– ಇಂದೋರ್ ಮಾದರಿಯಲ್ಲಿ ಕಸ ಸಂಗ್ರಹಣೆ ಯಶಸ್ವಿ
ಬೆಂಗಳೂರು: ನಗರದ ಸ್ವಚ್ಛತೆ ಹೆಚ್ಚಿಸಿ, ಕಸ ವಿಂಗಡಣೆ ಮಾಡಲು ಬಿಬಿಎಂಪಿ ಮಾಡಿರುವ ಪ್ಲಾನ್‍ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇಂದೋರ್ ಮಾದರಿ ಕಸ ಸಂಗ್ರಹಕ್ಕೆ ಫುಲ್ ರೆಸ್ಪಾನ್ಸ್ ಬರುತ್ತಿದೆ.
ನಿತ್ಯ 2 ಶಿಫ್ಟ್ ಗಳಲ್ಲಿ ಕಸ ಸಂಗ್ರಹಣೆಗೆ ಬಿಬಿಎಂಪಿ ಮುಂದಾಗಿದ್ದು, ಇದನ್ನು ಪ್ರಾಯೋಗಿಕವಾಗಿ 5 ವಾರ್ಡ್‍ಗಳಲ್ಲಿ ಜಾರಿಗೆ ತರಲಾಗಿದೆ. ರಾತ್ರಿ ಪಾಳಿಯಲ್ಲಿ ಕಸ ಸಂಗ್ರಹಣೆಗೆ ಭಾರೀ ಪ್ರತಿಕ್ರಿಯೆ ದೊರೆಯುತ್ತಿದೆ. ಜನರು ಕ್ಯೂ ನಿಂತು ಕಸ ಹಾಕುತ್ತಿದ್ದಾರೆ. ಮನೆ ಕಸ, ವಾಣಿಜ್ಯ ಕಸ ಎಂದು ಎರಡು ಬಗೆಯ ಕಸ ಸಂಗ್ರಹಣೆ ಮಾಡಲಾಗುತ್ತಿದೆ.
Advertisement
Advertisement
ಇಂದೋರ್ ಮಾದರಿಯಲ್ಲಿ ಕಸ ಸಂಗ್ರಹಣೆಗೆ ಸದ್ಯ 5 ವಾರ್ಡ್‍ಗಳ ಆಯ್ಕೆ ಮಾಡಲಾಗಿದೆ. ಈ ಪ್ರಕಾರ ಜೋಗುಪಾಳ್ಯ, ಜಕ್ಕೂರು ವಾರ್ಡ್ ಸೇರಿದಂತೆ 5 ವಾರ್ಡ್‍ಗಳಲ್ಲಿ ಕಸ ಸಂಗ್ರಹಣೆಗೆ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.
Advertisement
ಈ ಕುರಿತು ಮಾತನಾಡಿದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಇಂದೋರ್ ಮಾದರಿಯಲ್ಲಿ ಕಸ ಸಂಗ್ರಹಣೆಗೆ ಜನರ ಸ್ಪಂದನೆ ಹೆಚ್ಚಿದೆ. ಜತೆಗೆ ಹಸಿ, ಒಣ ಕಸ ಸಂಗ್ರಹಣೆ ಪ್ರಮಾಣವೂ ಹೆಚ್ಚಿದೆ. ಹೀಗಾಗಿ ಬಹುತೇಕ ಪ್ರಾಯೋಗಿಕ ಕಸ ಸಂಗ್ರಹಣೆ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.