ಮೊಹಾಲಿ: ಆಸೀಸ್ ವಿರುದ್ಧದ ಅಂತಿಮ 2 ಏಕದಿನ ಪಂದ್ಯಗಳಲ್ಲಿ ಕೆಲವು ಪ್ರಯೋಗಗಳನ್ನು ಮಾಡುತ್ತೇವೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದು, ಕೆಎಲ್ ರಾಹುಲ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲಿದ್ದರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಆರಂಭಿಕ ಶಿಖರ್ ಧವನ್ ಸತತ ವೈಫಲ್ಯ ಅನುಭವಿಸುತ್ತಿದ್ದು, ತಂಡದ ಆರಂಭಿಕರು ಪದೇ ಪದೇ ಉತ್ತಮ ಆರಂಭ ನೀಡಲು ವಿಫಲವಾಗುತ್ತಿರುವುದು ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹೆಚ್ಚಾಗಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಕಪ್‍ಗಾಗಿ ಉತ್ತಮ ಕಾಂಬಿನೇಶನ್ ರೂಪಿಸಲು ಅಂತಿಮ 2 ಪಂದ್ಯಗಳಲ್ಲಿ ಕೊಹ್ಲಿ ಪ್ರಯೋಗಕ್ಕೆ ಮುಂದಾಗಿದ್ದಾರೆ.
Advertisement
Advertisement
ನಾಳೆ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಮೊಹಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಸರಣಿ ಗೆಲುವಿನ ಪ್ರದರ್ಶನ ನಿರೀಕ್ಷೆ ಮಾಡಲಾಗುತ್ತಿದೆ. ಒಂದೊಮ್ಮೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡರೆ ದೆಹಲಿಯಲ್ಲಿ ನಡೆಯುವ ಪಂದ್ಯ ಮತ್ತಷ್ಟು ಕುತೂಹಲಕ್ಕೆ ಕಾರಣವಾಗುತ್ತದೆ.
Advertisement
ಈಗಾಗಲೇ ಧೋನಿ ಅವರಿಗೆ ಪಂದ್ಯದಿಂದ ವಿಶ್ರಾಂತಿ ನೀಡಿರುವುದರಿಂದ ಪಂತ್ ಸ್ಥಾನ ಪಡೆಯುವುದು ಖಚಿತವಾಗಿದ್ದು, ಶಮಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಭುವನೇಶ್ವರ್ ಅಂತಿಮ ಬಳಗದಲ್ಲಿ ಆಡುವುದು ಖಚಿತವಾಗಿದೆ. ಫಾರ್ಮ ಸಮಸ್ಯೆಯಿಂದ ಬಳಲುತ್ತಿರುವ ರಾಯುಡು ಈ ಪಂದ್ಯದಲ್ಲಿಯಾದ್ರು ಉತ್ತಮ ಪ್ರದರ್ಶನ ನೀಡುತ್ತರಾ ಕಾದು ನೊಡಬೇಕಿದೆ.
Advertisement
ಉಳಿದಂತೆ ಮೊಹಾಲಿ ಪಿಚ್ ಕೂಡ ಬ್ಯಾಟಿಂಗ್ ಪಿಚ್ ಆಗಿರುವುದರಿಂದ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ದುಕೊಳ್ಳಲಿದೆ. ಇದುವರೆಗೂ ಕ್ರೀಡಾಂಗಣದಲ್ಲಿ 24 ಅಂತರಾಷ್ಟ್ರೀಯ ಏಕದಿನ ಪಂದ್ಯಗಳು ನಡೆದಿದ್ದು, 15 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂದ್ಯವೇ ಗೆಲುವು ಪಡೆದಿದೆ. ಕಳೆದ ರಾಂಚಿ ಪಂದ್ಯದಂತೆ ಇಲ್ಲಿಯೂ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv