Monday, 23rd July 2018

ಶ್ರೀಲಂಕಾ 154/5, ಟೀಂ ಇಂಡಿಯಾ 600ಕ್ಕೆ ಆಲೌಟ್

ಗಾಲೆ:  ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಭಾರತದ ಮೊದಲ ಇನ್ನಿಂಗ್ಸನ್ನು 600 ರನ್ ಗೆ ನಿಲ್ಲಿಸಿ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ದಿನದಾಟ ಅಂತ್ಯಗೊಂಡಾಗ 5 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದೆ. ಆಂಜೆಲೋ ಮ್ಯಾಥ್ಯೂಸ್ 54 ಹಾಗೂ ದಿಲ್ ರುವಾನ್ ಪಿರೇರಾ 6 ರನ್ ಗಳಿಸಿ ಅಜೇಯಾರಿ ಉಳಿದಿದ್ದಾರೆ.

ಮೊದಲ ದಿನದಾಟ ಕೊನೆಯಾಗುವಾಗ ಭಾರತ ನಿನ್ನೆ 3 ವಿಕೆಟ್ ಕಳೆದುಕೊಂಡು 399 ರನ್ ಗಳಿಸಿತ್ತು. ಇಂದು ಮತ್ತೆ ಬ್ಯಾಟಿಂಗ್ ಆರಂಭಿಸಿದ ಇಂಡಿಯಾ 133.1 ಓವರ್ ನಲ್ಲಿ 600 ರನ್ ಗೆ ಆಲೌಟ್ ಆಯಿತು.

ಯಾರು ಎಷ್ಟು ರನ್? ಟೀಂ ಇಂಡಿಯಾ ಪರವಾಗಿ ಶಿಖರ್ ಧವನ್ ಹಾಗೂ ಚೇತೇಶ್ವರ್ ಪೂಜಾರ ಶತಕ ಬಾರಿಸಿದರು. ಶಿಖರ್ ಧವನ್ 168 ಎಸೆತಗಳಲ್ಲಿ 31 ಬೌಂಡರಿಗಳ ನೆರವಿನಿಂದ 190 ರನ್ ಗಳಿಸಿದರೆ, ಪೂಜಾರ 265 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ 153 ರನ್ ಗಳಿಸಿದರು. ಅಜಿಂಕ್ಯಾ ರಹಾನೆ 57, ಹಾರ್ದಿಕ್ ಪಾಂಡ್ಯಾ 50 ರನ್ ಗಳಿಸಿದರು. ಪಾಂಡ್ಯಾ 49 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ ಅರ್ಧ ಶತಕ ದಾಖಲಿಸಿದರು.

ಅಭಿನವ್ ಮುಕುಂದ್ 12, ಕೊಹ್ಲಿ 3, ಅಶ್ವಿನ್ 47, ವೃದ್ಧಿಮಾನ್ ಸಾಹ 16, ರವೀಂದ್ರ ಜಡೇಜಾ 15, ಮೊಹಮ್ಮದ್ ಶಮಿ 30, ಉಮೇಶ್ ಯಾದವ್ 11 ರನ್ ಗಳಿಸಿದರು. ಶಮಿ 30 ರನ್ ಗಳಲ್ಲಿ 3 ಸಿಕ್ಸರ್ ಕೂಡಾ ಸೇರಿತ್ತು.

ಶ್ರೀಲಂಕಾ ಪರವಾಗಿ ನುವಾನ್ ಪ್ರದೀಪ್ 6 ವಿಕೆಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು. ಲಹಿರು ಕುಮಾರ 3 ಹಾಗೂ ಹೀರತ್ 1 ವಿಕೆಟ್ ಗಳಿಸಿದರು.

ಭಾರತದ 600 ರನ್ ಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಆರಂಭದಲ್ಲೇ ಉಮೇಶ್ ಯಾದವ್ ಆಘಾತ ನೀಡಿದರು. ದಿಮುತ್ ಕರುಣರತ್ನೆ 2 ರನ್ ಗಳಿಸಿ ಔಟಾದರು. ಬಳಿಕ ಬ್ಯಾಟಿಂಗ್ ಗೆ ಆಗಮಿಸಿದ ಗುಣತಿಲಕ ಹಾಗೂ ಆರಂಭಿಕ ಆಟಗಾರ ಉಪುಲ್ ತರಂಗ ಉತ್ತಮ ಆಟವಾಡಿದರು. 15 ನೇ ಓವರ್ ನಲ್ಲಿ ಮತ್ತೆ ಬೌಲಿಂಗ್ ಗೆ ಇಳಿದ ಮೊಹಮ್ಮದ್ ಶಮಿ ಒಂದೇ ಓವರ್ ನಲ್ಲಿ 2 ವಿಕೆಟ್ ಕಬಳಿಸಿದರು. ಉತ್ತಮವಾಗಿ ಆಟವಾಡುತ್ತಿದ್ದ ಉಪುಲ್ ತರಂಗ 64 ರನ್ ಗಳಿಸಿ ರನೌಟ್ ಆದರು.

ಟೀಂ ಇಂಡಿಯಾ ಪರವಾಗಿ ಮೊಹಮ್ಮದ್ ಶಮಿ 2, ಉಮೇಶ್ ಯಾದವ್ ಹಾಗೂ ಅಶ್ವಿನ್ ತಲಾ 1 ವಿಕೆಟ್ ಗಳಿಸಿದರು.

https://twitter.com/OfficialSLC/status/890180271567282176

https://twitter.com/OfficialSLC/status/890489078960898048

Leave a Reply

Your email address will not be published. Required fields are marked *