ಬಾಲಿ: ಕಳೆದ ಎರಡು ದಿನಗಳಿಂದ ಇಂಡೋನೇಷ್ಯಾದ(Indonesia) ಬಾಲಿಯಲ್ಲಿ(Bali) ನಡೆದ ಜಿ-20(G-20) ಶೃಂಗಸಭೆ ಮುಗಿದಿದೆ. ಕೊನೆಯ ದಿನವಾದ ಇಂದು ಇಂಡೋನೇಷ್ಯಾದಿಂದ ಭಾರತ(India) ಜಿ-20 ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ಸ್ವೀಕರಿಸಿದೆ.
ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ ಪ್ರಧಾನಿ ನರೇಂದ್ರ ಮೋದಿಯವರಿಗೆ(Narendra Modi) ಬ್ಯಾಟನ್ ಹಸ್ತಾಂತರಿಸಿದರು. ಇದು ಭಾರತೀಯರು ಹಮ್ಮೆ ಪಡಬೇಕಾದ ಕ್ಷಣ ಎಂದು ಮೋದಿ ವ್ಯಾಖ್ಯಾನಿಸಿದ್ದಾರೆ. ಜಿ-20 ಶೃಂಗಸಭೆಯ ನಿರ್ಣಯವನ್ನು ಪ್ರಕಟಿಸಲಾಗಿದ್ದು ಅದರಲ್ಲಿ ಪ್ರಮುಖವಾಗಿ ಶಾಂಘೈ ಶೃಂಗಸಭೆಯಲ್ಲಿ ಮೋದಿಯ ಭಾಷಣದ ಅಂಶಗಳನ್ನು ಪ್ರಸ್ತಾಪಿಸಲಾಗಿದೆ.
Advertisement
Advertisement
ಅಣ್ವಸ್ತ್ರ ಬೆದರಿಕೆಯನ್ನು ಯಾವುದೇ ಕಾರಣಕ್ಕೆ ಒಪ್ಪಲ್ಲ. ಮಾತುಕತೆಯ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಿ. ಇದು ಯುದ್ಧದ ಕಾಲವಲ್ಲ ಎಂದು ಶಾಂಘೈ ಶೃಂಗಸಭೆಯಲ್ಲಿ ಮೋದಿ ಹೇಳಿದ್ದರು.
Advertisement
Advertisement
ಈ ಶೃಂಗಸಭೆಯಲ್ಲಿ ಮೋದಿ ಹಾಗೂ ಬ್ರಿಟನ್ ಪ್ರಧಾನಿ ರಿಶಿ ಸುನಾಕ್(Rishi Sunak) ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇದರ ಫಲವಾಗಿ ಬ್ರಿಟನ್(Britain) ಭಾರತೀಯರಿಗೆ ಅನುಕೂಲವಾಗುವಂತೆ ಹೊಸ ವೀಸಾ(Visa) ನೀತಿಯನ್ನು ಪ್ರಕಟಿಸಿದೆ. ಇದರ ಪ್ರಕಾರ ಪ್ರತಿವರ್ಷ ಮೂರು ಸಾವಿರ ಭಾರತೀಯರಿಗೆ ಬ್ರಿಟನ್ ವೀಸಾ ನೀಡಲಿದೆ. ಇದನ್ನೂ ಓದಿ: ಮೋದಿ ಭೇಟಿ ಬೆನ್ನಲ್ಲೇ ಭಾರತೀಯರಿಗೆ 3,000 ವೀಸಾ ಯೋಜನೆಗೆ ಬ್ರಿಟನ್ ಪ್ರಧಾನಿ ಚಾಲನೆ
ದೆಹಲಿಯ ಪ್ರಗತಿ ಮೈದಾನದಲ್ಲಿ 2023ರ ಜಿ20 ಶೃಂಗಸಭೆ ಸೆ.9 ಮತ್ತು 10 ರಂದು ನಡೆಯಲಿದೆ. 2008ರಲ್ಲಿ ಜಿ20 ಶೃಂಗಸಭೆ ಆರಂಭಗೊಂಡಿದ್ದು ಮೊದಲ ಬಾರಿಗೆ ಭಾರತಕ್ಕೆ ಅಧ್ಯಕ್ಷ ಸ್ಥಾನ ಹಸ್ತಾಂತರವಾಗಿದೆ. ಶೃಂಗಸಭೆಯನ್ನು ಆಯೋಜಿಸುವ 18ನೇ ನಗರ ದೆಹಲಿಯಾಗಲಿದೆ. ಮೊದಲ ಮತ್ತು ಮೂರನೇ ಶೃಂಗಸಭೆ ಅಮೆರಿಕದಲ್ಲಿ ನಡೆದಿತ್ತು.