ಜಕಾರ್ತಾ: ವಿಶ್ವಾದ್ಯಂತ ಚಿತ್ರ-ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ. ಕೆಲವೊಂದು ಪದ್ಧತಿಗಳ ಆಚರಣೆ ನೋಡಿದರೆ ಈ ರೀತಿಯೂ ಇರುತ್ತಾ ಎಂದು ನಿಮಗೆ ಅನಿಸದೇ ಇರಲಾರದು. ಇದೇ ರೀತಿ ಇಂಡೋನೇಷ್ಯಾದಲ್ಲಿ ವಿಚಿತ್ರ ಉತ್ಸವ ನಡೆಯುತ್ತೆ. ಇಲ್ಲಿ ವಿವಾಹಿತ ಮಹಿಳೆಯರು ಪರ ಪುರುಷರೊಟ್ಟಿಗೆ ಮಲಗುತ್ತಾರೆ.
ಹೌದು. ಇದ್ಯಾವುದಪ್ಪ ವಿಚಿತ್ರ ಪದ್ಧತಿ ಎಂದು ಅಚ್ಚರಿಯಾಗಬಹುದು. ಆದರೆ ಇಂತಹದೊಂದು ಪದ್ಧತಿ 16 ನೇ ಶತಮಾನದಿಂದಲೂ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ದ್ವೀಪದಲ್ಲಿ ಇರುವ ವಿವಾಹಿತ ಮಹಿಳೆಯರು ವರ್ಷದಲ್ಲಿ 7 ದಿನ ಪರಪುರುಷನ ಜೊತೆ ಲೈಂಗಿಕ ಸಂಬಂಧ ಬೆಳೆಸುತ್ತಾರೆ.
ಬಾಲಿ ದ್ವೀಪದಲ್ಲಿ ಪ್ರತಿ ವರ್ಷ ಉತ್ಸವವೊಂದು ನಡೆಯುತ್ತದೆ. ಇದಕ್ಕೆ ಪೋನ್ ಉತ್ಸವ ಎನ್ನುತ್ತಾರೆ. ದ್ವೀಪದ ಪರ್ವತಗಳ ಮೇಲೆ ನಡೆಯುವ ಈ ಉತ್ಸವ ಹಳೆ ಸಂಪ್ರದಾವಾಗಿದ್ದರೂ ಈಗಲೂ ಇಲ್ಲಿನ ಮಹಿಳೆಯರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ಈ ಉತ್ಸವದಲ್ಲಿ ಮದುವೆಯಾದ ಮಹಿಳೆಯರು ಅಪರಿಚಿತ ಪುರುಷನ ಜೊತೆ ಸಂಬಂಧ ಬೆಳೆಸುತ್ತಾರೆ. ಆದರೆ ಮಹಿಳೆಯರ ಗಂಡಂದಿರು ಇದಕ್ಕೆ ಅಡ್ಡಿಪಡಿಸುವುದಿಲ್ಲ.
16ನೇ ಶತಮಾನದಿಂದಲೂ ಈ ಪದ್ಧತಿ ರೂಢಿಯಲ್ಲಿದೆ. ಮಹಿಳೆ ಹಾಗೂ ಪರಪುರುಷನ ಜೀವನ ಈ ಪದ್ಧತಿ ಅನುಸರಿಸುವುದರಿಂದ ಸುಖಕರವಾಗಿರುತ್ತದೆ. ಕುಟುಂಬದ ಸುಖ-ಸಂತೋಷಕ್ಕೆ ಇದು ಕಾರಣವಾಗುತ್ತದೆ ಎಂದು ಇಲ್ಲಿನ ಜನರು ನಂಬಿದ್ದಾರೆ.
16ನೇ ಶತಮಾನದಲ್ಲಿ ಇಲ್ಲಿದ್ದ ರಾಜನಿಗೆ ಮಲತಾಯಿಯ ಮೇಲೆ ಪ್ರೀತಿ ಹುಟ್ಟಿತ್ತಂತೆ. ಇಬ್ಬರೂ ಲೈಂಗಿಕ ಸಂಬಂಧ ಬೆಳೆಸಿದ್ದರು. ಬಂಧದಲ್ಲಿ ತಾಯಿ-ಮಗನಾಗಿದ್ದವರು ಸಂಬಂಧ ಬೆಳೆಸಿ ಪಾಪ ಮಾಡಿದ್ದಾರೆ ಎಂದು ಇಬ್ಬರನ್ನೂ ಹತ್ಯೆ ಮಾಡಲಾಗಿತ್ತು. ಆದರೆ ಅವರಿಬ್ಬರು ಅತೃಪ್ತ ಆತ್ಮಗಳಾಗಿದ್ದಾರೆ. ಹೀಗಾಗಿ ವಿವಾಹಿತ ಮಹಿಳೆ ಪರಪುರುಷನ ಜೊತೆ ಮಲಗುವುದು ಪಾಪವಾದರೂ ಕೂಡ ಹೀಗೆ ಮಾಡುವುದರಿಂದ ರಾಜ ಹಾಗೂ ಆತನ ಮಲತಾಯಿ ಆತ್ಮಕ್ಕೆ ಶಾಂತಿ ಸಿಗುತ್ತದೆ. ಆಗ ಅವರಿಬ್ಬರು ಆಶೀರ್ವಾದ ಮಾಡುತ್ತಾರೆ. ಇದರಿಂದ ದಾಂಪತ್ಯ ಜೀವನದಲ್ಲಿ ಸುಖ-ಸಂತೋಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಈಗಲೂ ಮಹಿಳೆಯರು ಅಪರಿಚಿತ ಪುರುಷನ ಜೊತೆ ಸಂಬಂಧ ಬೆಳೆಸುತ್ತಾರೆ.