ಬೆಂಗಳೂರು: ಕಡಿಮೆ ಅವಧಿಯಲ್ಲಿ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನ ಪಡೆದ ಕ್ಸಿಯೋಮಿ ಕೇವಲ ಸ್ಮಾರ್ಟ್ ಫೋನ್ ಅಲ್ಲದೇ ಇತರೆ ವಿನೂತನ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೀಗಾಗಿ ಇಲ್ಲಿ ಕ್ಸಿಯೋಮಿಯ ಕೆಲ ಉತ್ಪನ್ನಗಳ ಮಾಹಿತಿ ಮತ್ತು ಬೆಲೆಯನ್ನು ನೀಡಲಾಗಿದೆ.
1. ಕ್ಸಿಯೋಮಿ ತೂಕದ ಯಂತ್ರ: ಸಿಲಿಕಾನ್‍ನಿಂದ ನಿರ್ಮಾಣವಾದ ಇದು, ಧೂಳು ಹಾಗೂ ತುಕ್ಕು ರಹಿತವಾಗಿದೆ. ಬೆಲೆ ರೂ.465.
Advertisement
Advertisement
2. ಕ್ಸಿಯೋಮಿ ಎಲೆಕ್ಟ್ರಿಕ್ ಟೂತ್‍ಬ್ರಶ್: ಒಂದು ಬಾರಿ ಚಾರ್ಜ್ ಮಾಡಿದರೆ ಸುದೀರ್ಘ 60 ದಿನಗಳವರೆಗಿನ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಮೂರು ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಬೆಲೆ ರೂ.1999
Advertisement
Advertisement
3. ಕ್ಸಿಯೋಮಿ ಟ್ರಾವೆಲ್ ಪಿಲ್ಲೋ: ಪ್ರಯಾಣದ ಸಂದರ್ಭದಲ್ಲಿ ಕುತ್ತಿಗೆಗೆ ಆರಾಮದಾಯಕ ನೀಡುವ ನೂತನ ಮಾದರಿಯ ಟ್ರಾವೆಲ್ ಪಿಲ್ಲೋ ಪರಿಚಯಿಸಿದೆ. ಬೆಲೆ ರೂ. 999
4. ಕ್ಸಿಯೋಮಿ ಟೀಶರ್ಟ್: ಐ ಲವ್ ಎಂಐ ಹಾಗೂ ಎಂಐ ಎಂಬ ಬರಹವುಳ್ಳ ಪುರುಷ ಹಾಗೂ ಮಹಿಳಾ ಟಿ ಶರ್ಟ್ ಗಳನ್ನು ಕ್ಸಿಯೋಮಿ ಬಿಡುಗಡೆ ಮಾಡಿದೆ. ಇವು ಬಿಳಿ, ಕಪ್ಪು ಹಾಗೂ ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಬೆಲೆ ರೂ.599
5.ಕ್ಸಿಯೋಮಿ ರೋಲರ್ ಬಾಲ್ ಪೆನ್: ಸಿಲ್ವರ್ ಮತ್ತು ಗೋಲ್ಡ್ ಮಾದರಿಯ ಬಣ್ಣಗಳನ್ನು ಹೊಂದಿರುವ ರೋಲರ್ ಬಾಲ್ ಪೆನ್‍ಗಳಾಗಿದ್ದು ಪ್ರತ್ಯೇಕವಾಗಿ ರೀಫಿಲ್ ಖರೀದಿಸಬೇಕು. ಬೆಲೆ ರೂ.179
6. ಕ್ಸಿಯೋಮಿ ಬ್ಯಾಕ್‍ಪ್ಯಾಕ್: 14″ ಲ್ಯಾಪ್‍ಟಾಪ್ ಹೊಂದುವ ವಾಟರ್ ಪ್ರೂಫ್ ಉತ್ಕೃಷ್ಟ ಬ್ಯಾಕ್‍ಪ್ಯಾಕ್ ಬಿಡುಗಡೆಗೊಳಿಸಿದ್ದು, ಬೆಲೆ ರೂ. 1,599
7.ಕ್ಸಿಯೋಮಿ ರೈಸ್ ಕುಕ್ಕರ್: 3 ಲೀಟರ್ ಸಾಮರ್ಥ್ಯ ಹಾಗೂ ಸುಲಭವಾಗಿ ಸ್ವಚ್ಛಗೊಳಿಸುವ ರೈಸ್ ಕುಕ್ಕರ್ ಆಗಿದ್ದು, ಮೊಬೈಲ್ ಆಪ್ ಮುಖಾಂತರ ರೈಸ್ ತಯಾರಿಸಬಹುದಾಗಿದೆ. ಬೆಲೆ ರೂ. 5,900
