ಪರ್ತ್: ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ನಾಲ್ಕನೇಯ ದಿನ 11 ವಿಕೆಟ್ ಪತನಗೊಂಡಿದ್ದು, ಪಂದ್ಯ ಗೆಲ್ಲಲು ಭಾರತ 5 ವಿಕೆಟ್ ಗಳ ಸಹಾಯದಿಂದ 175 ರನ್ ಗಳಿಸಬೇಕಿದೆ.
ಪಂದ್ಯದ 4ನೇ ದಿನದಾಟವನ್ನ 4 ವಿಕೆಟ್ ಕಳೆದುಕೊಂಡು 134 ರನ್ ಗಳಿಂದ ಆರಂಭಿಸಿದ ಆಸ್ಟ್ರೇಲಿಯಾ ಇಂದು 109 ರನ್ ಗಳನ್ನು ಸೇರಿಸಿ 93.2 ಓವರ್ ಗಳಲ್ಲಿ 243 ರನ್ ಗಳಿಗೆ ಆಲೌಟ್ ಆಯ್ತು. ಪರಿಣಾಮವಾಗಿ ಟೀಂ ಇಂಡಿಯಾ ಗೆಲ್ಲಲು 287 ರನ್ ಗುರಿ ಪಡೆದ ಭಾರತ 5 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿದೆ.
Advertisement
Advertisement
ಆಸೀಸ್ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಖಾತೆ ತೆರೆಯುವ ಮುನ್ನವೇ ಔಟಾಗುವ ಮೂಲಕ ತಮ್ಮ ಕಳಪೆ ಫಾರ್ಮ್ ಮುಂದುವರಿಸಿದರು. ಇದರ ಬೆನ್ನಲ್ಲೇ ಅನುಭವಿ ಆಟಗಾರ ಪೂಜಾರರನ್ನು ಪೆವಿಲಿಯನ್‍ಗಟ್ಟಿದ್ದ ಹಜಲ್‍ವುಡ್ ತಂಡಕ್ಕೆ ಮತ್ತೊಂದು ಆಘಾತ ನೀಡಿದರು.
Advertisement
ಈ ಹಂತದಲ್ಲಿ ಆರಂಭಿಕ ಮುರಳಿ ವಿಜಯ್‍ರನ್ನು ಕೂಡಿಕೊಂಡ ಕೊಹ್ಲಿ ತಾಳ್ಮೆ ಆಟಕ್ಕೆ ಮುಂದಾದರು. ಈ ಜೋಡಿ ಮೂರನೇ ವಿಕೆಟ್‍ಗೆ 35 ರನ್ ಜೊತೆಯಾಟ ನೀಡಿತು. ಆದರೆ ಈ ವೇಳೆ ದಾಳಿಗಿಳಿದ ನಥನ್ ಲಯನ್ 17 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಹಾಗೂ 20 ರನ್ ಗಳಿಸಿದ್ದ ಮುರಳಿ ವಿಜಯ್ ವಿಕೆಟ್ ಕಿತ್ತು ಡಬಲ್ ಶಾಕ್ ನೀಡಿದರು. ಈ ವೇಳೆ ಟೀಂ ಇಂಡಿಯಾ 55 ರನ್ ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
Advertisement
Lyon and Hazlewood strike in the final session of day four to put Australia in a strong position to level the series in Perth. India are 112/5 at stumps, needing 175 runs on the final day to claim victory.#AUSvIND scorecard ➡️ https://t.co/viG01Bpvlc pic.twitter.com/edmRkR9Mqr
— ICC (@ICC) December 17, 2018
ಒತ್ತಡ ಸಂದರ್ಭದಲ್ಲಿ ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಉಪನಾಯಕ ರಹಾನೆ, ಯುವ ಆಟಗಾರ ಹನುಮ ವಿಹಾರಿ ನಿಧಾನಗತಿ ಬ್ಯಾಟಿಂಗ್ ನಡೆಸಿ, ಕೆಟ್ಟ ಎಸೆತಗಳನ್ನು ದಂಡಿಸುವ ಮೂಲಕ 5ನೇ ವಿಕೆಟ್‍ಗೆ ಮಹತ್ವದ 43 ರನ್ ಜೊತೆಯಾಟ ನೀಡಿದರು. 47 ಎಸೆತಗಳಲ್ಲಿ ಆಕರ್ಷಕ ಸಿಕ್ಸರ್ ಸೇರಿದಂತೆ 2 ಬೌಂಡರಿಗಳೊಂದಿಗೆ 30 ರನ್ ಗಳಿಸಿ ಮುನ್ನುಗುತ್ತಿದ್ದ ರಹಾನೆಯನ್ನು ಔಟ್ ಮೂಲಕ ಹಜಲ್‍ವುಡ್ ಮತ್ತೊಮ್ಮೆ ಮಿಂಚಿದರು.
ಯುವ ಆಟಗಾರರ ಮೇಲೆ ನಿರೀಕ್ಷೆ: ಆಸೀಸ್ ವಿರುದ್ಧ ಟೆಸ್ಟ್ ಟೂರ್ನಿಯಲ್ಲಿ ಮಹತ್ವ ಮುನ್ನಡೆ ಪಡೆಯಲು ಪರ್ತ್ ಟೆಸ್ಟ್ ಪಂದ್ಯದಲ್ಲಿ ಮಹತ್ವದ ಅವಕಾಶ ಲಭಿಸಿದ್ದು, ಸದ್ಯ ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ಯುವ ಆಟಗಾರರಾದ ಹನುಮ ವಿಹಾರಿ (24 ರನ್) ಹಾಗೂ ರಿಷಭ್ ಪಂತ್ (9 ರನ್) ಮೇಲೆ ಹೆಚ್ಚಿನ ನಿರೀಕ್ಷೆ ಇದೆ. 41 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿರುವ ಟೀಂ ಇಂಡಿಯಾಗೆ ಗೆಲುವು ಪಡೆಯಲು 5 ವಿಕೆಟ್‍ಗಳ ಸಹಾಯದಿಂದ 175 ರನ್ ಬೇಕಿದೆ. ಉಳಿದಂತೆ ಆಸೀಸ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಹಜಲ್‍ವುಡ್, ನಾಥನ್ ಲಯನ್ ತಲಾ 2 ವಿಕೆಟ್ ಹಾಗೂ ಸ್ಟಾರ್ಕ್ 1 ವಿಕೆಟ್ ಪಡೆದರು.
India in away chases this year:
Cape Town – Target 208 – LOST
Centurion – Target 287 – LOST
Edgbaston – Target 194 – LOST
Southampton – Target 245 – LOST
The Oval – Target 464 – LOST
Perth – Target 287 – ????#AusvInd
— Bharath Seervi (@SeerviBharath) December 17, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv