ಕೋಲ್ಕತ್ತಾ: ಆಸ್ಟ್ರೇಲಿಯಾದ ವಿರುದ್ಧದ ಎರಡನೇ ಏಕದಿನದ ಪಂದ್ಯದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದಾರೆ.
33ನೇ ಓವರ್ ನಲ್ಲಿ ಮ್ಯಾಥ್ಯು ವೇಡ್, ಆಸ್ಟಿನ್ ಅಗರ್, ಪ್ಯಾಟ್ ಕಮಿನ್ಸ್ ಅವರು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಸಂಪಾದಿಸಿದರು. ವೇಡ್ 2 ರನ್ ಗಳಿಸಿದ್ದಾಗ ಬೌಲ್ಡ್ ಆದರೆ, ಅಗರ್ ಎಲ್‍ಬಿ ಆದರು. ಪ್ಯಾಟ್ ಕಮಿನ್ಸ್ ಧೋನಿಗೆ ಕ್ಯಾಚ್ ನೀಡಿದರು.
Advertisement
ಒಂದು ಹಂತದಲ್ಲಿ 147 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ 148 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡಿತ್ತು.
Advertisement
ಈ ಹಿಂದೆ ಭಾರತದ ಪರ ಏಕದಿನದಲ್ಲಿ ಚೇತನ್ ಶರ್ಮಾ ಮತ್ತು ಕಪಿಲ್ ದೇವ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.
Advertisement
ಮೊದಲ ಏಕದಿನ ಪಂದ್ಯದಲ್ಲಿ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಹ್ಯಾಟ್ರಿಕ್ ಸಿಕ್ಸ್ ಹೊಡೆದಿದ್ದರು. ಈಗ ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಸಂಪಾದಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಕುಲದೀಪ್ ಯಾದವ್ ಅವರನ್ನು ಹೊಗಳಿ ಕಮೆಂಟ್ ಮಾಡುತ್ತಿದ್ದಾರೆ.
Advertisement
A hat-trick for @imkuldeep18. He becomes the third Indian to achieve this feat, after Kapil Dev and Chetan Sharma #INDvAUS pic.twitter.com/1VNgiDUvzj
— BCCI (@BCCI) September 21, 2017
https://twitter.com/naveenarendran/status/910886428250333185