ಮೈಸೂರು: ಶಿವರಾಜ್‍ಕುಮಾರ್ ಅವರು ಕನ್ನಡ ಚಿತ್ರರಂಗದ ನಾಯಕತ್ವವಹಿಸಿಕೊಳ್ಳಲಿ ಎಂದು ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
Advertisement
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕನ್ನಡಪರ ಹೋರಾಟ ವಿಚಾರದಲ್ಲಿ ಸಿನಿಮಾ ನಟರು ಕೇವಲ ಟ್ವೀಟ್ ಮಾಡಿ ಸುಮ್ಮನಾಗಬಾರದು. ಸಿನಿಮಾದವರು ಬೆಳಗಾವಿಗೆ ಹೋಗಿ ಹೋರಾಟಕ್ಕೆ ಬೆಂಬಲ ನೀಡಬೇಕು. ಸಿನಿಮಾ ರಂಗದಲ್ಲಿ ನಾಯಕತ್ವದ ಕೊರತೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಒಳಚರಂಡಿಯಲ್ಲಿ ಅನಿಲ ಸ್ಫೋಟ 14 ಮಂದಿ ಸಾವು
Advertisement
Advertisement
ಡಾ. ರಾಜ್ ಅಂಬರೀಶ್ ನಂತರ ನಾಯಕತ್ವ ಇಲ್ಲದಂತಾಗಿದೆ. ಹೀಗಾಗಿ ಕನ್ನಡ ಹೋರಾಟಕ್ಕೆ ಬನ್ನಿ ಅಂತಾ ಕರೆಯಬೇಕಾದ ದುಸ್ಥಿತಿ ಇದೆ. ಸಿನಿಮಾ ರಂಗಕ್ಕೆ ಉತ್ತಮ ನಾಯಕತ್ವದ ಅವಶ್ಯಕತೆ ಇದೆ. ಹ್ಯಾಟ್ರಿಕ್ ಹೀರೋ ಡಾ ಶಿವರಾಜ್ ಕುಮಾರ್ ನಾಯಕತ್ವ ವಹಿಸಿಕೊಳ್ಳಬೇಕು. ಅವರ ನಾಯಕತ್ವದಲ್ಲಿ ಎಲ್ಲರೂ ಹೋರಾಟಕ್ಕೆ ಬೆಂಬಲ ನೀಡಬೇಕು. ನಾನು ಟ್ವಿಟ್ಟರ್ ಹೋರಾಟದ ವಿರೋಧಿ. ನಾನು ಬೆಳಗಾವಿಗೆ ಹೋಗುತ್ತೇನೆ. ಹಿಂದೆ ಗೋಕಾಕ್ ಚಳುವಳಿಗೆ ಡಾ ರಾಜ್‍ಕುಮಾರ್ ಅವರನ್ನು ಕರೆ ತಂದಿದ್ದು ನಮ್ಮ ತಂದೆ ಲಂಕೇಶ್. ಡಾ ರಾಜ್ ಅನುಮತಿ ಇಲ್ಲದೆ ಗೋಕಾಕ್ ಹೋರಾಟಕ್ಕೆ ರಾಜ್ ಅಂತಾ ಲೇಖನ ಬರೆದಿದ್ದರು. ನಂತರ ಡಾ ರಾಜ್ ಹೋರಾಟಕ್ಕೆ ಬಂದಿದ್ದರು ಎಂದರು. ಇದನ್ನೂ ಓದಿ: BJP ಅವಧಿಯಲ್ಲಿ ಅಭಿವೃದ್ಧಿಯಾಗಿದ್ದು ಮೋದಿ ಸ್ನೇಹಿತರಷ್ಟೇ: ಪ್ರಿಯಾಂಕಾ ಗಾಂಧಿ