ಬೆಂಗಳೂರು: ಹೊಸ ವರ್ಷದ ಸಂಭ್ರಮದ ಜೊತೆಗೆ ಪುಟಾಣಿ ಜೀವಗಳು ಅಮ್ಮಂದಿರ ಮಡಿಲಲ್ಲಿ ಹೊಸ ವರ್ಷದ ಖುಷಿಯನ್ನು ಡಬಲ್ ಮಾಡಿಸಿವೆ.
ಹೊಸ ವರ್ಷದ ದಿನವೇ ಹುಟ್ಟಿದ ಮಕ್ಕಳ ಅಮ್ಮಂದಿರ ಸಂಭ್ರಮಕ್ಕೆ ಪಾರವೇ ಇಲ್ಲ. ಕೆಲವು ಕಂದಮ್ಮಗಳಂತೂ ಸರಿಯಾಗಿ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಹುಟ್ಟಿದ್ದವು. ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮಧ್ಯರಾತ್ರಿಯಿಂದ ಮಧ್ಯಾಹ್ನದವರೆಗೆ ಹನ್ನೆರಡು ಗಂಟೆವರೆಗೂ ಒಟ್ಟು ಹದಿನಾರು ಹೆರಿಗೆಗಳಾಗಿದೆ.
Advertisement
ಇಂದು ಸ್ವಾತಿ ನಕ್ಷತ್ರ ತುಲಾ ರಾಶಿ ಒಳ್ಳೆಯ ದಿನ ಎನ್ನುವುದು ಜ್ಯೋತಿಷ್ಯರ ನಂಬಿಕೆ ಆಗಿರುವುದರಿಂದ ಕಂದಮ್ಮಗಳ ಪೋಷಕರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹೆಣ್ಣು ಮಗುವೇ ಹೆಚ್ಚು ಹುಟ್ಟಿದ್ದು ಹೊಸ ವರ್ಷದಂದು ಜನಿಸಿದ ಕಂದಮ್ಮಗಳಿಗೆ ಆಸ್ಪತ್ರೆ ಗಿಫ್ಟ್ ನೀಡಿ ದಂಪತಿಗೆ ಶುಭಾಶಯ ಹೇಳಿದೆ.
Advertisement
Advertisement
ಇತ್ತೀಚಿನ ವರ್ಷಗಳಲ್ಲಿ ಹೊಸ ವರ್ಷಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆ ನವಮಾಸ ತುಂಬುತ್ತಿದ್ದ ಅಮ್ಮಂದಿರು ನ್ಯೂ ಇಯರ್ ಗೆ ಹೆರಿಗೆ ಮಾಡಿಸಲು ದುಂಬಾಲು ಬೀಳುತ್ತಿದ್ದಾರೆ. ಕೇವಲ ಹೊಸ ವರ್ಷ ಮಾತ್ರ ಅಲ್ಲದೇ ಈ ದಿನ ಹುಟ್ಟುವ ಮಗುವಿನ ಅದೃಷ್ಟವೇ ಬದಲಾಗುತ್ತದೆ ಎನ್ನುವ ನಂಬಿಕೆಯಿದೆ.
Advertisement
ಫ್ಯಾನ್ಸಿ ನಂಬರ್ ಗಳ ಸೆಳೆತ, ಒಳ್ಳೆಯ ದಿನ ನೋಡಿಯೇ ಡೆಲಿವರಿ ಡೇಟ್ ಅಡ್ಜೆಸ್ಟ್ ಮೆಂಟ್ ಮಾಡುವ ಟ್ರೆಂಡ್ ಈಗ ಸಿಕ್ಕಾಪಟ್ಟೆ ಜೋರಾಗಿದೆ. ಅದರಲ್ಲೂ ಹೆರಿಗೆಗೆ ಅಸುಪಾಸಿನಲ್ಲಿರುವವರು ಹೊಸ ವರ್ಷ ಜನವರಿ ಒಂದರಂದು ಡೆಲಿವರಿ ಮಾಡಿಸಲು ವೈದ್ಯರಿಗೆ ಬೇಡಿಕೆ ಇಡುತ್ತಿದ್ದಾರೆ. ರಿಸ್ಕಿ ಇಲ್ಲದ ಡೆಲಿವರಿಗಳನ್ನು ಅವರ ಇಷ್ಟದ ದಿನವೇ ಮಾಡಬಹುದು. ಆದರೆ ಸ್ವಾಭಾವಿಕವಾಗಿ ಹೆರಿಗೆ ನೋವು ಬಂದಾಗ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಈ ಹಿಂದೆ ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv