ಜಕಾರ್ತಾ: ಪೊಲೀಸರು ಕಳ್ಳರ ಬಾಯಿ ಬಿಡಿಸಲು ಲಾಠಿಯಲ್ಲಿ ಹೊಡೆಯುತ್ತಾರೆ ಅಥವಾ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಆದರೆ ಇಂಡೋನೇಷ್ಯಾ ಪೊಲೀಸರು ದೇಹದ ಮೇಲೆ ಹಾವನ್ನು ಬಿಟ್ಟು ಬಾಯಿ ಬಿಡಿಸಿದ್ದಾರೆ.
ಇಂಡೋನೇಷ್ಯಾದ ಪಪುವಾ ಪ್ರಾಂತ್ಯದ ಪೊಲೀಸರು ಹಾವನ್ನು ಬಿಟ್ಟು ವಿಭಿನ್ನವಾಗಿ ಕಳ್ಳನಿಂದ ಸತ್ಯ ಹೇಳಿಸಲು ಮಾಡಿದ್ದ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
Advertisement
ವಿಡಿಯೋದಲ್ಲಿ ಏನಿದೆ?
ಮೊಬೈಲ್ ಕಳ್ಳತನದ ಆರೋಪದಲ್ಲಿ ಒಬ್ಬಾತ ಬಂಧನಕ್ಕೆ ಒಳಗಾಗಿದ್ದ. ಬಂಧನಕ್ಕೆ ಒಳಗಾಗಿದ್ದ ಆತ ವಿಚಾರಣೆ ವೇಳೆ ಸರಿಯಾದ ಮಾಹಿತಿಯನ್ನು ನೀಡಿರಲಿಲ್ಲ. ಹೀಗಾಗಿ ಬಾಯಿ ಬಿಡಿಸಲು ಪೊಲೀಸರು ಆತನ ಎರಡು ಕೈಗಳನ್ನು ಕಟ್ಟಿ ಹಾಕಿ ಅವನ ಕುತ್ತಿಗೆಯ ಸುತ್ತ ಹಾವನ್ನು ಬಿಟ್ಟಿದ್ದಾರೆ. ಇದರಿಂದ ಕಳ್ಳ ಭಯದಿಂದ ಕುಳಿತಿದ್ದ. ಬಳಿಕ ಅಧಿಕಾರಿಯೊಬ್ಬರು ಬಂದು ಹಾವಿನ ಬಾಲ ಹಿಡಿದು ಕಳ್ಳನ ಬಾಯಿ ಹತ್ತಿರ ತೆಗೆದುಕೊಂಡು ಹೋಗಿ ಹಿಂಸೆ ಕೊಟ್ಟಿದ್ದಾರೆ. ಇದರಿಂದ ಭಯಗೊಂಡ ಕಳ್ಳ ಚೀರಾಡಿದ್ದಾನೆ.
Advertisement
ಅಷ್ಟಕ್ಕೂ ಸುಮ್ಮನಾಗದ ಪೊಲೀಸರ ಹಾವಿನ ಎಡೆಯನ್ನು ಹಿಡಿದುಕೊಂಡು ಕಳ್ಳನ ಮುಖದ ಬಳಿ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕಳ್ಳ ತುಂಬಾ ಭಯಪಟ್ಟು ಕೂಗಾಡಿ, ಒದ್ದಾಡಿದ್ದಾನೆ. ಆದರೆ ಪೊಲೀಸ್ ಅಧಿಕಾರಿ ಮಾತ್ರ ನಗುತ್ತಾ ಮನರಂಜನೆ ರೀತಿಯಲ್ಲಿ ಕಳ್ಳನಿಗೆ ಹಿಂಸೆ ಕೊಟ್ಟಿದ್ದಾರೆ. ಇದೆಲ್ಲವನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
Advertisement
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆ ಕೇಳಿಬಂದಿದೆ. ಬಳಿಕ ಇಂಡೋನೇಷ್ಯಾದ ಪೊಲೀಸರು ನೆಟ್ಟಿಗರ ಬಳಿ ಕ್ಷಮೆ ಯಾಚಿಸಿದ್ದಾರೆ. ವಿಡಿಯೋ ವೈರಲ್ ಆದ ನಂತರ, ಪಪುವಾ ಪೊಲೀಸ್ ವಕ್ತಾರರು, ಅಧಿಕಾರಿಗಳಿಗೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ಸಹ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv