ನವದೆಹಲಿ: ದೇಶದ ಸ್ವಚ್ಛ ನಗರಗಳ (India’s Cleanest City) ಪಟ್ಟಿಯಲ್ಲಿ ಮಧ್ಯಪ್ರದೇಶದ ಇಂದೋರ್ (Indore) ಮೊದಲ ಸ್ಥಾನ ಪಡೆದುಕೊಂಡಿದೆ. ಕರ್ನಾಟಕದ ಮೈಸೂರು (Mysuru) 3ನೇ ಸ್ಥಾನದಲ್ಲಿದೆ.
ಗುರುವಾರ ಸ್ವಚ್ಛ ಸರ್ವೇಕ್ಷಣ್ 2024-25 ಪ್ರಶಸ್ತಿಗಳನ್ನು ಘೋಷಿಸಲಾಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಸೂಪರ್ ಸ್ವಚ್ಛ ಲೀಗ್ ನಗರಗಳಲ್ಲಿ’ ಇಂದೋರ್ ಅನ್ನು ಅತ್ಯಂತ ಸ್ವಚ್ಛ ನಗರವೆಂದು ಘೋಷಿಸಲಾಗಿದೆ. ಇದನ್ನೂ ಓದಿ: ಬೇಲ್ ನೀಡುವಾಗ ಹೈಕೋರ್ಟ್ ತನ್ನ ವಿವೇಚನೆ ಬಳಸಿಲ್ಲ – ನ್ಯಾ.ಪರ್ದಿವಾಲಾ ಅಭಿಪ್ರಾಯ
ಇಂದೋರ್ ಮೊದಲ ಸ್ಥಾನದಲ್ಲಿದ್ದರೆ, ಛತ್ತೀಸಗಢದ ಅಂಬಿಕಾಪುರ 2 ಹಾಗೂ ಕರ್ನಾಟಕದ ಮೈಸೂರು 3 ಸ್ಥಾನ ಪಡೆದುಕೊಂಡಿವೆ. ಹತ್ತು ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ ಸ್ವಚ್ಛ ನಗರವಾಗಿ ಗುಜರಾತ್‌ನ ಅಹಮದಾಬಾದ್ ಹೊರಹೊಮ್ಮಿದೆ. ಛತ್ತೀಸಗಢದ ರಾಯ್ಪುರ, ಮಹಾರಾಷ್ಟ್ರದ ನವಿ ಮುಂಬೈ, ಮಧ್ಯಪ್ರದೇಶದ ಜಬಲ್ಪುರ, ಗುಜರಾತ್‌ನ ಸೂರತ್ ನಂತರದ ಸ್ಥಾನದಲ್ಲಿವೆ.
‘ಸೂಪರ್ ಲೀಗ್’ ವಿಭಾಗವು ಹೊಸದಾಗಿ ಸೇರ್ಪಡೆಯಾಗಿದೆ. 2024 ರ ಜನವರಿಯಲ್ಲಿ ಘೋಷಿಸಲಾದ ಈ ಪ್ರಶಸ್ತಿಗಳ ಹಿಂದಿನ ಆವೃತ್ತಿಯಲ್ಲಿ, ಇಂದೋರ್ ಸತತ ಏಳನೇ ಬಾರಿಗೆ ದೇಶದ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿತು. ಸೂರತ್ ಜಂಟಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಪ್ಲೇಗ್ ಪೀಡಿತ ನಗರ ಎಂಬ ತನ್ನ ಹಿಂದಿನ ಪರಂಪರೆಯನ್ನು ಅಳಿಸಿಹಾಕಿದೆ. ಇದನ್ನೂ ಓದಿ: ಭಾರೀ ಮಳೆಗೆ ಭೂಕುಸಿತ, ಓರ್ವ ಮಹಿಳೆ ಸಾವು – ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಕೇಂದ್ರದ ಸ್ವಚ್ಛ ಭಾರತ ಮಿಷನ್-ನಗರದ ಅಡಿಯಲ್ಲಿ ಆಯೋಜಿಸಲಾಗಿದೆ. ಇದನ್ನು ಸರ್ಕಾರವು ವಿಶ್ವದ ಅತಿದೊಡ್ಡ ನಗರ ನೈರ್ಮಲ್ಯ ಮತ್ತು ಸ್ವಚ್ಛತಾ ಸಮೀಕ್ಷೆ ಎಂದು ಪ್ರಚಾರ ಮಾಡಿದೆ.
ಗುರುವಾರ ನಡೆದ ಕಾರ್ಯಕ್ರಮದ ಭಾಗವಾಗಿ ಒಟ್ಟು 78 ಪ್ರಶಸ್ತಿಗಳನ್ನು ಘೋಷಿಸಲಾಯಿತು. ಇದರಲ್ಲಿ ಖಟ್ಟರ್, ಅವರ ಕಿರಿಯ ಸಹೋದ್ಯೋಗಿ MoS ತೋಖನ್ ಸಾಹು ಮತ್ತು MoHUA ಕಾರ್ಯದರ್ಶಿ ಶ್ರೀನಿವಾಸ್ ಕೆ. ಭಾಗವಹಿಸಿದ್ದರು.