ವೆಲಿಂಗ್ಟನ್: ಏಕದಿನ ಸರಣಿಯನ್ನು ಸೋತಿದ್ದ ನ್ಯೂಜಿಲೆಂಡ್ ಭಾರತದ ವಿರುದ್ಧ ನಡೆದ ಮೊದಲ ಟಿ20 ಪಂದ್ಯವನ್ನು 80 ರನ್‍ಗಳಿಂದ ಗೆದ್ದುಕೊಂಡಿದೆ.
220 ರನ್ ಗಳ ಬೃಹತ್ ರನ್ ಟಾರ್ಗೆಟ್ ಪಡೆದಿದ್ದ ಟೀಂ ಇಂಡಿಯಾ 19.2 ಓವರ್ ಗಳಲ್ಲಿ ಕೇವಲ 139 ರನ್ ಗಳಿಸಿ ಆಲೌಟ್ ಆಯ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ ಕಿವೀಸ್ ತಂಡ ಅರ್ಹವಾಗಿಯೇ ಜಯ ಪಡೆಯಿತು. ಈ ಮೂಲಕ 3 ಪಂದ್ಯಗಳ ಟೂರ್ನಿಯಲ್ಲಿ 1-0 ಮುನ್ನಡೆ ಪಡೆಯಿತು. ಭಾರತಕ್ಕೆ ಟಿ20 ಇತಿಹಾಸದಲ್ಲಿ ಹೀನಾಯ ಸೋಲು ಇದಾಗಿದ್ದು, ಈ ಹಿಂದೆ 2010 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 49 ರನ್ ಗಳ ಸೋಲುಂಟಾಗಿತ್ತು.
Advertisement
Advertisement
ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕ ಜವಾಬ್ದಾರಿ ವಹಿಸಿದ ರೋಹಿತ್ ಶರ್ಮಾ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ತಂಡದ ಪರ ಆರಂಭಿಕ ಧವನ್ 29 ರನ್, ಧೋನಿ 39 ರನ್, ಕೃಣಾಲ್ ಪಾಂಡ್ಯ 20 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾರೂ ಎರಡಂಕಿ ಮೊತ್ತ ಗಳಿಸಲಿಲ್ಲ. ಕಿವೀಸ್ ಪರ ಸೌಥಿ 3 ವಿಕೆಟ್ ಪಡೆದರೆ, ಸೋಧಿ, ಫಗ್ರ್ಯೂಸನ್, ಸ್ಯಾಂಟ್ನಾರ್ ತಲಾ 2 ಹಾಗೂ ಮಿಚೆಲ್ 1 ವಿಕೆಟ್ ಪಡೆದರು.
Advertisement
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಕಿವೀಸ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಕಿವೀಸ್ ತಂಡದ ವಿಕೆಟ್ ಕೀಪರ್ ಸಿಫರ್ಟ್ ಸ್ಫೋಟಕ ಪ್ರದರ್ಶನ ನೀಡಿ ಕೇವಲ 43 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ನೆರವಿನಿಂದ 84 ರನ್ ಗಳಿಸಿದರು. ಅಲ್ಲದೇ ಮನ್ರೋ ಹಾಗೂ ನಾಯಕ ವಿಲಿಯಮ್ಸನ್ ತಲಾ 34 ರನ್ ಜವಾಬ್ದಾರಿಯುತ ಆಟದಿಂದ ಕಿವೀಸ್ ತಂಡ ನಿಗಧಿತ 20 ಓವರ್ ಗಳಲ್ಲಿ 219 ರನ್ ಸಿಡಿಸಿತ್ತು. ಪಂದ್ಯದಲ್ಲಿ ದುಬಾರಿಯಾದ ಟೀಂ ಇಂಡಿಯಾ ಬೌಲರ್ ಗಳಲ್ಲಿ ಹಾರ್ದಿಕ್ ಪಾಂಡ್ಯ 51 ರನ್ ನೀಡಿ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಕೃಣಾಲ್ ಪಾಂಡ್ಯ, ಚಹಲ್ ತಲಾ ಒಂದೊಂದು ವಿಕೆಟ್ ಪಡೆದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv