-12 ಮೂಟೆ, 860 ಕೆ.ಜಿ. ತೂಕ
ಜಕಾರ್ತ: ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿಗೆ ನೀಡಬೇಕಾಗಿದ್ದ ಜೀವನಾಂಶದ ಹಣವನ್ನು ನಾಣ್ಯಗಳ ರೂಪದಲ್ಲಿ ನೀಡಿದ್ದಾನೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ಬರೋಬ್ಬರಿ 860 ಕೆ.ಜಿ. ತೂಕವುಳ್ಳ 12 ಮೂಟೆಗಳನ್ನು ನೀಡಿದ್ದಾನೆ.
ಗುರುವಾರ ಸ್ಥಳೀಯ ಸಿವಿಲ್ ನ್ಯಾಯಾಲಯಕ್ಕೆ ಹಾಜರಾದ ಡ್ವಿ ಸ್ಸುಲಾರ್ಟೊ ಎಂಬವರು 12 ಮೂಟೆಗಳಲ್ಲಿ ಒಟ್ಟು 10,000 ಡಾಲರ್ (6.97 ಲಕ್ಷ ರೂ.) ತಂದು ವಿಚ್ಛೇದಿತ ಪತ್ನಿಗೆ ಪರಿಹಾರವಾಗಿ ನೀಡಿದ್ದಾರೆ. ಆ ಮೂಟೆಗಳ ತೂಕ ಬರೋಬ್ಬರಿ 890 ಕಿಲೋ ಗ್ರಾಂ ಇತ್ತು ಎಂದು ವರದಿಯಾಗಿದೆ.
Advertisement
ಒಂಬತ್ತು ವರ್ಷಗಳಿಂದ ಡ್ವಿ ಸ್ಸುಲಾರ್ಟೊ ತನ್ನ ವಿಚ್ಛೇದಿತ ಪತ್ನಿಗೆ ಜೀವನಾಂಶವನ್ನು ನೀಡಿರಲಿಲ್ಲ. ಹೀಗಾಗಿ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು. ಗುರುವಾರ ನ್ಯಾಯಾಲಯಕ್ಕೆ ಹಾಜರಾದ ಡ್ವಿ ಸ್ಸುಲಾರ್ಟೊ ವಿಚ್ಛೇದಿತ ಪತ್ನಿಗೆ ನಾಣ್ಯರೂಪದಲ್ಲಿ ಜೀವನಾಂಶ ನೀಡಿದ್ದಾನೆ. ಇದನ್ನು ಓದಿ: ವಿಚ್ಛೇದಿತ ಪತ್ನಿಗೆ ಜೀವನಾಂಶದ ಹಣವನ್ನ ಚಿಲ್ಲರೆ ರೂಪದಲ್ಲಿ ನೀಡಿದ ಪತಿ!
Advertisement
‘ನನ್ನ ಕಕ್ಷಿದಾರರನ್ನು ಅವಮಾನಿಸಲು ಡ್ವಿ ಸ್ಸುಲಾರ್ಟೊ ಚಿಲ್ಲರೆ ಹಣವನ್ನು ನೀಡುತ್ತಿದ್ದಾರೆ’ ಎಂದು ವಿಚ್ಛೇದಿತ ಮಹಿಳೆಯ ಪರ ವಕೀಲ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡ್ವಿ ಸ್ಸುಲಾರ್ಟೊ ಪರ ವಕೀಲ, ನನ್ನ ಕಕ್ಷಿದಾರ ಕೆಳ ದರ್ಜೆಯ ನಾಗರಿಕ ಸೇವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತನ್ನ ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಣ ಸಂಗ್ರಹಿಸಿದ್ದು, ಅವರೆಲ್ಲರೂ ಚಿಲ್ಲರೆ ಹಣ ನೀಡಿದ್ದರಿಂದ ಅದನ್ನು ಕೋರ್ಟ್ ಗೆ ಒಪ್ಪಿಸಿದ್ದಾರೆ ಎಂದರು.
Advertisement
ನಾನು ಬಡತನದಲ್ಲಿ ಇದ್ದೇನೆ ಎನ್ನುವಂತೆ ಅವಮಾನ ಮಾಡಲು ಡ್ವಿ ಸ್ಸುಲಾರ್ಟೊ ಚಿಲ್ಲರೆ ಹಣವನ್ನು ನೀಡುತ್ತಿದ್ದಾರೆ ಎಂದು ವಿಚ್ಛೇದಿತ ಮಹಿಳೆ ಆರೋಪಿಸಿದ್ದಾರೆ. ಕೊನೆಗೆ ಚಿಲ್ಲರೆ ಹಣವನ್ನು ಏಣಿಕೆ ಮಾಡುವಂತೆ ನ್ಯಾಯಾಲಯವು ತನ್ನ ಸಿಬ್ಬಂದಿಗೆ ಸೂಚನೆ ನೀಡಿತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv