ಮಡಿಕೇರಿ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಹೆದ್ದಾರಿ ಕುಸಿಯುವ ಭೀತಿ ಎದುರಾಗಿದೆ. ಕಳೆದ ಬಾರಿಯ ಮಳೆಗಾಲದಲ್ಲಿ ಮಡಿಕೇರಿ – ಮಂಗಳೂರು ಹೆದ್ದಾರಿಯ ಮದೆನಾಡು ಬಳಿ ಕುಸಿದಿದ್ದ ರಸ್ತೆಯಲ್ಲೇ ಈ ಬಾರಿ ಮತ್ತೆ ಬಿರುಕು ಮೂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಮಳೆ ಬಂದು ಬಿರುಕು ಜಾಸ್ತಿಯಾದರೆ ರಸ್ತೆ ಕುಸಿಯುವ ಸಾಧ್ಯತೆಯಿದೆ. ಜೂನ್ ಆರಂಭದಲ್ಲೇ ಘನವಾಹನಗಳ ಸಂಚಾರವನ್ನು ನಿಷೇಧಿಸಿದ್ದು, ಕಾರು, ಬಸ್ಸುಗಳು ಎಂದಿನಿಂತೆ ಸಂಚಾರ ನಡೆಸುತ್ತಿವೆ.
Advertisement
Advertisement
ರಸ್ತೆಯಲ್ಲಿ ಬಿರುಕು ಮೂಡಿ ಅಪಾಯಕಾರಿ ಎನಿಸಿರುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಚರಿಸಲು ವಾಹನ ಸವಾರರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮಂಗಳೂರು ತಲುಪಲು ಪರ್ಯಾ ಮಾರ್ಗವನ್ನು ನೀಡಲಾಗಿದೆ
Advertisement
1. ಮೈಸೂರು – ಕುಶಾಲನಗರ – ಸೋಮವಾರಪೇಟೆ – ಸಕಲೇಶಪುರ – ಮಂಗಳೂರು
2. ಮೈಸೂರು – ಹುಣಸೂರು – ಗೋಣಿಕೊಪ್ಪ – ವಿರಾಜಪೇಟೆ – ಸುಳ್ಯ – ಮಂಗಳೂರು
3. ಬೆಂಗಳೂರು – ಹಾಸನ – ಶಿರಾಡಿ – ಮಂಗಳೂರು
Advertisement
ಕಳೆದ ಬಾರಿಯೂ ಬಿರುಕು ಮೂಡಿ ಕುಸಿದಿದ್ದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದುರಸ್ತಿ ಮಾಡಿತ್ತು. ಸದ್ಯ ದುರಸ್ತಿಯಾದ ರಸ್ತೆ ಮತ್ತೆ ಬಿರುಕು ಬಿಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ ಕಾರಣ ಎನ್ನಲಾಗಿದೆ. ಮತ್ತೊಂದು ಮೂಲದ ಪ್ರಕಾರ ಕಳೆದ ಬಾರಿ ಕುಸಿದು ತನ್ನ ಸಾಮಥ್ರ್ಯ ಕಳೆದುಕೊಂಡಿದ್ದ ಇದೇ ರಸ್ತೆಯಲ್ಲಿ ಭಾರೀ ವಾಹನಗಳು ಹೆಚ್ಚಾಗಿ ಸಂಚರಿಸಿದ್ದೇ ಇದೀಗ ಮತ್ತೆ ಬಿರುಕು ಮೂಡಲು ಕಾರಣ ಎನ್ನಲಾಗುತ್ತಿದೆ.
ಮಡಿಕೇರಿಯಿಂದ 6 ಕಿಲೋ ಮೀಟರ್ ದೂರದ ಕಾಟಕೇರಿ ಜಂಕ್ಷನ್‍ನಿಂದ ಕೂಗಳತೆ ದೂರದಲ್ಲಿ ಮೂಡಿರುವ ರಸ್ತೆ ಬಿರುಕುಗಳಿಗೆ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಂಕ್ರೀಟ್ ತೇಪೆ ಹಚ್ಚಿದೆ. ಅಲ್ಲದೆ ಬ್ಯಾರಿಕೇಡ್ ಅಳವಡಿಸಿ ಮುಂಜಾಗ್ರತೆ ವಹಿಸಿದೆ. ಹೀಗೆ ಮುಂದುವರಿದು ಬಿರುಕು ಹೆಚ್ಚಾದಲ್ಲಿ ಹೆದ್ದಾರಿ ಕುಸಿದು ಮಡಿಕೇರಿ – ಮಂಗಳೂರು ರಸ್ತೆ ಸಂಪರ್ಕ ಕಡಿತಗೊಳ್ಳುವ ಲಕ್ಷಣ ಹೆಚ್ಚಾಗಿದೆ.