ಇಂದೋರ್: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯವನ್ನು ಭಾರತ 5 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು ಗೆದ್ದುಕೊಂಡಿದೆ.
ಗೆಲ್ಲಲು 294 ರನ್ ಗಳ ಸವಾಲು ಸ್ವೀಕರಿಸಿದ ಭಾರತ 5 ವಿಕೆಟ್ ಗಳನ್ನು ಕಳೆದುಕೊಂಡು 47.5 ಓವರ್ ಗಳಲ್ಲಿ ಗುರಿಯನ್ನು ಮುಟ್ಟಿತು. ಈ ಮೂಲಕ ಇನ್ನು ಎರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿಯನ್ನು ಗೆದ್ದುಕೊಂಡಿದೆ.
Advertisement
ಅಜಿಂಕ್ಯಾ ರಹಾನೆ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ 21.4 ಓವರ್ ಗಳಲ್ಲಿ 139 ರನ್ ಗಳ ಜೊತೆಯಾಟ ಹಾಕುವ ಮೂಲಕ ಭದ್ರ ಬುನಾದಿ ಹಾಕಿದರು. ರೋಹಿತ್ ಶರ್ಮಾ 71 ರನ್(62 ಎಸೆತ, 6 ಬೌಂಡರಿ, 4 ಸಿಕ್ಸರ್), ಅಜಿಂಕ್ಯಾ ರಹಾನೆ 70 ರನ್(76 ಎಸೆತ, 9 ಬೌಂಡರಿ) ಹೊಡೆದರೆ ಕೊಹ್ಲಿ 28 ರನ್(35 ಎಸೆತ, 2 ಬೌಂಡರಿ) ಹೊಡೆದು ಔಟಾದರು.
Advertisement
ಕೇದಾರ್ ಜಾದವ್ 2 ರನ್ ಹೊಡೆದರೆ, ಕೊನೆಯಲ್ಲಿ 5ನೇ ವಿಕೆಟ್ ಗೆ ಹಾರ್ದಿಕ್ ಪಾಂಡ್ಯ ಮತ್ತು ಮನೀಷ್ ಪಾಂಡೆ 78 ರನ್ ಗಳ ಜೊತೆಯಾಟವಾಡಿದರು. ಗೆಲುವಿನ 10 ರನ್ ಬೇಕಿದ್ದಾಗ ಪಾಂಡ್ಯ 78 ರನ್(72 ಎಸೆತ, 5 ಬೌಂಡರಿ, 4 ಸಿಕ್ಸರ್) ಹೊಡೆದು ಕ್ಯಾಚ್ ನೀಡಿ ಹೊರನಡೆದರು. ಮನೀಷ್ ಪಾಂಡೆ ಔಟಾಗದೇ 36 ರನ್(32 ಎಸೆತ, 6 ಬೌಂಡರಿ), ಧೋನಿ ಔಟಾಗದೇ 3 ರನ್ ಹೊಡೆಯುವ ಮೂಲಕ ಗೆಲುವಿನ ದಡ ಸೇರಿಸಿದರು.
Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಆರನ್ ಫಿಂಚ್ 124 ರನ್(125 ಎಸೆತ, 12 ಬೌಂಡರಿ, 5 ಸಿಕ್ಸರ್) ನಾಯಕ ಸ್ಮಿತ್ 63 ರನ್( 71 ಎಸೆತ, 5 ಬೌಂಡರಿ) ಡೇವಿಡ್ ವಾರ್ನರ್ 42 ರನ್(44 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆಯುವ ಮೂಲಕ 6 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿತು.
Advertisement
37.5 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 224 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿ ಆಸ್ಟ್ರೇಲಿಯಾ 260 ರನ್ ಗಳಿಸಿದ್ದಾಗ 6 ವಿಕೆಟ್ ಕಳೆದುಕೊಂಡಿತ್ತು. ಆರಂಭದಲ್ಲಿ ಹೆಚ್ಚು ರನ್ ಬಿಟ್ಟು ಕೊಟ್ಟಿದ್ದ ಭಾರತೀಯ ಬೌಲರ್ ಗಳು ಕೊನೆಯ 12 ಓವರ್ ಗಳು 69 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ರನ್‍ಗೆ ಕಡಿವಾಣ ಹಾಕಿದ್ದು ಸರಣಿ ಗೆಲ್ಲಲು ಸಹಕಾರಿ ಆಯ್ತು. 1 ವಿಕೆಟ್ ಕಿತ್ತು 78 ರನ್ ಹೊಡೆದ ಹಾರ್ದಿಕ್ ಪಾಂಡ್ಯ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
4th ODI Fifty for @hardikpandya7 Paytm #INDvAUS pic.twitter.com/YJl4Um2eMm
— BCCI (@BCCI) September 24, 2017
Most ODI 100s by non Test players
9 William Porterfield
8 Aaron Finch
5 Paul Stirling
5 Ed Joyce
5 Ryan ten Doeschate#IndvAus
— Mohandas Menon (@mohanstatsman) September 24, 2017
Join the 'Swachhata Hi Seva’ movement and dedicate some time for the cause of #MyCleanIndia @swachhbharat @PMOIndia @narendramodi pic.twitter.com/1JiBTYHfWY
— BCCI (@BCCI) September 24, 2017