ಬಾಲಿವುಡ್ ಬೆಡಗಿ ತಾಪ್ಸಿ ಪನ್ನು (Taapsee Pannu) ಸದ್ಯ ಅಕ್ಷಯ್ ಕುಮಾರ್ (Akshay Kumar) ಜೊತೆಗಿನ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದ ವೇಳೆ, ಸೆಲ್ಫಿಗೆ ಪೋಸ್ ಕೊಡದ ತಾಪ್ಸಿ ಪನ್ನು ಮೇಲೆ ಸೋಷಿಯಲ್ ಮೀಡಿಯಾ ಸ್ಟಾರ್ ಅನನ್ಯ ಕಿಡಿಕಾರಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ (Khel Khel Mein) ಎಂಬ ಚಿತ್ರದಲ್ಲಿ ತಾಪ್ಸಿ ನಾಯಕಿಯಾಗಿದ್ದಾರೆ. ಚಿತ್ರದ ಪ್ರಚಾರದ ಕೆಲಸಕ್ಕೆ ಚಾಲನೆಯನ್ನೂ ನೀಡಿರುವ ಚಿತ್ರತಂಡ ಹಾಡೊಂದರ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿತ್ತು. ಆಗ ಈ ಸಮಾರಂಭದಲ್ಲಿ ಸೋಷಿಯಲ್ ಮೀಡಿಯಾದ ಸ್ಟಾರ್ ಅನನ್ಯ ದ್ವಿವೇದಿ ಭಾಗಿಯಾಗಿದ್ದರು. ಬಳಿಕ ವೇದಿಕೆಯಲ್ಲಿ ತಾಪ್ಸಿಗೆ ಸೆಲ್ಫಿ ಕೇಳಿದರು. ಅವರು ನಗುಮುಖದಿಂದಲೇ ಸೆಲ್ಫಿಗೆ ನಿರಾಕರಿಸಿದರು. ಇದೇ ಬೇಸರದಲ್ಲಿ ಅನನ್ಯ ದ್ವಿವೇದಿ ಅವರು ತಾಪ್ಸಿ ವಿರುದ್ಧ ಹರಿಹಾಯ್ದಿದ್ದಾರೆ. ತಾಪ್ಸಿಗೆ ಉತ್ತಮ ಪಿಆರ್ ತರಬೇತಿಯ ಅಗತ್ಯವಿದೆ ಎಂದು ಅನನ್ಯ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ್ದಾರೆ.
ಅನನ್ಯಾ ವೈರಲ್ ವೀಡಿಯೋದಲ್ಲಿ ಈ ಬಗ್ಗೆ ಕಾಮೆಂಟ್ ಮಾಡಿದ್ದು, ಹಲವಾರು ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿರುವಾಗ,ಸೆಲ್ಫಿಯನ್ನು ಏಕೆ ನಿರಾಕರಿಸುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನ್ನಂತಹ ಪ್ರಭಾವಿಗಳನ್ನು ಕರೆದ ಕಾರಣವೆಂದರೆ ಅವರ ಹಾಡನ್ನು ಪ್ರಚಾರ ಮಾಡಲು. ಆಕೆಗೆ ನಿಜವಾಗಿಯೂ ಉತ್ತಮ ಪಿಆರ್ ತರಬೇತಿಯ ಅಗತ್ಯವಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ:ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾದಲ್ಲಿ ‘ಕೆಜಿಎಫ್’ ನಟಿ
ಇದೀಗ ತಾಪ್ಸಿ ನಡೆಗೆ ಪರ ಮತ್ತು ವಿರೋಧದ ಚರ್ಚೆ ನಡೆಯುತ್ತಿದೆ. ನಟಿ ಎಂಬ ಕಾರಣಕ್ಕೆ ಪ್ರತಿ ಸೆಲ್ಫಿಗೂ ಹೌದು ಎಂದು ಹೇಳಬೇಕಿಲ್ಲ ಎಂದು ಅಭಿಮಾನಿಗಳು ತಾಪ್ಸಿ ಪರ ಬ್ಯಾಟ್ ಬೀಸಿದ್ದಾರೆ.