ನೇಪಿಯರ್: ಬೌಲಿಂಗ್, ಬ್ಯಾಟಿಂಗ್ ನಲ್ಲಿ ದಿಟ್ಟ ಪ್ರದರ್ಶನ ತೋರಿದ ಭಾರತ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯವನ್ನು 8 ವಿಕೆಟ್‍ಗಳಿಂದ ಗೆದ್ದುಕೊಂಡು 5 ಪಂದ್ಯಗಳ ಸರಣಿಯಲ್ಲಿ 1-0 ಅಂತರಿಂದ ಮುನ್ನಡೆ ಸಾಧಿಸಿದೆ.
ಗೆಲ್ಲಲು ಡಕ್ವರ್ತ್ ಲೂಯಿಸ್ ನಿಯಮ ಅಡಿಯಲ್ಲಿ 49 ಓವರಗಳಿಗೆ 156 ರನ್ ಗಳ ಗುರಿಯನ್ನು ಪಡೆದ ಟೀಂ ಇಂಡಿಯಾ 34.5 ಓವರ್ ಗಳಲ್ಲಿ ರನ್ ಹೊಡೆದು ಜಯಗಳಿಸಿತು. ಟೀಂ ಇಂಡಿಯಾ ಪರ ಅರ್ಧ ಶತಕ ಸಾಧನೆ ಮಾಡಿದ ಧವನ್ ಔಟಾಗದೇ 75ರನ್(103 ಎಸೆತ, 6 ಬೌಂಡರಿ) ಕೊಹ್ಲಿ 45 ರನ್(59 ಎಸೆತ, 3 ಬೌಂಡರಿ) ಹೊಡೆದರು. ಇದನ್ನು ಓದಿ: ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ ಸೂರ್ಯ ರಶ್ಮಿ ಅಡ್ಡಿ – 40 ನಿಮಿಷ ಆಟಕ್ಕೆ ಬ್ರೇಕ್!
Advertisement
Advertisement
ಟೀಂ ಇಂಡಿಯಾ 41 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದಾಗ 11 ರನ್ ಗಳಿಸಿದ್ದ ಆರಂಭಿಕ ಆಟಗಾರ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಆರಂಭಿಕ ಧವನ್ ಅವರನ್ನು ಕೂಡಿಕೊಂಡ ನಾಯಕ ಕೊಹ್ಲಿ ತಂಡವನ್ನು ಗೆಲುವಿನ ಸನಿಹ ತಂದರು.
Advertisement
ಪಂದ್ಯದ 11 ಓವರ್ ವೇಳೆ ಸೂರ್ಯನ ರಶ್ಮಿ ಆಟಕ್ಕೆ ಅಡ್ಡಿ ಪಡಿಸಿದ ಕಾರಣ ಪಂದ್ಯವನ್ನು 1 ಓವರ್ ಕಡಿತಗೊಳಿಸಲಾಯಿತು. ಡಕ್ವರ್ತ್ ಲೂಯಿಸ್ ನಿಯಮ ಅಳವಡಿಕೆಯಾದ ಪರಿಣಾಮ 158 ರನ್ ಗಳ ಗುರಿಯ ಬದಲಾಗಿ ಟೀಂ ಇಂಡಿಯಾಗೆ 49 ಓವರ್ ಗಳಲ್ಲಿ 156 ರನ್‍ಗಳ ಪರಿಷ್ಕೃತ ಗುರಿಯನ್ನು ನೀಡಲಾಯಿತು.
Advertisement
ಸುಲಭ ಗುರಿಯನ್ನು ಬೆನ್ನತ್ತಿದ್ದ ಆಟಗಾರರು ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದರು. 45 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ಫರ್ಗುಸನ್ ಗೆ ವಿಕೆಟ್ ಒಪ್ಪಿಸುವ ಮೂಲಕ ಅರ್ಧ ಶತಕ ವಂಚಿತರಾದರು. ಬಳಿಕ ಬಂದ ರಾಯುಡು ಬೀರುಸಿನ ಬ್ಯಾಟಿಂಗ್ ಗೆ ಮುಂದಾದರು. ಅಂತಿಮವಾಗಿ ರಾಯುಡು 13 ರನ್ ನೊಂದಿಗೆ ಗೆಲುವಿನ ಶಾಟ್ ಹೊಡೆದು ಸಂಭ್ರಮಿಸಿದರು. ಇದನ್ನು ಓದಿ: 10 ರನ್ ಗಳಿಸಿ ಲಾರಾ ದಾಖಲೆ ಸರಿಗಟ್ಟಿದ ಶಿಖರ್ ಧವನ್
Clinical. #TeamIndia start off the series with a 8-wicket win against New Zealand in the 1st ODI. 1-0 ???????????????? #NZvIND pic.twitter.com/P4lLKjoCvu
— BCCI (@BCCI) January 23, 2019
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್‍ಗೆ ಆರಂಭದಲ್ಲೇ ಶಮಿ ಶಾಕ್ ನೀಡಿದರು. ತಂಡದ ಮೊತ್ತ 18 ಆಗುವಷ್ಟರಲ್ಲೇ ಇಬ್ಬರು ಆರಂಭಿಕ ಆಟಗಾರರನ್ನು ಶಮಿ ಎಸೆತಕ್ಕೆ ಬೌಲ್ಡ್ ಆಗಿದ್ದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ನಾಯಕ ಕೇನ್ ವಿಲಿಯಮ್ಸನ್ ಅರ್ಧ ಶತಕ ಸಿಡಿಸಿ ತಂಡ ಮೊತ್ತ 100 ರನ್ ಗಡಿ ದಾಟಲು ಕಾರಣರಾದರು. ಶತಕದತ್ತ ಮುನ್ನುಗ್ಗುತ್ತಿದ್ದ ವಿಲಿಯಮ್ಸನ್‍ಗೆ ಕುಲ್ದೀಪ್ ಯಾದವ್ ಬ್ರೇಕ್ ಹಾಕಿದ್ರು. ಅಂತಿಮವಾಗಿ ವಿಲಿಯಮ್ಸನ್ 81 ಎಸೆತಗಳಲ್ಲಿ 64 ರನ್(81 ಎಸೆತ, 7 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಕಿವೀಸ್ ಬ್ಯಾಟ್ಸ್ ಮನ್ ಗಳನ್ನು ಬಂದಷ್ಟೇ ವೇಗದಲ್ಲಿ ವಾಪಸ್ ಕಳುಹಿಸಲು ಟೀಂ ಇಂಡಿಯಾ ಬೌಲರ್ ಗಳು ಯಶಸ್ವಿಯಾದರು. ಅಂತಿಮವಾಗಿ ನ್ಯೂಜಿಲೆಂಡ್ 38 ಓವರ್ ಗಳಲ್ಲಿ 157 ರನ್ ಗಳಿಗೆ ಆಲೌಟ್ ಆಯ್ತು. ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 4 ವಿಕೆಟ್ ಪಡೆದು ಮಿಂಚಿದರೆ, ಮೊಹಮ್ಮದ್ ಶಮಿ 3, ಚಹಲ್ 2, ಜಾಧವ್ 1 ವಿಕೆಟ್ ಪಡೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv