನ್ ಆಳ್ವ
https://www.youtube.com/watch?v=75vzrVm8Z6w
https://www.youtube.com/watch?v=BgvrrloxXoQ
https://www.youtube.com/watch?v=9upWi0NOWqw