ಬೆಂಗಳೂರು: ಶಿಕ್ಷಣದ ಹೆಸರಲ್ಲಿ ಹಣ ಸುಲಿಗೆ ಮಾಡುತ್ತಿರೋ ಖಾಸಗಿ ಶಾಲೆಗಳ ಧನದಾಹಿತನಕ್ಕೆ ಬ್ರೇಕ್ ಹಾಕೋದಕ್ಕೆ ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಹೀಗಾಗಿ 2020-21 ನೇ ಸಾಲಿಗೆ ಯಾವ ಯಾವ ಶಾಲೆಗಳು ಎಷ್ಟು ಶುಲ್ಕ ತೆಗೆದುಕೊಳ್ತೀರಾ ಅನ್ನೋ ಸಂಪೂರ್ಣ ಮಾಹಿತಿ ನೀಡಿ ಅಂತ ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಡೆಡ್ ಲೈನ್ ಕೊಟ್ಟಿದೆ.
ಪ್ರತಿ ವರ್ಷ ಖಾಸಗಿ ಶಾಲೆಗಳು ಮನಸೋ ಇಚ್ಛೆ ಶುಲ್ಕಗಳನ್ನು ಪಡೆಯುತ್ತವೆ. ಕಂಪ್ಯೂಟರ್ ಫೀಸ್, ಸ್ಪೋಟ್ರ್ಸ್ ಫೀಸ್, ಲೈಬ್ರರಿ ಫೀಸ್ ಅದು ಇದು ಅಂತ ಸಿಕ್ಕ ಸಿಕ್ಕಿದ್ದಕ್ಕೆ ಶುಲ್ಕ ಹಾಕ್ತಾರೆ. ಇದೆಲ್ಲದ್ದಕ್ಕೂ ಕಡಿವಾಣ ಹಾಕೋಕೆ ಶಾಲೆಗಳ ಮೇಲೆ ನಿಗಾ ಇಡೋಕೆ ಇಲಾಖೆ ಮಾಹಿತಿ ಸಂಗ್ರಹ ಮಾಡ್ತಿದೆ. ಇದಕ್ಕಾಗಿ ಶುಲ್ಕದ ಮಾಹಿತಿಯನ್ನು ಜನವರಿ 31ರ ಒಳಗೆ ಕಡ್ಡಾಯವಾಗಿ ಕೊಡಿ ಅಂತ ಖಡಕ್ ಎಚ್ಚರಿಕೆ ನೀಡಿದೆ.
Advertisement
Advertisement
ಮಾಹಿತಿ ಕೇಳೋದಕ್ಕೆ ಕಾರಣ ಏನು?
ಶಿಕ್ಷಣ ಇಲಾಖೆ ಈಗಾಗಲೇ ಖಾಸಗಿ ಶಾಲೆಗಳಿಗೆ ಶುಲ್ಕ ಪಡೆಯುವ ಬಗ್ಗೆ ಆದೇಶ ಹೊರಡಿಸಿದೆ. ಇಂತಿಷ್ಟು ಶುಲ್ಕ ಪಡೆಯಬೇಕು. ಅದನ್ನ ಹೊರತು ಪಡಿಸಿ ಹೆಚ್ಚುವರಿ ಶುಲ್ಕ ಪಡೆಯಬಾರದು ಅಂತ ತಿಳಿಸಿದೆ. ಅಲ್ಲದೆ ಪ್ರತಿ ವರ್ಷ ಇಂತಿಷ್ಟೇ ಶೇಕಡವಾರು ಶುಲ್ಕ ಹೆಚ್ಚಳ ಮಾಡಬೇಕು ಅನ್ನೊ ನಿಯಮ ಮಾಡಿದೆ. ಬೆಂಗಳೂರು ನಗರ, ಪಾಲಿಕೆ ವ್ಯಾಪ್ತಿ, ಗ್ರಾಮೀಣ ಭಾಗದಲ್ಲಿ ಇಂತಿಷ್ಟು ಶುಲ್ಕ ಪಡೆಯಬೇಕು ಅಂತ ವಿಭಾಗ ಮಾಡಲಾಗಿದೆ. ಆದ್ರೆ ಯಾವ ಶಾಲೆಗಳು ಇದನ್ನ ಅನುಸರಿಸುತ್ತಿಲ್ಲ. ಹೀಗಾಗಿ ಶಾಲೆಗಳಿಂದಾನೇ ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲು ಈ ಮಾಹಿತಿ ಸಂಗ್ರಹ ಮಾಡ್ತಿದೆ.
Advertisement
ಶಿಕ್ಷಣ ಇಲಾಖೆ ಮಾಹಿತಿ ನೀಡಲು ಈಗಾಗಲೇ ಎರಡು ಡೆಡ್ ಲೈನ್ ಕೊಟ್ಟಿತ್ತು. ಆದ್ರೆ ಬಹುತೇಕ ಶಾಲೆಗಳು ಮಾಹಿತಿ ಕೊಡದೇ ಆಟವಾಡಿಸುತ್ತಿವೆ. ಖಾಸಗಿ ಶಾಲೆಗಳ ವರ್ತನೆಗೆ ಸಿಡಿಮಿಡಿಗೊಂಡಿರೋ ಶಿಕ್ಷಣ ಇಲಾಖೆ ಈಗ ಕೊನೆ ಡೆಡ್ ಲೈನ್ ಕೊಟ್ಟಿದೆ. ಒಂದು ವೇಳೆ ಮಾಹಿತಿ ನೀಡದೇ ಹೋದ್ರೆ ಅಂತಹ ಶಾಲೆಗಳ ಮೇಲೆ ಕ್ರಮ ತೆಗೆದುಕೊಳ್ಳಲು ನಿರ್ಧಾರ ಮಾಡಿದೆ.