ಜಕಾರ್ತ: ಟೇಕಾಫ್‍ಗೆ ವೇಳೆ ಬಾಂಬ್ ಇದೆ ಎಂದು ತಿಳಿದು ವಿಮಾನದಿಂದ ಹಾರಿ 10 ಮಂದಿ ಗಾಯಗೊಂಡ ಘಟನೆ ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿರುವ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಇಂಡೋನೇಷ್ಯಾ ಲಯನ್ ಏರ್ ಲೈನ್ಸ್ ಗೆ ಸೇರಿದ್ದ ಬೋಯಿಂಗ್ 737 ವಿಮಾನ, ಇನ್ನೆನೂ ಕೆಲವೇ ಕ್ಷಣಗಳಲ್ಲಿ ಟೆಕಾಫ್‍ಗೆ ಸಿದ್ಧಗೊಂಡಿತ್ತು. ವಿಮಾನದಲ್ಲಿ ಸಹಪ್ರಯಾಣಿಕ ಹೇಳಿದ `ಬಾಂಬ್‍ಜೋಕ್’ ಅನ್ನು ಗಂಭೀರವಾಗಿ ತೆಗೆದುಕೊಂಡ ಪ್ರಯಾಣಿಕರು ವಿಮಾನದ ತುರ್ತು ದ್ವಾರವನ್ನು ಒಡೆದು ಕೆಳಕ್ಕೆ ಹಾರಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.
Advertisement
ಘಟನೆಯ ಕುರಿತು ಅಧಿಕಾರಿಗಳು ವಿಮಾನವನ್ನು ಪರಿಶೀಲಿಸಿದ್ದು, ವಿಮಾನದಲ್ಲಿ ಯಾವುದೇ ಬಾಂಬ್ ಹಾಗೂ ಸ್ಫೋಟಕಗಳು ದೊರೆತಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಬಾಂಬ್ ಇದೆ ಎಂದು ಜೋಕ್ ಮಾಡಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಣ ಉಳಿಸಿಕೊಳ್ಳುವ ಬರದಲ್ಲಿ ಪ್ರಯಾಣಿಕರು ಮೇಲಿಂದ ಹಾರಿದ್ದರಿಂದ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಪ್ರಯಾಣಿಕರು ವಿಮಾನದಲ್ಲಿ ಬಾಂಬ್ ಇದೆ ಹೇಳಿದರೂ ಕೂಡಲೇ ನಾನು ವಿಮಾನದ ತುರ್ತು ನಿರ್ಗಮದ ಮೂಲಕ ಹೊರಗೆ ಹೋಗುವಂತೆ ಸೂಚಿಸಿದೆ ಎಂದು ವಿಮಾನದ ಕ್ಯಾಪ್ಟನ್ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.
Advertisement
ಈ ಘಟನೆಯಿಂದಾಗಿ ವಿಮಾನ ಹಾರಾಟ ವಿಳಂಬವಾಗಿದ್ದು, ಇದನ್ನು ಜೋಕ್ ಆಗಿ ತಿಳಿಯದೆ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ತುರ್ತು ದ್ವಾರಗಳನ್ನು ತೆಗೆಯುವಂತೆ ತಿಳಿಸಿದ್ದೇವೆ ಎಂದು ಲಯನ್ ಸಂಸ್ಥೆಯ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ.
Advertisement
https://youtu.be/Bjcoq4-oGAE