ಜಕಾರ್ತ: ಜೂನ್ 18ರ ಸೂಪರ್ ಸಂಡೇನಲ್ಲಿ ನಡೆದ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ (Indonesia Open Badminton) ವಿಶ್ವಟೂರ್ ಸೂಪರ್-1000 ಈವೆಂಟ್‌ನ (Super 1000 Event) ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಮೂಲಕ ಸೂಪರ್-1000 ಈವೆಂಟ್‌ನ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ (Commonwealth Games) ಚಿನ್ನದ ಪದಕ ಮತ್ತು 2022ರ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ವಿಶ್ವದ ನಂ.6 ಜೋಡಿ, ಜಕಾರ್ತದಲ್ಲಿ ನಡೆದ ಟೂರ್ನಿಯಲ್ಲಿ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕಾ ಜೋಡಿಯನ್ನು 21-17, 21-18 ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇದನ್ನೂ ಓದಿ: ಮಹಿಳೆಯರ ಜೂನಿಯರ್ ಏಷ್ಯಾ ಕಪ್ – ಚೊಚ್ಚಲ ಟ್ರೋಫಿ ಗೆದ್ದ ಭಾರತ
ಇದಕ್ಕೂ ಮುನ್ನ ಶನಿವಾರ ಈ ಜೋಡಿ ದಕ್ಷಿಣ ಕೊರಿಯಾದ ಕಾಂಗ್ ಮಿನ್ ಹ್ಯುಕ್-ಸಿಯೊ ಸೆಯುಂಗ್ ಜೇ ಜೋಡಿಯನ್ನು 17-21, 21-19, 21-18 ಸೆಟ್‌ಗಳಿಂದ ಸೋಲಿಸಿ ಫೈನಲ್ ತಲುಪಿತ್ತು. ಏಷ್ಯನ್ ಚಾಂಪಿಯನ್‌ಶಿಪ್ ವಿಜೇತರೂ ಆಗಿರುವ ಭಾರತೀಯ ಜೋಡಿ 43 ನಿಮಿಷಗಳಲ್ಲಿ ಹಾಲಿ ವಿಶ್ವ ಚಾಂಪಿಯನ್ನರಿಗೆ ಮಣ್ಣುಮುಕ್ಕಿಸಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಇದನ್ನೂ ಓದಿ: ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನ – ರಣರೋಚಕ ಪಂದ್ಯಕ್ಕಾಗಿ ಕಾಯ್ತಿದ್ದಾರೆ ಫ್ಯಾನ್ಸ್
ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ವಿಶ್ವ ಟೂರ್ ಅನ್ನು ವರ್ಲ್ಡ್ ಟೂರ್ ಫೈನಲ್ಸ್, ಫೋರ್ ಸೂಪರ್ 1000, ಸಿಕ್ಸ್ ಸೂಪರ್ 750, ಸೆವೆನ್ ಸೂಪರ್ 500, ಮತ್ತು ಲೆವೆನ್ ಸೂಪರ್ 300 ಹಾಗೂ BWF ಟೂರ್ ಸೂಪರ್-100 6 ಹಂತಗಳಾಗಿ ವಿಭಾಗಿಸಿದೆ. ಈ ಹಂತಗಳಲ್ಲಿ ಶ್ರೇಯಾಂಕಗಳನ್ನ ನೀಡಲಾಗುತ್ತದೆ. ಪ್ರತಿ ಟೂರ್ನಿಯಲ್ಲಿ ವಿಭಿನ್ನ ರೀತಿಯ ರ‍್ಯಾಂಕಿಂಗ್ ಪಾಯಿಂಟ್ಸ್ ಹಾಗೂ ಬಹುಮಾನ ಮೊತ್ತ ನೀಡಲಾಗುತ್ತದೆ. ಅದೇ ರೀತಿ ಸೂಪರ್ 1000 ಹಂತದಲ್ಲಿ ಅಧಿಕ ರ‍್ಯಾಂಕಿಂಗ್ ಪಾಯಿಂಟ್ಸ್ ಹಾಗೂ ಬಹುಮಾನದ ಮೊತ್ತ ಸಿಗಲಿದೆ.