ನವದೆಹಲಿ: ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟಿ 20 ಪಂದ್ಯದಲ್ಲಿ ನ್ಯೂಜಿಲೆಂಡ್ ಗೆ ಭಾರತ 203 ರನ್ ಗಳ ಗುರಿಯನ್ನು ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಭಾರತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿದೆ.
Advertisement
37 ಎಸೆತದಲ್ಲಿ 50 ರನ್ ಹೊಡೆದ ಶಿಖರ್ ಧವನ್ 80 ರನ್(52 ಎಸೆತ, 10 ಬೌಂಡರಿ, 2 ಸಿಕ್ಸರ್) ಸಿಡಿಸಿ ಔಟಾದರು. ನಂತರ ಬಂದ ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟಾದರು. 42 ಎಸೆತದಲ್ಲಿ ಅರ್ಧಶತಕ ಹೊಡೆದ ರೋಹಿತ್ ಶರ್ಮಾ 80 ರನ್(55 ಎಸೆತ, 6 ಬೌಂಡರಿ, 4 ಸಿಕ್ಸರ್) ಗಳಿಸಿದಾಗ ಔಟಾದರು. ಕೊನೆಯಲ್ಲಿ ಕೊಹ್ಲಿ ಮತ್ತು ಧೋನಿ ಬಿರುಸಿನ ಆಟವಾಡಿ ತಂಡದ ಮೊತ್ತವನ್ನು 200 ರನ್ ಗಡಿ ದಾಟಿಸಿದರು. ಕೊಹ್ಲಿ ಔಟಾಗದೇ 26 ರನ್(11 ಎಸೆತ, 3 ಬೌಂಡರಿ) ಧೋನಿ ಔಟಾಗದೇ 7 ರನ್(2 ಎಸೆತ, 1 ಸಿಕ್ಸರ್) ಹೊಡೆದರು.
Advertisement
ಟ್ರೆಂಟ್ ಬೌಲ್ಟ್ 4 ಓವರ್ ಎಸೆದು, 49 ರನ್ ನೀಡಿದರೆ, ಟಿಮ್ ಸೌಥಿ 44 ರನ್ ನೀಡಿದರು. ಇತರೆ ರೂಪದಲ್ಲಿ ಭಾರತಕ್ಕೆ 9 ರನ್ ಬಂದಿತ್ತು.
Advertisement
ದಾಖಲೆಯ ಜೊತೆಯಾಟ: ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ 98 ಎಸೆತಗಳಲ್ಲಿ 158 ರನ್ ಜೊತೆಯಾಟ ಮಾಡುವ ಮೂಲಕ ಭಾರತದ ಪರ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದರಲ್ಲಿ ಧವನ್ 80 ರನ್ ಹೊಡೆದಿದ್ದರೆ ರೋಹಿತ್ ಶರ್ಮ 70 ರನ್ ಹೊಡೆದರು. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 138 ರನ್ ಜೊತೆಯಾಟ ಮಾಡಿದ್ದರು.
Advertisement
ಭಾರತದ ರನ್ ಏರಿದ್ದು ಹೀಗೆ:
50 ರನ್ – 6.4 ಓವರ್
100 ರನ್ – 11.6 ಓವರ್
150 ರನ್ – 15.3 ಓವರ್
200 ರನ್ – 19.5 ಓವರ್