ಇಂದೋರ್ ದೇವಾಲಯ ದುರಂತ – ಸಾವಿನ ಸಂಖ್ಯೆ 35ಕ್ಕೆ ಏರಿಕೆ

Public TV
2 Min Read
Madhya Pradesh Indore Temple

– 14 ಜನರ ರಕ್ಷಣೆ
– ಮುಂದುವರಿದ ಹುಡುಕಾಟ ಕಾರ್ಯಾಚರಣೆ

ಭೋಪಾಲ್: ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ (Indore) ದೇವಾಲಯವೊಂದರಲ್ಲಿ (Temple) ನೆಲ ಕುಸಿದ ಪರಿಣಾಮ ಅದರಡಿಯಲ್ಲಿದ್ದ ಸುಮಾರು 40 ಅಡಿ ಆಳದ ಬಾವಿಗೆ (StepWell) ಭಕ್ತರು ಬಿದ್ದು ಸಾವನ್ನಪ್ಪಿರುವ ಘಟನೆ ದುರಂತವೇ ಎನಿಸಿಕೊಂಡಿದೆ. ಇಲ್ಲಿಯವರೆಗೆ ಸಾವನ್ನಪ್ಪಿರುವವರ ಸಂಖ್ಯೆ 35 ಕ್ಕೆ ಏರಿಕೆಯಾಗಿದೆ.

ವರದಿಗಳ ಪ್ರಕಾರ ಗುರುವಾರ ರಾಮನವಮಿಯ (Ram Navami) ಹಿನ್ನೆಲೆ ನಗರದ ಬಾಳೇಶ್ವರ ಮಹಾದೇವ ದೇವಾಲಯದಲ್ಲಿ ಹೆಚ್ಚಿನ ಭಕ್ತರು ಆಗಮಿಸಿದ್ದರು. ದೇವಾಲಯದ ಆವರಣದಲ್ಲಿ ಮೆಟ್ಟಿಲು ಬಾವಿಯಿದ್ದು, ಅದಕ್ಕೆ ಮೇಲ್ಛಾವಣಿ ಹಾಕಿ ಮುಚ್ಚಲಾಗಿತ್ತು. ಆದರೆ ಕಳೆದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದ ಕಾರಣ ಬಾವಿಯ ಮೇಲ್ಛಾವಣಿ ಭಾರ ತಡೆದುಕೊಳ್ಳಲಾರದೇ ಕುಸಿದುಬಿಟ್ಟಿದೆ. ಈ ವೇಳೆ ಅಲ್ಲಿ ನೆರೆದಿದ್ದ ಭಕ್ತರು ಬಾವಿಯೊಳಗೆ ಬಿದ್ದಿದ್ದಾರೆ.

Indore Ram Navami Step Well Temple Madhya Pradesh

ಘಟನೆ ನಡೆದ ತಕ್ಷಣಕ್ಕೆ ಪ್ರತ್ಯಕ್ಷದರ್ಶಿಗಳು ಸುಮಾರು 25 ಜನರು ಬಾವಿಯೊಳಗೆ ಬಿದ್ದಿದ್ದಾಗಿ ತಿಳಿಸಿದ್ದರು. ಆದರೆ ಅಂದಾಜಿಸಿದ್ದಕ್ಕಿಂತಲೂ ಹೆಚ್ಚು ಜನರು ಬಾವಿಯೊಳಗೆ ಬಿದ್ದಿದ್ದರು ಎಂಬುದು ತಿಳಿದುಬಂದಿದೆ. ಈಗಾಗಲೇ ಮೃತರ ಸಂಖ್ಯೆ 35ಕ್ಕೆ ಏರಿದೆ. ಬಾವಿಗೆ ಬಿದ್ದಿದ್ದ 14 ಜನರ ರಕ್ಷಣೆ ಮಾಡಲಾಗಿದೆ. ಒಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರಿಸಲಾಗಿದೆ. ಇದನ್ನೂ ಓದಿ: ಇಂದಿನಿಂದ SSLC ಪರೀಕ್ಷೆ ಪ್ರಾರಂಭ- ಎಕ್ಸಾಂಗೆ ಸಮವಸ್ತ್ರ ನಿಯಮ ಕಡ್ಡಾಯ

ಈ ದೇವಾಲಯವನ್ನು ಖಾಸಗಿ ಟ್ರಸ್ಟ್ ನಿರ್ವಹಿಸುತ್ತಿದ್ದು, ಇಂದೋರ್‌ನ ಹಳೆಯ ವಸತಿ ಕಾಲೋನಿಗಳಲ್ಲಿ ಒಂದಾಗಿರುವ ಸ್ನೇಹ್ ನಗರದಲ್ಲಿ ನೆಲೆಗೊಂಡಿದೆ. ನಿವಾಸಿಗಳು ಈ ಹಿಂದೆಯೇ ದೇವಾಲಯದ ಅಭಿವೃದ್ಧಿಗೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಅದರಂತೆ ಇಂದೋರ್ ಮುನ್ಸಿಪಲ್ ಕಾರ್ಪೋರೇಷನ್ ಕ್ರಮ ಕೈಗೊಂಡಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು ಎಂದು ಮೂಲಗಳು ತಿಳಿಸಿವೆ.

Madhya Pradesh Indore Temple 1

ಇದೀಗ ರಕ್ಷಿಸಲ್ಪಟ್ಟವರಲ್ಲಿ ಇಬ್ಬರು ಗಾಯಾಳುಗೆ ಚಿಕಿತ್ಸೆ ನೀಡಿದ ಬಳಿಕ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಚೌಹಾಣ್ ಅವರೊಂದಿಗೆ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ. ಇದನ್ನೂ ಓದಿ: ಪತ್ನಿ ನೇಣುಬಿಗಿದುಕೊಂಡ ಬೆನ್ನಲ್ಲೇ ಪತಿಯೂ ಸೂಸೈಡ್

Share This Article