ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮತ್ತೆ ಚುರುಕು ಪಡೆದುಕೊಂಡ ಹಿನ್ನೆಲೆ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆಗೆ (KRS Dam) ಬರುವ ನೀರಿನ ಪ್ರಮಾಣ ಹೆಚ್ಚಾಗಿದೆ.
ನಿನ್ನೆಯಿಂದ ಕೊಡಗು (Kodagu) ಭಾಗದಲ್ಲಿ ಮಳೆ ಬೀಳುತ್ತಿರುವ ಹಿನ್ನೆಲೆ 10,124 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಗರಿಷ್ಠ 124.80 ಅಡಿ ಎತ್ತರ ಇರುವ ಜಲಾಶಯದಲ್ಲಿ 105.40 ಅಡಿ ಭರ್ತಿಯಾಗಿದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಕೆಆರ್‌ಎಸ್‌ನಲ್ಲಿ 27.347 ಟಿಎಂಸಿ ನೀರು ಶೇಖರಣೆಯಾಗಿದೆ. ಡ್ಯಾಂನಿಂದ ಕುಡಿಯುವ ನೀರಿಗೆ ಹಾಗೂ ನಾಲೆಗಳಿಗೆ 2,260 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: Valmiki Scam | ನಾಪತ್ತೆಯಾಗಿದ್ದ ದದ್ದಲ್ ವಿಧಾನಸೌಧದಲ್ಲಿ ಪ್ರತ್ಯಕ್ಷ
Advertisement
Advertisement
ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬೀಳುತ್ತಿರುವ ಹಿನ್ನೆಲೆ ನಾಳೆ ಕೆಆರ್‌ಎಸ್ ಡ್ಯಾಂಗೆ 20 ಸಾವಿರಕ್ಕೂ ಅಧಿಕ ಕ್ಯುಸೆಕ್ ಒಳಹರಿವು ಬರುವ ಸಾಧ್ಯತೆ ಇದೆ. ಕಬಿನಿ (Kabini Dam) ಮತ್ತು ಹಾರಂಗಿ ಜಲಾಶಯದಿಂದ (Harangi Dam) ನದಿಗೆ ನೀರು ಬಿಡುವ ಕಾರಣ ಕೆಆರ್‌ಎಸ್ ಒಳ ಹರಿವು ಹೆಚ್ಚಾಗುತ್ತಿದೆ.