ಇಂದೋರ್: ಕೈದಿಗಳು ಬಿಡುಗಡೆಯಾದ ನಂತರ ಅವರ ಜೀವನೋಪಾಯಕ್ಕೆ ಸಹಾಯ ಮಾಡುವ ಪ್ರಯತ್ನದಲ್ಲಿ, ಇಂದೋರ್ ಕೇಂದ್ರ ಕಾರಾಗೃಹವು ಅವರ ಶಿಕ್ಷಣವನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತಿದೆ.
ಈಗಾಗಲೇ ಕಾರಾಗೃಹವು 83 ಕೈದಿಗಳಿಗೆ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ನಡೆಸುತ್ತಿದೆ. 253 ಕೈದಿಗಳು ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ. ಇದನ್ನೂ ಓದಿ: ಈಶ್ವರಪ್ಪನನ್ನು ಸಂಪುಟದಿಂದ ವಜಾಗೊಳಿಸಿ, ಕೂಡಲೇ ಬಂಧಿಸಬೇಕು: ಸಿದ್ದರಾಮಯ್ಯ
Advertisement
Advertisement
ಕಳೆದ 3 ವರ್ಷದ ಹಿಂದೆ 2019 ರಲ್ಲಿ, ಕಾರಾಗೃಹ ನೀಡುವ ವಿಷಯಗಳಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಪಡೆದಿದ್ದು, 67 ಕೈದಿಗಳು ಜೈಲಿನಿಂದಲೇ ಪದವಿ ಪಡೆದಿದ್ದರು.
Advertisement
ಕಾರಾಗೃಹವು ಪ್ರಸ್ತುತ ಶಾಲಾ ಪದವಿಗಳನ್ನು, ಜೊತೆಗೆ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳನ್ನು ನೀಡುತ್ತಿದ್ದು ಶಿಕ್ಷಕರನ್ನೂ ನೇಮಿಸಿದೆ. ಇದನ್ನೂ ಓದಿ: ಅಜಾನ್ ತೀರ್ಪು ಎಲ್ಲ ಧರ್ಮದ ದೇವಸ್ಥಾನಗಳಿಗೆ ಅನ್ವಯ: ನಾಸಿರ್ ಹುಸೇನ್
Advertisement
ಈ ಬಗ್ಗೆ ಮಾತನಾಡಿದ ಕೇಂದ್ರ ಕಾರಾಗೃಹದ ಅಧೀಕ್ಷಕಿ ಅಲ್ಕಾ ಸೋಂಕರ್, ಜೈಲಿಗೆ ಬರುವ ಕೈದಿಗಳ ಬಗ್ಗೆ ಮತ್ತು ಅವರು ಎಷ್ಟು ವಿದ್ಯಾಭ್ಯಾಸ ಹೊಂದಿದ್ದಾರೆ. ಅವರ ಜೀವನದಲ್ಲಿ ಶಿಕ್ಷಣ ಎಷ್ಟು ಮುಖ್ಯ ಎಂದು ನಮಗೆ ತಿಳಿದಿದೆ. ಸಾಕ್ಷರತಾ ಅಭಿಯಾನದಲ್ಲಿ ಜೈಲು ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ. ಸುಮಾರು 50 ಕೈದಿಗಳು ಸಂಪೂರ್ಣವಾಗಿ ಅನಕ್ಷರಸ್ಥರಾಗಿದ್ದು, ಇಲ್ಲಿ ಅವರು ಶಾಲಾ ಶಿಕ್ಷಣದ ನಂತರ ತಮ್ಮ ಪದವಿಯನ್ನು ಪೂರ್ಣಗೊಳಿಸುತ್ತಾರೆ. ಇದರಿಂದಾಗಿ ಅವರು ಇತರ ಕೈದಿಗಳಿಗೂ ಕಲಿಸುತ್ತಿದ್ದಾರೆ ಎಂದು ತಿಳಿಸಿದರು.
ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ (ಐಜಿಎನ್‍ಒಯೂ) ನೀಡುತ್ತಿರುವ 63 ವಿಷಯಗಳಿಗೆ ಕೈದಿಗಳು ತಮ್ಮನ್ನು ತಾವು ನೋಂದಾಯಿಸಿಕೊಳ್ಳಬಹುದು ಎಂದರು.
ಇಲ್ಲಿ ಕೈದಿಗಳಿಗಾಗಿ ಎಮ್‍ಬಿಎ, ಎಮ್‍ಕಾಂ, ಎಲ್‍ಎಲ್‍ಬಿ, ಅಂತಹ ಹಲವಾರು ಕೋರ್ಸ್‍ಗಳಿವೆ. ಬಿಡುಗಡೆಯ ನಂತರ ಕೈದಿಗಳು ತಮ್ಮ ಉತ್ತಮ ಜೀವನಕ್ಕಾಗಿ ದಾರಿ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಒಬ್ಬ ಕೈದಿಯು ಅಧ್ಯಯನ ಮಾಡಲು ಪ್ರಾರಂಭಿಸಿದಾಗ, ಇತರ ಖೈದಿಗಳು ಸಹ ಅವರಿಂದ ಸ್ಪೂರ್ತಿ ಪಡೆಯುತ್ತಾರೆ. ಅವರು ಕೂಡಾ ಅಧ್ಯಯನ ಮಾಡಲು ಪ್ರಾರಂಭಿಸುತ್ತಾರೆ ಎಂದರು.