ಭೋಪಾಲ್: ಮಾಜಿ ಪ್ರೇಮಿಯೊಬ್ಬ ಕುಡುಗೋಲಿನಿಂದ ಪ್ರಿಯತಮೆಯನ್ನು 38 ಬಾರಿ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಸುಪ್ರೀಯಾ ಜೈನ್(25) ಕೊಲೆಯಾದ ಯುವತಿ. ಆರೋಪಿ ಕಮಲೇಶ್ ಸಾಹು ಕೊಲೆ ಮಾಡಿದ ಮಾಜಿ ಪ್ರೇಮಿ. ಜೈನ್ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಳು. ಆದರೆ ಈಕೆ ಆಧುನಿಕ ಜೀವನ ಶೈಲಿಗೆ ಮಾರು ಹೋಗಿ ಅನೇಕ ಬಾಯ್ ಫ್ರೆಂಡ್ಸ್ ಗಳನ್ನು ಹೊಂದಿದ್ದರಿಂದ ಆರೋಪಿ ಪ್ರಿಯಕರ ಕೋಪಗೊಂಡು ಗುರುವಾರ ರಾತ್ರಿ ಕುಡುಗೋಲಿನಿಂದ 68 ಬಾರಿ ಕೊಚ್ಚಿ ಕೊಲೆ ಮಾಡಿದ್ದಾನೆ. ಸದ್ಯಕ್ಕೆ ಆರೋಪಿ ಕಮಲೇಶ್ ಸಾಹುವನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಏನಿದು ಪ್ರಕರಣ?
ಆರೋಪಿ ಕಮಲೇಶ್ ಸಾಹು ಮತ್ತು ಮೃತ ಸುಪ್ರಿಯಾ ಜೈನ್ ಪಿಯುಸಿಯಲ್ಲಿ ಒಟ್ಟಿಗೆ ವ್ಯಾಸಂಗ ಮಾಡುತ್ತಿದ್ದರು. ಈ ವೇಳೆ ಕಮಲೇಶ್ ಸುಪ್ರಿಯಾಗೆ ತಮ್ಮ ಪ್ರೇಮ ನಿವೇದನೆಯನ್ನು ಹೇಳಿಕೊಂಡಿದ್ದನು. ಆಗ ಸುಪ್ರಿಯಾ ನನಗೆ ಒಂದು ಕೆಲಸ ಸಿಕ್ಕ ಮೇಲೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಆದ್ದರಿಂದ ಆಕೆ ಹೇಳಿದ ಮಾತನ್ನ ನಂಬಿ ಸಾಹು ಆಕೆಗಾಗಿ ಕಾಯುತ್ತಿದ್ದನು.
Advertisement
Advertisement
ಸುಪ್ರಿಯಾ ತನ್ನ ಶಿಕ್ಷಣವನ್ನು ಮುಂದುವರಿಸಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದು, ಐಷಾರಾಮಿ ಜೀವನ ನಡೆಸುತ್ತಿದ್ದಳು. ಜೊತೆಗೆ ಆಧುನಿಕ ಜೀವನ ಶೈಲಿಗೆ ಮಾರು ಹೋಗಿ ಅನೇಕ ಗೆಳೆಯರನ್ನು ಹೊಂದಿದ್ದು, ಅವರೊಂದಿಗೆ ಸದಾ ಮಾತನಾಡುತ್ತಿದ್ದಳು. ಇದರಿಂದ ಕೋಪಗೊಂಡ ಸಾಹು ಆಕೆಯನ್ನು ಕೊಲೆ ಮಾಡಲು ನಿರ್ಧಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಗುರುವಾರ ಸುಪ್ರಿಯಾ ಊಟಕ್ಕೆಂದು ಕಚೇರಿಯಿಂದ ಹೊರಗೆ ಬಂದಿದ್ದಾಳೆ. ಆಗ ಹೊರಗಡೆಯೇ ಕಾಯುತ್ತಿದ್ದ ಸಾಹು ಕೂಡಲೇ ಓಡಿ ಹೋಗಿ ಸುಪ್ರಿಯಾಳ ಜಡೆಯನ್ನು ಹಿಡಿದು ಎಳೆದು ತಳ್ಳಿದ್ದಾನೆ. ಈ ವೇಳೆ ಆಕೆಯನ್ನು ರಕ್ಷಿಸಲು ಸಹೋದ್ಯೋಗಿಗಳು ಮುಂದಾಗಿದ್ದಾರೆ. ಆದರೆ ಸಾಹು ಕುಡುಗೋಲು ತೆಗೆದು ಅವರನ್ನು ಬೆದರಿಸಿದ್ದಾನೆ. ಬಳಿಕ ಕುಡುಗೋಲಿನಿಂದ 38 ಬಾರಿ ಕೊಚ್ಚಿದ್ದಾನೆ. ಈ ನಡುವೆ ಸಹೋದ್ಯೋಗಿಗಳು ಪೊಲೀಸರಿಗೆ ಕರೆ ಮಾಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬರವಷ್ಟರಲ್ಲಿ ಸಾಹು ಸುಪ್ರಿಯಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು ನೋಡುತ್ತಾ ಅಲ್ಲೇ ಕುಳಿತ್ತಿದ್ದನು. ನಂತರ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ನಾನು ಆಕೆಯನ್ನು ಪಿಯುಸಿಯಿಂದ ಪ್ರೀತಿಸುತ್ತಿದ್ದೆ. ಆದರೆ ನನಗೆ ಕೆಲಸ ಸಿಕ್ಕ ಮೇಲೆ ಮದುವೆಯಾಗುದಾಗಿ ಹೇಳಿ ಮೋಸ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಆಕೆ ತುಂಬಾ ಹುಡುಗರ ಜೊತೆ ಸಲಿಗೆಯಿಂದ ಮಾತನಾಡುತ್ತಿದ್ದಳು. ನಾನು ಅದನ್ನು ಕಣ್ಣಾರೆ ನೋಡಿದ್ದೇವೆ. ಸುಪ್ರಿಯಾ ಆಧುನಿಕ ಜೀವನ ಶೈಲಿಗೆ ಮಾರು ಹೋಗಿ ತುಂಡು ಬಟ್ಟೆಗಳನ್ನು ಧರಿಸುತ್ತಿದ್ದಳು. ಅದು ನನಗೆ ಇಷ್ಟವಾಗಿಲ್ಲ. ಆದ್ದರಿಂದ ಅವಳನ್ನು ಕೊಲೆ ಮಾಡಲು ನಿರ್ಧಾರ ಮಾಡಿದ್ದೆ ಎಂದು ವಿಚಾರಣೆ ವೇಳೆ ಆರೋಪಿ ಸಾಹು ಹೇಳಿದ್ದಾನೆ.
ಇತ್ತ ಗಂಭೀರವಾಗಿ ಗಾಯಗೊಂಡಿದ್ದ ನರಳುತ್ತಿದ್ದ ಸುಪ್ರಿಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಆಕೆ ಮೃತಪಟ್ಟಿದ್ದಾಳೆ. ಸದ್ಯಕ್ಕೆ ಕೊಲೆ ಆರೋಪದಡಿ ಸಾಹು ವಿರುದ್ಧ ಎಫ್‍ಐಆರ್ ದಾಖಲಿಸಿ ಬಂಧಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv