ಮೌಂಟ್ ಮೌಂಗಾನೆ: ಕಳೆದ ಕೆಲ ವಾರಗಳಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ, ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಾಗೂ 2 ವಿಕೆಟ್ ಪಡೆಯುವ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.
ಪಂದ್ಯದಲ್ಲಿ 10 ಓವರ್ ಬೌಲ್ ಮಾಡಿದ ಪಾಂಡ್ಯ 45 ರನ್ ನೀಡಿ 2 ವಿಕೆಟ್ ಪಡೆದಿದ್ದು, ಪಂದ್ಯದಲ್ಲಿ ಹೆಚ್ಚು ರನ್ ಬಿಟ್ಟುಕೊಡದೆ ಉತ್ತಮ ಬೌಲಿಂಗ್ ದಾಳಿ ನಡೆಸಿದರು. ಅಲ್ಲದೇ ನಾಯಕ ವಿಲಿಯಮ್ಸನ್ ಅವರ ಕ್ಯಾಚ್ ಪಡೆಯುವ ಮೂಲಕ ನ್ಯೂಜಿಲೆಂಡ್ ರನ್‍ಗಳಿಗೆ ನಿಯಂತ್ರಣ ಹೇರಿದರು.
17ನೇ ಓವರ್ ನಲ್ಲಿ ಯಜುವೇಂದ್ರ ಚಹಲ್ ಎಸೆತದಲ್ಲಿ ರನ್ ಪಡೆಯಲು ಯತ್ನಿಸಿದ ವಿಲಿಯಮ್ಸನ್ ಮಿಡ್ ವಿಕೆಟ್‍ನತ್ತ ಚೆಂಡನ್ನು ಬಾರಿಸಿದರು. ಆದರೆ ಕ್ಷಣ ಮಾತ್ರದಲ್ಲಿ ಪಾಂಡ್ಯ ಡೈವ್ ಮಾಡಿ ಕ್ಯಾಚ್ ಪಡೆದು ಮಿಂಚಿದರು.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಎಲ್ ರಾಹುಲ್ ಮತ್ತು ಪಾಂಡ್ಯ ಮಹಿಳೆಯರು ಹಾಗೂ ಸೆಕ್ಸ್ ಬಗ್ಗೆ ಆಕ್ಷೇಪಾರ್ಹ ರೀತಿಯಲ್ಲಿ ಕಾಮೆಂಟ್ ಮಾಡಿ ಸಾರ್ವಜನಿಕರ ಕೈಗಣ್ಣಿಗೆ ಗುರಿಯಾಗಿ ಟೀಕೆ ಎದುರಿಸಿದ್ದರು. ಪರಿಣಾಮ ಬಿಸಿಸಿಐ ಅಮಾನತು ಮಾಡಿತ್ತು. ಇದರಿಂದ ಆಸೀಸ್ ಟೂರ್ನಿಯಿಂದ ಹೊರಬಿದ್ದಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಬಿಸಿಸಿಐ ಇಬ್ಬರ ಮೇಲಿನ ಅಮಾನತನ್ನು ತೆರವುಗೊಳಿಸಿತ್ತು.
https://twitter.com/KanaiKumar9/status/1089738535958003713?
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv