ಜಕಾರ್ತ: ಭೂಕಂಪನದಿಂದ ಮಸೀದಿಯ ಕಟ್ಟಡ ಅಲುಗಾಡುತ್ತಿದ್ದರೂ ಇಮಾಮ್ (ಮುಸ್ಲಿಂ ಧರ್ಮಗುರು) ನಮಾಜ್ ಪೂರ್ಣಗೊಳಿಸಿರುವ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂಡೊನೇಶಿಯಾದ ಲೋಮಬೋಕ್ ದ್ವೀಪದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಲೋಮಬೋಕ್‍ನಲ್ಲಿ ಭೂಕಂಪ ಅವಘಡ ಸಂಭವಿಸುತ್ತಿದ್ದ ವೇಳೆ ಸ್ಥಳೀಯ ಮಸೀದಿಯಲ್ಲಿ ನಮಾಜ್ ನಡೆಯುತ್ತಿತ್ತು. ಭೂಮಿ ಕಂಪಿಸಲು ಆರಂಭಿಸುತ್ತಿದ್ದಂತೆ ನಮಾಜ್ ನಲ್ಲಿ ನಿರತರಾಗಿದ್ದ ಹಲವರು ಜೀವ ಉಳಿಸಿಕೊಳ್ಳಲು ಮಸೀದಿಯಿಂದ ಹೊರ ಬಂದಿದ್ದಾರೆ. ಪ್ರಾರ್ಥನೆ ಮಾಡಿಸುತ್ತಿದ್ದ ಇಮಾಮ್ ಎಲ್ಲಿಯೂ ನಿಯತ್ (ಧ್ಯಾನ) ಬಿಡದೇ ಗೋಡೆಯನ್ನು ಆಸರೆಯಾಗಿ ಹಿಡಿದುಕೊಂಡೆ ನಮಾಜ್ ಪೂರ್ಣ ಮಾಡಿದ್ದಾರೆ. ಇಮಾಮ್ ರನ್ನು ನೋಡಿ ಓಡಿ ಹೋದವರು ಮತ್ತೆ ಬಂದು ನಮಾಜ್ ಮಾಡಲು ಆರಂಭಿಸಿದ್ದಾರೆ. ಈ ಎಲ್ಲ ದೃಶ್ಯಗಳು ಮಸೀದಿಯ ಒಳಗಡೆ ಹಾಕಲಾಗಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ಜುಲೈ 29ರಂದು ಇಂಡೊನೇಶಿಯಾದ ಲೋಮಬೋಕ್ ನಲ್ಲಿ ತೀವ್ರ ಪ್ರಮಾಣದಲ್ಲಿ ಭೂಕಂಪ ಸಂಭವಿಸಿತ್ತು. ಭೂಕಂಪದ ಬಳಿಕ ಸುಮಾರು 20 ಸಾವಿರ ಜನರು ನಿರಾಶ್ರಿತರಾಗಿದ್ದು, ಲೋಮಬೋಕ್ ನಗರದ ಅರ್ಧಕ್ಕಿಂತ ಹೆಚ್ಚು ಕಟ್ಟಡಗಳು ನೆಲಸಮಗೊಂಡಿವೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ ಭಾನುವಾರ 6.9 ದಾಖಲಾಗಿತ್ತು. ಭಾನುವಾರದ ನಂತರವೂ ಲೋಮಬೋಕ್‍ನಲ್ಲಿ ಹಲವು ಬಾರಿ ಭೂಮಿ ಕಂಪಿಸಿದ್ದು, 5.3 ರಷ್ಟು ತೀವ್ರತೆ ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews