ಜಕಾರ್ತ: ವಿಹಾಹ ಪೂರ್ವ ಸೆಕ್ಸ್ (Premarital Sex) ತಡೆಯಲು ಇಂಡೋನೇಷ್ಯಾ ಸರ್ಕಾರ (Indonesia Government) ಹೊಸ ಕ್ರಿಮಿನಲ್ ಕಾನೂನು (Criminal Code) ಅಂಗೀಕರಿಸಿದ್ದು, ದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
Advertisement
ಈ ಕಾನೂನು ವಿವಾಹಪೂರ್ವ ಲೈಂಗಿಕತೆ ಹಾಗೂ ಸಹಬಾಳ್ವೆಯನ್ನು ಕಾನೂನುಬಾಹಿರಗೊಳಿಸುತ್ತದೆ. ಜೊತೆಗೆ ಆಗ್ನೇಯ ಏಷ್ಯಾದಂತಹ ರಾಷ್ಟ್ರಗಳಲ್ಲಿ ಸ್ವಾತಂತ್ರ‍್ಯವನ್ನು ದುರ್ಬಲಗೊಳಿಸಬಹುದು. ಹೀಗಾಗಿ ಕಾನೂನನ್ನು ರದ್ದುಗೊಳಿಸುವಂತೆ ಪ್ರತಿಭಟನೆಗಳು ಎದ್ದಿವೆ. ಇದನ್ನೂ ಓದಿ: ವಿವಾಹಪೂರ್ವ ಸೆಕ್ಸ್ ಮಾಡಿದ್ರೆ 1 ವರ್ಷ ಜೈಲು – ಹೊಸ ಕಾನೂನು ಜಾರಿಗೆ ಇಂಡೋನೇಷ್ಯಾ ಸಜ್ಜು
Advertisement
Advertisement
ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ಹೊಸ ಕ್ರಿಮಿನಲ್ ಕಾನೂನು (Criminal Code), 1946 ರಲ್ಲಿ ಇಂಡೋನೇಷ್ಯಾ (Indonesia) ಸ್ವಾತಂತ್ರ‍್ಯದ ನಂತರ ಜಾರಿಯಲ್ಲಿದ್ದ ಚೌಕಟ್ಟನ್ನು ಮತ್ತೆ ಬದಲಾಯಿಸುತ್ತದೆ. ಈ ಕಾನೂನು ಇಂಡೋನೇಷ್ಯಾ ಜನರಿಗೆ ಮಾತ್ರವಲ್ಲದೇ ವಿದೇಶಿಯರಿಗೂ ಅನ್ವಯಿಸುತ್ತದೆ. ಅಲ್ಲದೇ ದೇಶದ ಅಧ್ಯಕ್ಷರು, ರಾಜ್ಯ ಸಂಸ್ಥೆಗಳು ಹಾಗೂ ದೇಶದ ರಾಷ್ಟ್ರೀಯ ಸಿದ್ಧಾಂತವನ್ನು ಅವಮಾನಿಸುತ್ತದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಇದನ್ನೂ ಓದಿ: ಸ್ವಂತ ಮಗಳು ಸೇರಿ 20ಕ್ಕೂ ಹೆಚ್ಚು ಯುವತಿಯರ ಮದುವೆ- ಸ್ವಘೋಷಿತ ಪ್ರವಾದಿ ಅರೆಸ್ಟ್
Advertisement
ಚರ್ಚೆಗೆ ಒಳಗಾದ ಪ್ರಮುಖ ವಿಷಯಗಳು ಹಾಗೂ ಭಿನ್ನ ಅಭಿಪ್ರಾಯಗಳನ್ನು ನಾವು ಸರಿಹೊಂದಿಸಲು ಪ್ರಯತ್ನಿಸುತ್ತೇವೆ. ದೇಶದ ದಂಡಸಂಹಿತೆಯ ತಿದ್ದುಪಡಿಯ ಬಗ್ಗೆ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲು ಹಾಗೂ ವಂಶ ಪಾರಂಪರ್ಯ ಕಾನೂನನ್ನು ಕೈಬಿಡಲು ಇದು ಸುಸಂದರ್ಭವಾಗಿದೆ ಎಂದು ಕಾನೂನು ಮತ್ತು ಮಾನವ ಹಕ್ಕುಗಳ ಸಚಿವ ಯಾಸೊನ್ನಾ ಲಾವೊಲಿ ಮತದಾನದ ಮೊದಲು ಸಂಸತ್ತಿಗೆ ತಿಳಿಸಿದರು. ಇದನ್ನೂ ಓದಿ: ಕ್ಯಾಂಪಸ್‌ನಲ್ಲಿ ಲವ್‌ಜಿಹಾದ್‌ಗೆ ಉತ್ತೇಜನ, ಸೇನೆಗೆ ಅಪಮಾನ – 6 ಶಿಕ್ಷಕರಿಗೆ ಪಾಠ ಮಾಡದಂತೆ ಸೂಚನೆ
ವಿವಾಹಪೂರ್ವ ಲೈಂಗಿಕತೆ ತಡೆ ಕಾನೂನು ರೂಪಿಸಲು 2019ರಲ್ಲಿ ಕರಡನ್ನು ಸಿದ್ದಪಡಿಸಲಾಗಿತ್ತು. ಆದರೆ ವ್ಯಾಪಕ ಪ್ರತಿಭಟನೆಗಳಿಂದಾಗಿ ಕಾನೂನು ರೂಪಿಸುವುದನ್ನು ಮುಂದೂಡಲಾಯಿತು. ಈ ಕಾನೂನು ಭಯದ ನಡುವೆ ವೈಯಕ್ತಿಕ ಸ್ವಾತಂತ್ರ‍್ಯವನ್ನು ಮೊಟಕುಗೊಳಿಸುತ್ತದೆ ಎಂದು ಪ್ರತಿಭಟನಾಕಾರರು ದೂರಿದ್ದರು. ಪ್ರತಿಭಟನೆಯಲ್ಲಿ ಸುಮಾರು 300 ಮಂದಿ ಗಾಯಗೊಂಡಿದ್ದರು.
ಕಳೆದ ಒಂದು ವಾರದ ಹಿಂದೆಯಷ್ಟೇ ಇಂಡೋನೇಷ್ಯಾ ಸರ್ಕಾರ ವಿವಾಹಪೂರ್ವ ಸೆಕ್ಸ್ ತಡೆಯಲು ಕಾನೂನು ರೂಪಿಸುತ್ತಿರುವುದಾಗಿ ಹೇಳಿ ಕರಡನ್ನು ಬಿಡುಗಡೆ ಮಾಡಿತ್ತು. ಈ ಕಾನೂನಿನ ಅನ್ವಯ ವಿವಾಹಕ್ಕೆ ಮುಂಚೆ ಸೆಕ್ಸ್ ಮಾಡಿದ್ರೆ, ಒಂದು ವರ್ಷ ಜೈಲು ಹಾಗೂ ಭಾರೀ ಮೊತ್ತದ ದಂಡ ವಿಧಿಸಬಹುದು ಎಂದು ಸರ್ಕಾರ ಹೇಳಿತ್ತು.