ವೆಲ್ಲಿಂಗ್ಟನ್: ಕಿವೀಸ್ ವಿರುದ್ಧ 2 ಏಕದಿನ ಪಂದ್ಯಗಳಿಗೆ ಅಲಭ್ಯರಾಗಿದ್ದ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದು, ಅಂತಿಮ ಪಂದ್ಯಕ್ಕೆ ಕಮ್ ಬ್ಯಾಕ್ ಮಾಡುವುದು ಖಚಿತವಾಗಿದೆ.
ಕಿವೀಸ್ ವಿರುದ್ಧದ 3 ಮತ್ತು 4ನೇ ಪಂದ್ಯದಿಂದ ಹೊರಗುಳಿದಿದ್ದ ಧೋನಿವೆಲ್ಲಿಂಗ್ಟನಲ್ಲಿ ನಡೆಯಲಿರುವ ಪಂದ್ಯ ಆಡಲಿದ್ದಾರೆ. ಇತ್ತ ಹ್ಯಾಮಿಲ್ಟನ್ ಕ್ರೀಡಾಂಗಣದಲ್ಲಿ ನಡೆದ 4ನೇ ಏಕದಿನ ಪಂದ್ಯದಲ್ಲಿ ಹೀನಾಯವಾಗಿ ಸೋತ್ತಿದ್ದ ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 4-1 ಅಂತರದಲ್ಲಿ ಮುಕ್ತಾಯಗೊಳಿಸುವ ಉದ್ದೇಶ ಹೊಂದಿದೆ.
Advertisement
Advertisement
ಈ ಕುರಿತು ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮಾಹಿತಿ ನೀಡಿದ್ದು, ಹಾಮ್ ಸ್ಟ್ರಿಂಗ್ ಸ್ಟ್ರೇನ್ ಗಾಯದ ಸಮಸ್ಯೆ ಎದುರಿಸಿದ್ದ ಧೋನಿ ಚೇತರಿಸಿಕೊಂಡಿದ್ದಾರೆ. ಅಂತಿಮ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ ಎಂದು ಹೇಳಿದ್ದಾರೆ. ಇತ್ತ ಯುವ ಆಟಗಾರರಿಂದಲೇ ಕೂಡಿರುವ ಟೀಂ ಇಂಡಿಯಾ ತಂಡದ ಸದಸ್ಯರು ಅಂತಿಮ ಪಂದ್ಯಕ್ಕಾಗಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಟೀಂ ಇಂಡಿಯಾ ನಾಯಕತ್ವದ ಜವಾಬ್ದಾರಿ ವಹಿಸಿರುವ ರೋಹಿತ್ ಶರ್ಮಾ, ಯುವ ಆಟಗಾರರಾದ ಖಲೀಲ್ ಅಹ್ಮದ್, ಮಹ್ಮದ್ ಸಿರಾಜ್, ವಿಜಯ್ ಶಂಕರ್, ಶುಭ್ ಮನ್ ಗಿಲ್ ಅಭ್ಯಾಸ ನಡೆಸಿದ್ದಾರೆ.
Advertisement
ಟೀಂ ಇಂಡಿಯಾ ಆರಂಭಿಕರು ಸೇರಿದಂತೆ ಮಧ್ಯಮ ಕ್ರಮಾಂಕದ ಆಟಗಾರರು ಕಳೆದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಅಂಬಟಿ ರಾಯುಡು, ಕೇಧಾರ್ ಜಾದವ್ ಮತ್ತು ದಿನೇಶ್ ಕಾರ್ತಿಕ್ ಸಿಕ್ಕ ಜವಾಬ್ದಾರಿಯನ್ನು ನಿರ್ವಹಿಸಿರಲಿಲ್ಲ. ಟೀಂ ಇಂಡಿಯಾ ಏಕದಿನ ಸರಣಿಯ ಬಳಿಕ ಟಿ20 ಸರಣಿಯನ್ನು ಆಡಲಿದ್ದು, ತಂಡದ ಆಟಗಾರರ ಪ್ರದರ್ಶನ ಆಡುವ 11 ಬಳಗದ ಆಯ್ಕೆಗೆ ಪ್ರಮುಖವಾಗಿದೆ.
Advertisement
All set for the 5th and final ODI ????????????
What's your prediction for tomorrow's game?#NZvIND pic.twitter.com/PX2BKHYnIW
— BCCI (@BCCI) February 2, 2019
4ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭಾರೀ ಸೋಲುಣಿಸಿದ್ದ ಕೀವೀಸ್ ತಂಡ ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಟಿ20 ಸರಣಿಗೆ ಹೆಚ್ಚಿನ ಆತ್ಮವಿಶ್ವಾಸ ಗಳಿಸುವ ವಿಶ್ವಾಸದಲ್ಲಿದೆ. ಆದರೆ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ತಂಡ ಆರಂಭಿಕ ಮಾರ್ಟಿನ್ ಗುಪ್ಟಿಲ್ ಪಂದ್ಯದಿಂದ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv