Latest

ಕೊಹ್ಲಿ ಬ್ಯಾಟಿಂಗ್, ಕುಲದೀಪ್ ಬೌಲಿಂಗ್ ಕಮಾಲ್: ಕೋಲ್ಕತ್ತಾದಲ್ಲೂ ಮಲಗಿದ ಆಸೀಸ್

Published

on

Share this

ಕೋಲ್ಕತ್ತಾ: ಎರಡನೇ ಏಕದಿನ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನದಿಂದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 50 ರನ್‍ಗಳಿಂದ ಜಯಗಳಿಸಿದೆ. ಈ ಮೂಲಕ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕದಿಂದಾಗಿ ಭಾರತ 50 ಓವರ್ ಗಳಲ್ಲಿ 252 ರನ್ ಗಳಿಗೆ ಆಲೌಟ್ ಆಗಿತ್ತು. ಗೆಲ್ಲಲು 253 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ 43.1 ಓವರ್ ಗಳಲ್ಲಿ 202 ರನ್ ಗಳಿಗೆ ಆಲೌಟ್ ಆಯ್ತು.

ಹ್ಯಾಟ್ರಿಕ್ ಸಾಧನೆ: 33ನೇ ಓವರ್ ನಲ್ಲಿ ಮ್ಯಾಥ್ಯು ವೇಡ್, ಆಸ್ಟಿನ್ ಅಗರ್, ಪ್ಯಾಟ್ ಕಮಿನ್ಸ್ ಅವರು ಔಟ್ ಮಾಡುವ ಮೂಲಕ ಕುಲದೀಪ್ ಯಾದವ್ ಹ್ಯಾಟ್ರಿಕ್ ಸಂಪಾದಿಸಿದರು. ವೇಡ್ 2 ರನ್ ಗಳಿಸಿದ್ದಾಗ ಬಾಲ್ ಬ್ಯಾಟ್ ಗೆ ಸಿಕ್ಕಿ ಬೌಲ್ಡ್ ಆದರೆ, ಅಗರ್ ಎಲ್‍ಬಿ ಆದರು. ಪ್ಯಾಟ್ ಕಮಿನ್ಸ್ ಧೋನಿಗೆ ಕ್ಯಾಚ್ ನೀಡಿದರು.

ಒಂದು ಹಂತದಲ್ಲಿ 147 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ 148 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿತ್ತು. ಈ ಹಿಂದೆ ಭಾರತದ ಪರ ಏಕದಿನದಲ್ಲಿ ಚೇತನ್ ಶರ್ಮಾ ಮತ್ತು ಕಪಿಲ್ ದೇವ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.

ಭಾರತದ ಪರ ವಿರಾಟ್ ಕೊಹ್ಲಿ 92 ರನ್(107 ಎಸೆತ, 8 ಬೌಂಡರಿ) ಅಜಿಂಕ್ಯಾ ರೆಹಾನೆ 55 ರನ್(64 ಎಸೆತ, 7 ಬೌಂಡರಿ) ಹೊಡೆದರು. ಆಸೀಸ್ ಪರ ನಾಯಕ ಸ್ಟೀವ್ ಸ್ಮಿತ್ 59 ರನ್(76 ಎಸೆತ, 8 ಬೌಂಡರಿ) ಹೊಡೆದರೆ ಮಾರ್ಕಸ್ ಸ್ಟೊಯಿನೆಸ್ ಔಟಾಗದೇ 62 ರನ್(65 ಎಸೆತ, 6 ಬೌಂಡರಿ, 3 ಸಿಕ್ಸರ್) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.

ಕುಲದೀಪ್ ಯಾದವ್ ಮತ್ತು ಭುನವೇಶ್ವರ್ ಕುಮಾರ್ ತಲಾ 3 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯಾ ಮತ್ತು ಚಹಲ್ ತಲಾ 2 ವಿಕೆಟ್ ಪಡೆದರು. ಆಸೀಸ್ ಪರ ಕೌಂಟರ್ ನೈಲ್ ಮತ್ತು ಕೇನ್ ರಿಚರ್ಡ್‍ಸನ್ ತಲಾ ಮೂರು ವಿಕೆಟ್ ಪಡೆದರೆ, ಕಮಿನ್ಸ್ ಮತ್ತು ಆಸ್ಟನ್ ಆಗರ್ ತಾಲ ಒಂದೊಂದು ವಿಕೆಟ್ ಪಡೆದರು.

ಹ್ಯಾಟ್ರಿಕ್ ವಿಕೆಟ್ ಪಡೆದ ಪಂದ್ಯವನ್ನು ತಿರುಗಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ಕುಲದೀಪ್ ಯಾದವ್ ವಿಶೇಷ ಗೌರವಕ್ಕೆ ಪಾತ್ರರಾದರೆ 92 ರನ್ ಸಿಡಿಸಿದ ಕೊಹ್ಲಿ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಇದನ್ನೂ ಓದಿ: 11ಕ್ಕೆ 3, 87ಕ್ಕೆ 5 ಕೊನೆಗೆ 7 ವಿಕೆಟ್ ನಷ್ಟಕ್ಕೆ 281 ರನ್: ಇದು ಧೋನಿ, ಪಾಂಡ್ಯಾ, ಭುವಿ ಬ್ಯಾಟಿಂಗ್ ಕರಾಮತ್ತು

https://twitter.com/naveenarendran/status/910886428250333185

 

 

Click to comment

Leave a Reply

Your email address will not be published. Required fields are marked *

Advertisement
Advertisement