8.ಕ್ಸಿಯೋಮಿ ಸೂಟ್‍ಕೇಸ್: ಸಧೃಡ ನಿರ್ಮಾಣ ಹಾಗೂ ಗಡುಸುತನದಿಂದ ಕೂಡಿದ 29 ಕಿಲೋ ಸಾಮರ್ಥ್ಯದ ಟ್ರಾವೆಲರ್ ಸೂಟ್‍ಕೇಸ್ ಪರಿಚಯಿಸಿದೆ. ಬೆಲೆ ರೂ. 4,400
9.ಕ್ಸಿಯೋಮಿ ಅಲಾರಂ ಕ್ಲಾಕ್: ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಹಾಗೂ 2600 ಎಂಎಎಚ್ ಬ್ಯಾಟರ್ ಸಾಮರ್ಥ್ಯದ ವಿನೂತನ ಅಲಾರಂ ಕ್ಲಾಕ್. ಬೆಲೆ ರೂ. 2,600
10.ಕ್ಸಿಯೋಮಿ 4ಕೆ ಡ್ರೋನ್: 4ಕೆ ವಿಡಿಯೋ ರೆಕಾರ್ಡಿಂಗ್ ಜೊತೆಗೆ, 27 ನಿಮಿಷ ಹಾರಾಟ ಸಾಮರ್ಥ್ಯ ಹಾಗೂ ಜಿಪಿಎಸ್, ಮೊಬೈಲ್ ಕನೆಕ್ಟಿವಿಟಿ ಹೊಂದಿರುವ ಡ್ರೋನ್ ಗೆ ರೂ.21,000 ನಿಗದಿ ಮಾಡಿದೆ.
11. ಕ್ಸಿಯೋಮಿ ಟಿಡಿಎಸ್ ವಾಟರ್ ಮೀಟರ್: ನೀರಿನ ಗುಣಮಟ್ಟವನ್ನು ಅಳೆಯುವ ಟಿಡಿಎಸ್ ಮೀಟರ್ ಅನ್ನು ಅಲ್ಯೂಮಿನಿಯಂ ಬಳಸಿ ತಯಾರಿಸಲಾಗಿದೆ. ಬೆಲೆ ರೂ. 664
12.ಕ್ಸಿಯೋಮಿ ಎಲೆಕ್ಟ್ರಿಕ್ ಸ್ಕೂಟರ್: ಕಚೇರಿಗಳಲ್ಲಿ ಒಡಾಡಲು ಬಳಸುವ ನೂತನ ಸ್ಕೂಟರ್ ಪರಿಚಯಿಸಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 30 ಕಿ.ಮೀ. ಕ್ರಮಿಸಬಹುದಾಗಿದೆ. ಅಷ್ಟೇ ಅಲ್ಲದೇ ಸ್ಮಾರ್ಟ್ ಆ್ಯಪ್ ವ್ಯವಸ್ಥೆ ಹೊಂದಿದೆ. ಬೆಲೆ ರೂ.24,000(ಅಂದಾಜು)
13.ಕ್ಸಿಯೋಮಿ ಸ್ಮಾರ್ಟ್ ಡಾಗ್ ಬಟನ್: ನಾಯಿಯ ಆರೋಗ್ಯವನ್ನು ತಿಳಿಯಲಿ ಫಿಟ್‍ನೆಸ್ ಬ್ಯಾಂಡ್ ಅನ್ನು ರೂ. 1,060 ಬೆಲೆಗೆ ಬಿಡುಗಡೆ ಮಾಡಿದೆ.
14.ಕ್ಸಿಯೋಮಿ ಸ್ಮಾರ್ಟ್ ರೀಯರ್ ವೀವ್ ಮೀರರ್: ಕಾರ್‍ಗಳಲ್ಲಿ ಬಳಸುವ ರಿಯರ್ ವೀವ್ ಮಿರರ್ ನಲ್ಲಿ ಸ್ಮಾರ್ಟ್‍ಫೋನ್‍ಗಳಲ್ಲಿರುವ ತಂತ್ರಜ್ಞಾನವನ್ನು ಬಳಸಿದ್ದು, ಇದು ಮಿರರ್ ಹಾಗೂ ಮಾಹಿತಿಯ ಸಾಧನವಾಗಿಯೂ ಬಳಸಬಹುದಾಗಿದೆ. ಬೆಲೆ ರೂ. 12500 (ಅಂದಾಜು)
ಕ್ಸಿಯೋಮಿ ವಸ್ತುಗಳು ಎಂಐ ಜಾಲತಾಣ ಹಾಗೂ ಅಮೇಜಾನ್ ಜಾಲತಾಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಸ್ಕೂಟರ್ ಹಾಗೂ ರೀಯರ್ ವೀವ್ ಮಿರರ್ ಸದ್ಯ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.