– ಯುವತಿಯರಿಗೆ ಅತಿ ಹತ್ತಿರವಾಗಿದ್ದ ಯುವಕನಿಗೆ ಥಳಿತ
ಜಕರ್ತಾ: ಕಠಿಣ ಕಾನೂನು ಉಲ್ಲಂಘಿಸಿ ಮದುವೆಗೂ ಮುನ್ನ ಸೆಕ್ಸ್ ಮಾಡಿದ್ದ 22 ವರ್ಷ ಯುವತಿ ಸೇರಿದಂತೆ ಮೂವರಿಗೆ ಛಾಟಿ ಏಟು ಕೊಟ್ಟ ಘಟನೆ ಇಂಡೊನೇಷ್ಯಾದಲ್ಲಿ ನಡೆದಿದೆ.
ಮುಸ್ಲಿಮರ ಪ್ರಾಬಲ್ಯವಿರುವ ಬಂದಾ ಅಚೆ ಪ್ರಾಂತ್ಯದಲ್ಲಿ ಶರಿಯಾ ಕಾನೂನು ಜಾರಿಗೆ ತರಲಾಗಿದೆ. ಈ ಕಾನೂನಿನ ಅನ್ವಯ ಜೂಜಾಟ, ಮದ್ಯಪಾನ ಹಾಗೂ ಸಲಿಂಗ ರತಿ ನಡೆಸುವವರು ಛಾಟಿಯೇಟಿನ ಶಿಕ್ಷೆಗೆ ಒಳಗಾಗುತ್ತಾರೆ. ಇಂತಹ ಕಠಿಣ ಶಿಕ್ಷೆಗೆ ಬುಧವಾದ ಗುರಿಯಾಗಿದ್ದ ಯುವತಿ ಛಾಟಿಯಿಂದ ಹೊಡೆಯದಂತೆ ಎಷ್ಟೇ ಬೇಡಿಕೊಂಡರೂ ಶಿಕ್ಷೆಯನ್ನು ನಿಲ್ಲಿಸಲಿಲ್ಲ. ಪರಿಣಾಮ ಯುವತಿ ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ವೈದ್ಯರು ಯುವತಿಯನ್ನು ತಪಾಸಣೆಗೆ ಒಳಪಡಿಸಿದರು. ಇದಾದ ಸ್ವಲ್ಪ ಸಮಯದಲ್ಲಿಯೇ ಛಾಟಿಯೇಟಿನ ಶಿಕ್ಷೆಯನ್ನು ಪುನರಾರಂಭಿಸಲಾಯಿತು.
Advertisement
Advertisement
ಸ್ಟೇಡಿಯಂ ಒಂದರಲ್ಲಿ ಮಹಿಳೆಯೊಬ್ಬರು ಹಲವಾರು ಮಂದಿ ಸಮ್ಮುಖದಲ್ಲೇ ಈ ಶಿಕ್ಷೆ ನೀಡಿದ್ದಾಳೆ. ಯುವತಿಯ ಜೊತೆಗೆ ಸಂಬಂಧ ಹೊಂದಿದ್ದ 22 ವರ್ಷದ ಯುವಕ ಕೂಡ 100 ಛಾಟಿ ಏಟಿನ ಶಿಕ್ಷೆಗೆ ಗುರಿಯಾಗಿದ್ದ. ಮತ್ತೊರ್ವ ಯುವಕ ಯುವತಿಯರಿಗೆ ಅತಿ ಹತ್ತಿರವಿದ್ದು ಶಿಕ್ಷೆಗೆ ಗುರಿಯಾಗಿದ್ದಾನೆ. ಅವಿವಾಹಿತ ಜೋಡಿಗಳು ಪರಸ್ಪರ ಮುಟ್ಟುವುದು, ಆಲಂಗಿಸುವುದು ಹಾಗೂ ಚುಂಬಿಸುವುದು ಇಸ್ಲಾಮಿಕ್ ಕಾನೂನಿನ ಪ್ರಕಾರ ಅಪರಾಧ.
Advertisement
ಷರಿಯಾ ಕಾನೂನು ಜಾರಿಗೆ ತಂದಿರುವ ವಿಶ್ವದ ಏಕೈಕ ಅತ್ಯಂತ ಹೆಚ್ಚು ಮುಸ್ಲಿಮರನ್ನು ಹೊಂದಿರುವ ದೇಶವಾಗಿರುವ ಇಂಡೋನೇಷ್ಯಾದ ಏಕೈಕ ಪ್ರಾಂತ್ಯ ಅಚೆ ಆಗಿದೆ. ಸುಮಾತ್ರ ದ್ವೀಪದಲ್ಲಿರುವ ಈ ಪ್ರಾಂತ್ಯದಲ್ಲಿ 2001ರಿಂದಲೂ ಷರಿಯಾ ಕಾನೂನು ಜಾರಿಯಲ್ಲಿದೆ.
Advertisement
ಈ ಹಿಂದೆ 22 ವರ್ಷದ ಯುವತಿಯೊಬ್ಬಳು ಛಾಟಿಯೇಟಿನ ಶಿಕ್ಷೆಗೆ ಗುರಿಯಾಗಿದ್ದಳು. ಆದರೆ ಆಕೆ ಗರ್ಭಿಣಿಯಾಗಿದ್ದರಿಂದ ಮಗುವಿಗೆ ಜನ್ಮ ನೀಡಿದ ಬಳಿಕ ಛಾಟಿಯೇಟು ನೀಡುವುದಾಗಿ ತಿಳಿಸಿ ಶಿಕ್ಷೆಯನ್ನು ಮುಂದೂಡಲಾಗಿತ್ತು. ಈ ವೇಳೆ ಒಟ್ಟು ಆರು ಜನರಿಗೆ ಶಿಕ್ಷೆ ನೀಡಲಾಗಿತ್ತು.
ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಇಂಡೋನೇಷ್ಯಾದ ಅಧ್ಯಕ್ಷರು ಖಂಡಿಸಿದ್ದಾರೆ. ಪಾಕಿಸ್ತಾನ, ಸೌದಿ ಅರೇಬಿಯಾ, ನೈಜಿರಿಯಾ ಸೇರಿದಂತೆ ಹಲವು ದೇಶಗಳಲ್ಲಿ ಈಗಲೂ ಇಸ್ಲಾಂ ಕಾನೂನುಗಳು ಜಾರಿಯಲ್ಲಿದೆ.