ನವದೆಹಲಿ: ಉದ್ಯಮಿ, ಭಾರತ್ ಬಜಾಜ್ ಆಟೋದ ಮಾಜಿ ಅಧ್ಯಕ್ಷರು ಆಗಿರುವ 83 ವರ್ಷದ ರಾಹುಲ್ ಬಜಾಜ್ ನಿಧನರಾಗಿದ್ದಾರೆ.ಈ ಕುರಿತಾಗಿ ಸಂಸ್ಥೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.
1972ರಲ್ಲಿ ಬಜಾಜ್ ಗ್ರೂಪ್‍ನ ಜವಾಬ್ದಾರಿ ವಹಿಸಿಕೊಂಡ ರಾಹುಲ್ ಬಜಾಜ್ ಅವರು, ಸುಮಾರು 5 ದಶಕಗಳ ಕಾಲ ಬಾಜಜ್ ಗ್ರೂಪ್ ಆಫ್ ಕಂಪನಿಗಳೊಂದಿಗೆ ಅನುಬಂಧ ಹೊಂದಿದ್ದರು. ಇದನ್ನೂ ಓದಿ: ಪಬ್ಲಿಕ್ ಟಿವಿಗೆ ದಶಕದ ಸಂಭ್ರಮ – ಶಾಂತಿಧಾಮಕ್ಕೆ 25 ಲಕ್ಷ ರೂ. ವಿತರಣೆ
ದೇಶದಲ್ಲೇ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ರಾಹುಲ್ ಬಜಾಜ್ ಅವರ ಕೂಡ ಒಬ್ಬರಾಗಿದ್ದು, ದ್ವಿಚಕ್ರ ವಾಹನ ಹಾಗೂ ತ್ರಿ ಚಕ್ರವಾಹನಗಳ ರಂಗದಲ್ಲಿ ಹಲವು ನೂತನ ಆವಿಷ್ಕಾರಗಳಿಗೆ ಕಾರಣರಾಗಿದ್ದರು, ಇವರ ಮುಂದಾಳತ್ವ ದಲ್ಲಿ ಬಜಾಜ್ ಆಟೋ ಸಂಸ್ಥೆ ದೇಶದಲ್ಲೇ ನಂಬರ್ ಒನ್ ಸ್ಥಾನ ಪಡೆದುಕೊಂಡಿತ್ತು. ಹಾರುಲ್ ಬಜಾಜ್ ಅವರು 2006 ರಿಂದ 2010ವರೆಗೂ ರಾಜ್ಯಸಭಾ ಸದಸ್ಯರಾಗಿದ್ದರು.
1938ರ ಜೂನ್ 10 ರಂದು ಜನಿಸಿದ್ದು, ಅರ್ಥಶಾಸ್ತ್ರ ಹಾಗೂ ಕಾನೂನು ಪದವಿ ಪಡೆದುಕೊಂಡಿದ್ದರು. ಆ ಬಳಿಕೆ ಹಾರ್ವರ್ಡ್ ವಿವಿಯಿಂದ ಎಂಬಿಎ ಪದವಿ ಪಡೆದುಕೊಂಡಿದ್ದರು. ರಾಹುಲ್ ಬಜಾಜ್ ಅವರ ಸೇವೆಗಳನ್ನು ಗುರುತಿಸಿದ ಕೇಂದ್ರ ಸರ್ಖಾರ 2001ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಕಳೆದ ಚೇರ್ಮನ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.