ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ (Pahalgam) ನಡೆದ ಹಿಂದೂಗಳ ನರಮೇಧದ ಬಳಿಕ ಕೇಂದ್ರ ಸರ್ಕಾರವು ಪಾಕ್ ಜೊತೆಗಿನ ಸಿಂಧೂ ನದಿ (Sindhu River) ಒಪ್ಪಂದವನ್ನು ಸ್ಥಗಿತಗೊಳಿಸಲು ನಿರ್ಧರಿಸಿತ್ತು. ಇದೀಗ ಭಾರತ ಚೆನಾಬ್ ನದಿಯ 2 ಡ್ಯಾಂನಿಂದ ಪಾಕ್‌ಗೆ ನೀರು ಹರಿಬಿಟ್ಟು ಮತ್ತೆ ಶಾಕ್ ಕೊಟ್ಟಿದೆ.
ಪಹಲ್ಗಾಮ್‌ನಲ್ಲಿ ನಡೆದ ಪೈಶಾಚಿಕ ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಭಾರತ (India) ಈಗಾಗಲೇ ಪಾಕ್ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದೆ. ಸಿಂಧೂ ನದಿ ಒಪ್ಪಂದ ಸ್ಥಗಿತಗೊಳಿಸಿದ ನಂತರ ನೀರು ಹರಿಸುವುದನ್ನು ನಿಲ್ಲಿಸಿದರೆ ರಕ್ತ ಹರಿಸುತ್ತೇವೆ ಎಂದಿದ್ದ ಪಾಕ್‌ಗೆ, ಭಾರತ ಉರಿ ಜಲಾಶಯದಿಂದ ಝಿಲಂ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಿ ಶಾಕ್ ಕೊಟ್ಟಿತ್ತು. ಆಗ ಯಾವುದೇ ಪೂರ್ವಸೂಚನೆ ನೀಡದೇ ಭಾರತ ಏಕಾಏಕಿ ನದಿಗೆ ನೀರನ್ನು ಹರಿಸಿದೆ ಎಂದು ಪಾಕ್ ಮಾಧ್ಯಮಗಳು ಭಾರತದ ವಿರುದ್ಧ ಆರೋಪ ಮಾಡಿದ್ದವು.ಇದನ್ನೂ ಓದಿ: ನಾಳೆ ಜಮ್ಮು ಕಾಶ್ಮೀರದ ಸರ್ಕಾರಿ, ಖಾಸಗಿ ಶಾಲೆಗಳು ಕ್ಲೋಸ್
ಇದೀಗ ಕೇಂದ್ರ ಸರ್ಕಾರ ರಾಂಬನ್‌ನಲ್ಲಿರುವ ಚೆನಾಬ್ ನದಿಯ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಎರಡು ಗೇಟ್ ಹಾಗೂ ರಿಯಾಸಿಯ ಸಲಾಲ್ ಅಣೆಕಟ್ಟಿನ ಮೂರು ಗೇಟ್‌ಗಳನ್ನು ತೆರೆದಿದೆ. ಈ ಪ್ರದೇಶದಲ್ಲಿ ಭಾರೀ ಮಳೆಯಿಂದ ಉಂಟಾಗುವ ನೀರಿನ ಮಟ್ಟ ಹಾಗೂ ಅಣೆಕಟ್ಟಿನ ಒತ್ತಡವನ್ನು ನಿರ್ವಹಿಸುವುದು ಇದರ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮೊದಲು ಚೆನಾಬ್‌ನಂತಹ ಪಶ್ಚಿಮ ನದಿಗಳ ಹರಿವಿನಲ್ಲಿ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳಬೇಕಾದರೂ ಭಾರತ, ಪಾಕಿಸ್ತಾನಕ್ಕೆ ತಿಳಿಸಬೇಕಿತ್ತು. ಆದರೆ ಸಿಂಧೂ ನದಿ ಒಪ್ಪಂದ ಸ್ಥಗಿತಗೊಂಡ ನಂತರ ಭಾರತ ಏಕಪಕ್ಷೀಯವಾಗಿ ವರ್ತಿಸುತ್ತಿದ್ದು, ದೇಶದ ಅಗತ್ಯಕ್ಕನುಸಾರವಾಗಿ ನೀರನ್ನು ತಡೆಹಿಡಿಯುವುದು ಹಾಗೂ ಬಿಡುಗಡೆ ಮಾಡುವುದನ್ನು ಮಾಡುತ್ತಿದೆ.ಇದನ್ನೂ ಓದಿ: ನವೋದಯ ಸ್ವಸಹಾಯ ಗುಂಪುಗಳ ರಜತ ಸಂಭ್ರಮದ ಸಮಾವೇಶಕ್ಕೆ ಸಿದ್ಧತೆ ಪೂರ್ಣ: ಡಾ. ಎಂ.ಎನ್.ರಾಜೇಂದ್ರ ಕುಮಾರ್