ಜಕಾರ್ತ: ಇಸ್ಲಾಮಿಕ್ ಪ್ರಾರ್ಥನೆ (Islamic Prayer) ಬಳಿಕ ಹಂದಿ ಮಾಂಸ ತಿಂದ ಟಿಕ್ ಟಾಕ್ ಸ್ಟಾರ್ ಲೀನಾ ಮುಖರ್ಜಿಗೆ ಇಂಡೋನೇಷ್ಯಾ ನ್ಯಾಯಾಲಯವು (Indonesia Court) 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
33 ವರ್ಷದ ಮಹಿಳೆಗೆ 2 ವರ್ಷ ಜೈಲು (Jail) ಶಿಕ್ಷೆ ವಿಧಿಸಿದ್ದು, ಇದರೊಂದಿಗೆ 16,245 ಡಾಲರ್ (13.47 ಲಕ್ಷ ರೂ.) ದಂಡ ವಿಧಿಸಿದೆ. ನಿಗದಿತ ಅವಧಿಯಲ್ಲಿ ದಂಡ ಪಾವತಿಸದೇ ಇದ್ದರೆ ಇನ್ನೂ 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸುವುದಾಗಿ ಕೋರ್ಟ್ ಹೇಳಿದೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಭಾರತವನ್ನ ಪ್ರಚೋದಿಸುವುದಿಲ್ಲ; ತಣ್ಣಗಾದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ
Advertisement
Advertisement
ಬಾಲಿಯಲ್ಲಿ 33 ವರ್ಷದ ಲೀನಾ ಮುಖರ್ಜಿ ಅವರು ಕಳೆದ ಮಾರ್ಚ್‌ನಲ್ಲಿ ಬಿಸ್ಮಿಲ್ಲಾ ಪ್ರಾರ್ಥನೆ ಬಳಿಕ ಹಂದಿ ಮಾಂಸ ತಿಂದ ವಿಡಿಯೊ ವೈರಲ್ ಆಗುತ್ತಲೇ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲೂ, ಇಸ್ಲಾಂನಲ್ಲಿ ಹಂದಿ ಮಾಂಸವು ನಿಷಿದ್ಧವಾಗಿರುವ ಕಾರಣ ಲೀನಾ ಮುಖರ್ಜಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಧರ್ಮ ನಿಂದನೆಯ ಆರೋಪದಲ್ಲಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
Advertisement
Advertisement
ಕೋರ್ಟ್ ಹೇಳಿದ್ದೇನು?
ಧಾರ್ಮಿಕ ಆಚಾರ-ವಿಚಾರಗಳನ್ನು ನಂಬುವವರು ಹಾಗೂ ಒಂದು ನಿಗದಿತ ಸಮುದಾಯದ ಜನರ ವಿರುದ್ಧ ದ್ವೇಷ ಹರಡಿಸುವ ಉದ್ದೇಶದಿಂದ ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಲೀನಾ ಮುಖರ್ಜಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಪಾಲೆಮ್‌ಬಾಂಗ್ ನ್ಯಾಯಾಲಯವು ತಿಳಿಸಿದೆ. ಇದನ್ನೂ ಓದಿ: RSS ಭಾರತದ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು INDIA ಬಣ ಬಿಡಲ್ಲ: ರಾಹುಲ್ ಗಾಂಧಿ
ಇಸ್ಲಾಮಿಕ್ ರಾಷ್ಟ್ರವಾಗಿರುವ ಇಂಡೋನೇಷ್ಯಾದಲ್ಲಿ ಧರ್ಮನಿಂದನೆಯ ಕಾನೂನುಗಳು ಬಲಿಷ್ಠವಾಗಿವೆ. ಪ್ರವಾದಿ ಮೊಹಮ್ಮದ್ ಹೆಸರಿನಲ್ಲಿ ಜನರಿಗೆ ಉಚಿತವಾಗಿ ಮದ್ಯ ಹಂಚುತ್ತಿದ್ದ 6 ಜನರನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು.
Web Stories